3 ಕ್ಷೇತ್ರಗಳ ಉಪ ಚುನಾವಣೆ : ಪಕ್ಷಗಳ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು, ಜನವರಿ 27 : ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿವೆ. ಮೊದಲು ದೇವದುರ್ಗ ಕ್ಷೇತ್ರದ ಅಭ್ಯರ್ಥಿಯನ್ನು ಮಾತ್ರ ಘೋಷಣೆ ಮಾಡಿದ್ದ ಜೆಡಿಎಸ್, ಕೊನೆ ಕ್ಷಣದಲ್ಲಿ ಬೀದರ್, ಹೆಬ್ಬಾಳ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿಯ ಜಗದೀಶ್ ಕುಮಾರ್ (ಹೆಬ್ಬಾಳ), ಕೆಜೆಪಿಯ ಗುರುಪಾದಪ್ಪ ನಾಗಮಾರಪಲ್ಲಿ (ಬೀದರ್) ಮತ್ತು ಕಾಂಗ್ರೆಸ್‌ನ ವೆಂಕಟೇಶ ನಾಯಕ್ (ದೇವದುರ್ಗ) ಅವರ ಅಕಾಲಿಕ ಮರಣದಿಂದಾಗಿ 3 ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿದೆ. [ಹೆಬ್ಬಾಳ ಟಿಕೆಟ್ : ಸಿದ್ದರಾಮಯ್ಯಗೆ ಮುಖಭಂಗ]

ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಕೊನೆ ಕ್ಷಣದ ತನಕ ಮೌನವಾಗಿದ್ದ ರಾಜಕೀಯ ಪಕ್ಷಗಳು ಜನವರಿ 25, 26ರಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಮೂರು ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಜನವರಿ 27ರ ಬುಧವಾರ ಕೊನೆಯ ದಿನವಾಗಿದೆ. [ಉಪ ಚುನಾವಣೆ ವೇಳಾಪಟ್ಟಿ]

ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಸಾಕಷ್ಟು ಗೊಂದಲಗಳು ಏರ್ಪಟ್ಟಿದ್ದವು. ಬೀದರ್‌ನಲ್ಲಿ ಸೂರ್ಯಕಾಂತ ನಾಗಮಾರಪಲ್ಲಿ ಅವರಿಗೆ ಟಿಕೆಟ್ ಕೊಡಲು ಬಿಜೆಪಿ ತಯಾರಾಗಿತ್ತು. ಆದರೆ, ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಪ್ರಕಾಶ್‌ ಖಂಡ್ರೆ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಮೂರು ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳ ವಿವರಗಳು ಇಲ್ಲಿವೆ....

ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ ಮೂರು ಪಕ್ಷಗಳು

ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ ಮೂರು ಪಕ್ಷಗಳು

ಹೆಬ್ಬಾಳ, ದೇವದುರ್ಗ ಮತ್ತು ಬೀದರ್ ಕ್ಷೇತ್ರದ ಉಪ ಚುನಾವಣೆಗೆ ಮೂರು ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಮೊದಲು ದೇವದುರ್ಗ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದ ಜೆಡಿಎಸ್, ಕೊನೆ ಕ್ಷಣದಲ್ಲಿ ಹೆಬ್ಬಾಳ ಮತ್ತು ಬೀದರ್‌ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ

ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ

ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಭಾರೀ ಗೊಂದಲ ನಿರ್ಮಾಣವಾಗಿತ್ತು. ಜೆಡಿಎಸ್ ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಪ್ರಕಟಿಸಿ, ಚುನಾವಣಾ ಕಾವನ್ನು ಹೆಚ್ಚಿಸಿದೆ. ಅಭ್ಯರ್ಥಿಗಳ ಪಟ್ಟಿ...
* ಕಾಂಗ್ರೆಸ್ - ರೆಹಮಾನ್‌ ಷರೀಫ್‌
* ಬಿಜೆಪಿ - ವೈ.ನಾರಾಯಣ ಸ್ವಾಮಿ
* ಜೆಡಿಎಸ್ - ಇಸ್ಮಾಯಿಲ್‌ ಷರೀಫ್‌ [ಚಿತ್ರ : ರೆಹಮಾನ್ ಷರೀಫ್]

ಬೀದರ್ ಕ್ಷೇತ್ರದ ಅಭ್ಯರ್ಥಿಗಳು

ಬೀದರ್ ಕ್ಷೇತ್ರದ ಅಭ್ಯರ್ಥಿಗಳು

* ಕಾಂಗ್ರೆಸ್ - ರಹೀಂಖಾನ್
* ಬಿಜೆಪಿ - ಪ್ರಕಾಶ್ ಖಂಡ್ರೆ
* ಜೆಡಿಎಸ್ - ಮಹಮ್ಮದ್‌ ಅಯಾಜ್‌ ಖಾನ್‌ [ಚಿತ್ರ : ಪ್ರಕಾಶ್ ಖಂಡ್ರೆ]

ದೇವದುರ್ಗ ಕ್ಷೇತ್ರದ ಅಭ್ಯರ್ಥಿಗಳು

ದೇವದುರ್ಗ ಕ್ಷೇತ್ರದ ಅಭ್ಯರ್ಥಿಗಳು

* ಕಾಂಗ್ರೆಸ್ - ರಾಜಶೇಖರ ನಾಯಕ್
* ಬಿಜೆಪಿ - ಶಿವನಗೌಡ ನಾಯಕ್
* ದೇವದುರ್ಗ - ಕರಿಯಮ್ಮ ನಾಯಕ್‌ [ಚಿತ್ರ : ಶಿವನಗೌಡ ನಾಯಕ್]

ಚುನಾವನಾ ವೇಳಾಪಟ್ಟಿ

ಚುನಾವನಾ ವೇಳಾಪಟ್ಟಿ

ಮೂರು ಕ್ಷೇತ್ರಗಳ ಉಪ ಚುನಾವಣೆಗೆ ನಾಮತ್ರಗಳನ್ನು ಸಲ್ಲಿಕೆ ಮಾಡಲು ಜನವರಿ 27ರ ಬುಧವಾರ ಕೊನೆಯ ದಿನವಾಗಿದೆ. ಜನವರಿ 28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜನವರಿ 30ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಫೆ.13ರಂದು ಮತದಾನ ನಡೆಯಲಿದ್ದು, ಫೆ.16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+