ಬೀದರ್ ಕ್ಷೇತ್ರದ ಹೊಸ ಶಾಸಕ ರಹೀಂ ಖಾನ್ ವ್ಯಕ್ತಿ ಚಿತ್ರ

Posted By:
Subscribe to Oneindia Kannada

ಬೆಂಗಳೂರು, ಫೆ. 16: ಎಲ್ಲಾ ಸಮಾಜದವರು ನನಗೆ ಮತ ಹಾಕಿದ್ದರಿಂದ ನಾನು ಗೆಲುವು ಸಾಧಿಸಲು ಸಾಧ್ಯವಾಯಿತು. ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸುತ್ತೇನೆ ಎಂದು ಬೀದರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಹೀಂ ಖಾನ್ ಪ್ರತಿಕ್ರಿಯಿದ್ದಾರೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿ, ಶಾಸಕರಾಗಿ ಮಾತ್ರವಲ್ಲದೇ ಸಹಕಾರಿ ಕ್ಷೇತ್ರದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಗುರುಪಾದಪ್ಪ ನಾಗಮಾರಪ್ಪಲ್ಲಿ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಶಾಸಕಾಗಿ ರಹೀಂ ಖಾನ್ ಅವರು ಆಯ್ಕೆಯಾಗಿದ್ದಾರೆ.[ಸಿದ್ದರಾಮಯ್ಯಗೆ ತೀವ್ರ ಮುಖಭಂಗ, ಟೈಂ ಸರಿ ಇಲ್ಲ ಕಂಡ್ರಿ!]

ಬೀದರ್ ಕ್ಷೇತ್ರದ ಫಲಿತಾಂಶ 15ನೇ ಸುತ್ತಿನ ಬಳಿಕ : ಕಾಂಗ್ರೆಸ್‌ನ ರಹೀಂ ಖಾನ್ 48,926, ಬಿಜೆಪಿಯ ಪ್ರಕಾಶ್ ಖಂಡ್ರೆ ಅವರು 29, 960, ಮತ್ತು ಜೆಡಿಎಸ್‌ನ ಮೊಹಮದ್ ಅಯಾಜ್ 2698 ಮತಗಳನ್ನು ಪಡೆದಿದ್ದರು.

ಕೊನೆಗೆ ಆಡಳಿತ ಪಕ್ಷಕ್ಕೆ ಮುಖಭಂಗ ತಪ್ಪಿಸಿದ ರಹೀಂ ಖಾನ್ ಪ್ರಕಾಶ್ ಖಂಡ್ರೆ ಅವರು ಪಡೆದ ಮತಗಳಿಗಿಂತ ದುಪ್ಪಟ್ಟು ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದ್ದಾರೆ. ಹೆಬ್ಬಾಳ ಹಾಗೂ ದೇವದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನೆಲಕಚ್ಚಿದೆ.

ರಹೀಂ ಖಾನ್, ಮನೆಯವರು, ಮನೆ ವಿಳಾಸ

ರಹೀಂ ಖಾನ್, ಮನೆಯವರು, ಮನೆ ವಿಳಾಸ

ರಹೀಂ ಖಾನ್ s/o ಮಹಮ್ಮದ್ ಖಾನ್
ವಯಸ್ಸು : 50
ವಿಳಾಸ: ಮನೆ ಸಂಖ್ಯೆ 9-5-162, ವಿವೇಕಾನಂದ ನಗರ ಚಿದ್ರಿ ರಸ್ತೆ, ಬೀದರ್
ಇ ಮೇಲ್: rahimmlabidar@gmail.com
ವೃತ್ತಿ: ಸಮಾಜ ಸೇವಕ, ಶಿಕ್ಷಣ ಸುಧಾರಕ, ಕೃಷಿ
ವಿದ್ಯಾರ್ಹತೆ: ಪಿಯುಸಿ, ಬೀದರ್ ಸರ್ಕಾರಿ ಕಾಲೇಜು 1985 ಪಾಸ್ ವಿಜ್ಞಾನ ವಿಷಯ

