ದೇವನಳ್ಳಿ ವಿ.ನಿಲ್ದಾಣಕ್ಕೆ ಹೈಸ್ಪೀಡ್ ರೈಲು ಇಲ್ಲ: ಸಚಿವ ರೆಡ್ಡಿ

ಬೆಂಗಳೂರು, ಅ.19: ರಾಜಧಾನಿಯ 'ನಮ್ಮ ಮೆಟ್ರೋ' ಕಾಮಗಾರಿಗೆ ಒಂದಷ್ಟು ವೇಗ ಬಂದಿದ್ದು, ಮೊದಲ ಹಂತದ 42 ಕಿಮೀ ಮಾರ್ಗದಲ್ಲಿ ಮೆಟ್ರೋ ರೈಲು 2015ರ ಆಗಸ್ಟ್ ವೇಳೆಗೆ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ತಿಳಿಸಿದ್ದಾರೆ.

ನಿನ್ನೆ ಗುರುವಾರ ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಚಿವ ದಿನೇಶ್ ಗುಂಡೂರಾವ್, ಸಂಸದ ಅನಂತಕುಮಾರ್, ಮೇಯರ್ ಕಟ್ಟೆ ಸತ್ಯನಾರಾಯಣ, ಪಾಲಿಕೆಯ ಕೆಲ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶಿವಶಂಕರ್ ವೃತ್ತದಿಂದ ಸಿಟಿ ಮಾರುಕಟ್ಟೆವರೆಗಿನ 'ಮೆಟ್ರೊ' ಸುರಂಗ ಮಾರ್ಗ ವೀಕ್ಷಣೆ ಕಾರ್ಯಕ್ರಮವೇರ್ಪಟ್ಟಿತ್ತು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರದಿಂದ ಸಂಪರ್ಕ ಕಲ್ಪಿಸುವ ಪ್ರಸ್ತಾವಿತ High Speed Rail Link (HSRL) ಯೊಜನೆಯನ್ನು ಕೈಬಿಡಲಾಗಿದೆ. ಯೋಜನೆ ದುಬಾರಿಯಾಗಿದ್ದು, ಸಾಧ್ಯಾಸಾಧ್ಯತೆ ಪರಿಶೀಲಿಸಿದಾಗ ಅದು ನಿಷ್ಪ್ರಯೋಜಕವೆಂದು ತಿಳಿದುಬಂದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಆದರೆ ನಮ್ಮ ಮೆಟ್ರೋ ರೈಲನ್ನು BIALವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಮಾರ್ಗವನ್ನು 44 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸಿಟಿ ಮಾರುಕಟ್ಟೆ-ಚಿಕ್ಕಪೇಟೆ ಸುರಂಗ ಮಾರ್ಗ ಕಾರ್ಯ ಆರಂಭ

ಸಿಟಿ ಮಾರುಕಟ್ಟೆ-ಚಿಕ್ಕಪೇಟೆ ಸುರಂಗ ಮಾರ್ಗ ಕಾರ್ಯ ಆರಂಭ

'ನಮ್ಮ ಮೆಟ್ರೋ ಮೊದಲ ಹಂತದಲ್ಲಿ 8.8 ಕಿಮೀ ಉದ್ದದ ಸುರಂಗ ಮಾರ್ಗದ ಪೈಕಿ ಈಗಾಗಲೇ ಪೂರ್ವ- ಪಶ್ಚಿಮ ಕಾರಿಡಾರಿನಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಉತ್ತರ- ದಕ್ಷಿಣ ಸುರಂಗ ಕಾರಿಡಾರ್ ಕಾಮಗಾರಿ ಇನ್ನಷ್ಟು ಚುರುಕುಗೊಳ್ಳಬೇಕಿದೆ. ಕೆಆರ್ ರಸ್ತೆ ಯಿಂದ ಸಿಟಿ ಮಾರುಕಟ್ಟೆ ನಿಲ್ದಾಣದವರೆಗೆ ಸುರಂಗ ಮಾರ್ಗವೂ ಪೂರ್ಣಗೊಂಡಿದೆ. ಸಿಟಿ ಮಾರುಕಟ್ಟೆ ನಿಲ್ದಾಣದಿಂದ ಚಿಕ್ಕಪೇಟೆ ನಿಲ್ದಾಣವರೆಗಿನ 435 ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಿದೆ.

ಮೆಜೆಸ್ಟಿಕ್‌ ಸುರಂಗ ಮಾರ್ಗ ಆಗಸ್ಟಿನಿಂದ ಆರಂಭ

ಮೆಜೆಸ್ಟಿಕ್‌ ಸುರಂಗ ಮಾರ್ಗ ಆಗಸ್ಟಿನಿಂದ ಆರಂಭ

ಸುರಂಗ ಕೊರೆಯುವ ಯಂತ್ರವು ದಿನಕ್ಕೆ ಸರಾಸರಿ ಐದು ಮೀಟರ್ ಕ್ರಮಿಸುತ್ತದೆ. ಅದರಂತೆ ಫೆಬ್ರುವರಿ ವೇಳೆಗೆ ಚಿಕ್ಕಪೇಟೆವರೆಗಿನ ಸುರಂಗ ಮಾರ್ಗ ಪೂರ್ಣಗೊಳ್ಳಲಿದೆ. ಉಳಿದ 742 ಮೀಟರ್ ಅಂತರದ ಸುರಂಗ ಮಾರ್ಗ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಆಗಸ್ಟ್ ವೇಳೆಗೆ ಮೆಜೆಸ್ಟಿಕ್‌ ವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ.