ಆದಾಯ ತೆರಿಗೆ ರಿಟರ್ನ್ಸ್ ವಿವರ

ಆದಾಯ ತೆರಿಗೆ ರಿಟರ್ನ್ಸ್ ವಿವರ

2012-13ರ ಅವಧಿಯಲ್ಲಿ 19,60,854 ~ 19ಲಕ್ಷ ರು ಆದಾಯ ತೆರಿಗೆ ರಿಟರ್ನ್ಸ್ ಮಾಡಿದ್ದಾರೆ.
ಪತ್ನಿ 8,82,646 ಲಕ್ಷ ರು
ಡಿಪೆಂಡೆಂಟ್ 2,80,500 ಲಕ್ಷ ರು

ಒಟ್ಟು ಆಸ್ತಿ ವಿವರ

ಒಟ್ಟು ಆಸ್ತಿ ವಿವರ

ಒಟ್ಟು ಆಸ್ತಿ ವಿವರ 6,99,34,931 ರು (6 ಪ್ಲಸ್ ಕೋಟಿ ರು)
ಚರಾಸ್ಥಿ 1,07,34,931 ಕೋಟಿ ರು
ಸ್ಥಿರಾಸ್ತಿ : 5,92,00,000 ರು
ಯಾವುದೇ ಸಾಲ ಸೋಲ ಮಾಡಿಕೊಂಡಿಲ್ಲ, ಯಾವುದೇ ಕ್ರಿಮಿನಲ್ ಕೇಸ್ ಬಾಕಿ ಇಲ್ಲ

ಬಿಜೆಪಿ ತೀವ್ರ ಪೈಪೋಟಿ ನಿರೀಕ್ಷೆ ಯಿತ್ತು

ಬಿಜೆಪಿ ತೀವ್ರ ಪೈಪೋಟಿ ನಿರೀಕ್ಷೆ ಯಿತ್ತು

ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಹೀಂಖಾನ್, ಬಿಜೆಪಿಯ ಪ್ರಕಾಶ್ ಖಂಡ್ರೆ, ಜೆಡಿಎಸ್‌ನ ಎಂ.ಡಿ.ಅಯಾಜ್ ಖಾನ್ ಕಣದಲ್ಲಿರುವ ಪ್ರಮುಖರಾಗಿದ್ದರು. ಪ್ರಕಾಶ್ ಖಂಡ್ರೆ ಅವರ ಪರ ಬಿಜೆಪಿ ಹಿರಿಯ ನಾಯಕರು ಪ್ರಚಾರ ನಡೆಸಿದ್ದರು. ಆದರೆ, ಬಿಜೆಪಿಗೆ ರೆಬೆಲ್ ಆಗಿ ಕರ್ನಾಟಕ ಜನತಾ ಪಕ್ಷದ ನಾಯಕರಾಗಿ ಶಾಸಕರಾಗಿ ಸಹಕಾರಿ ಕ್ಷೇತ್ರದ ಧುರೀಣರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಗಳಿಸಿದ್ದ ಹೆಸರಿನ ಬಲ ಪಡೆದುಕೊಳ್ಳುವಲ್ಲಿ ಬಿಜೆಪಿ ವಿಫಲವಾಯಿತು. ರೆಹಮಾನ್ ಖಾನ್ ಪರ ಎಲ್ಲಾ ಸಮುದಾಯದವರ ಮತಗಳು. ಶಿಕ್ಷಣ ಕ್ಷೇತ್ರದ ಮತಗಳು ಹರಿದು ಬಂದಿದ್ದು ಗೆಲುವಿಗೆ ಕಾರಣವಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bidar Constituency congress MLA Raheem Khan Profile. It was a setback for CM Siddaramaiah led Congres government as BJP secured huge victory in 2 out of 3 by election results announced today (Feb 16).
Please Wait while comments are loading...