ಜಕ್ಕರಾಯನಕೆರೆ ಮೈದಾನ- ಮೆಜೆಸ್ಟಿಕ್‌ ಕಾಮಗಾರಿ ಆರಂಭ

ಜಕ್ಕರಾಯನಕೆರೆ ಮೈದಾನ- ಮೆಜೆಸ್ಟಿಕ್‌ ಕಾಮಗಾರಿ ಆರಂಭ

ಇನ್ನೊಂದೆಡೆ ಜಕ್ಕರಾಯನಕೆರೆ ಮೈದಾನದಿಂದ ಮೆಜೆಸ್ಟಿಕ್‌ ವರೆಗೆ ಸುರಂಗ ಮಾರ್ಗದ ಕಾಮಗಾರಿ ಆರಂಭವಾಗಿದೆ. ಬಳಿಕ ಮೆಜೆಸ್ಟಿಕ್‌ ನಿಂದ ರೈಲ್ವೆ ನಿಲ್ದಾಣ ಮಾರ್ಗವಾಗಿ ಮಾಗಡಿ ರಸ್ತೆವರೆಗಿನ ಸುರಂಗ ಮಾರ್ಗದ ಕಾಮಗಾರಿ ಆರಂಭವಾಗಲಿದೆ. ಸೆಪ್ಟೆಂಬರ್‌ ನಿಂದ ಹಳಿ ಜೋಡಣೆ, ಸಿಗ್ನಲ್ ಅಳವಡಿಕೆ, ಪರೀಕ್ಷಾರ್ಥ ಸಂಚಾರ ಮುಂತಾದ ಪೂರ್ವ ತಯಾರಿ ಪ್ರಕ್ರಿಯೆಗಳು ನಡೆಯಲಿವೆ.

2015ರ ಆಗಸ್ಟ್ ವೇಳೆಗೆ ಮೊದಲ ಹಂತದ ಎಲ್ಲ ಮಾರ್ಗ ಮುಕ್ತ

2015ರ ಆಗಸ್ಟ್ ವೇಳೆಗೆ ಮೊದಲ ಹಂತದ ಎಲ್ಲ ಮಾರ್ಗ ಮುಕ್ತ

2015ರ ಮಾರ್ಚ್ ವೇಳೆಗೆ ಮೊದಲ ಹಂತದ ಎಲ್ಲ ಮಾರ್ಗಗಳಲ್ಲಿ ಮೆಟ್ರೊ ಸಂಚಾರ ಆರಂಭವಾಗುವ ವಿಶ್ವಾಸವಿದೆ. ಸಂಪಿಗೆ ರಸ್ತೆಯಿಂದ ಪೀಣ್ಯವರೆಗಿನ ನಮ್ಮ ಮೆಟ್ರೋ ಮಾರ್ಗದ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಂಡು, ಸಂಚಾರ ಆರಂಭವಾಗಲಿದೆ.

ಪೂರ್ವ- ಪಶ್ಚಿಮ ಕಾರಿಡಾರ್ ಸ್ಥಿತಿಗತಿ

ಪೂರ್ವ- ಪಶ್ಚಿಮ ಕಾರಿಡಾರ್ ಸ್ಥಿತಿಗತಿ

* ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಿನ್ಸ್ಕ್ ಸ್ಕ್ವೇರ್ - 152 ಮೀ. (ಪೂರ್ಣ)
* ಮಿನ್ಸ್ಕ್ ಸ್ಕ್ವೇರ್‌ನಿಂದ ವಿಧಾನಸೌಧ- 400 ಮೀ. (ಪೂರ್ಣ)
* ವಿಧಾನಸೌಧದಿಂದ ಸೆಂಟ್ರಲ್ ಕಾಲೇಜು- 650 ಮೀ. (ಪೂರ್ಣ)
* ಸೆಂಟ್ರಲ್ ಕಾಲೇಜಿನಿಂದ ಮೆಜೆಸ್ಟಿಕ್- 975 ಮೀ. (ಪೂರ್ಣ)
* ಮೆಜೆಸ್ಟಿಕ್‌ನಿಂದ ನಗರ ರೈಲು ನಿಲ್ದಾಣ- 250 ಮೀ. (ಆರಂಭವಾಗಬೇಕಿದೆ)

ಉತ್ತರ- ದಕ್ಷಿಣ ಕಾರಿಡಾರ್ ಸ್ಥಿತಿಗತಿ

ಉತ್ತರ- ದಕ್ಷಿಣ ಕಾರಿಡಾರ್ ಸ್ಥಿತಿಗತಿ

* ಜಕ್ಕರಾಯನಕೆರೆ ಮೈದಾನದಿಂದ ಮೆಜೆಸ್ಟಿಕ್- 854 ಮೀ. (ಪ್ರಗತಿಯಲ್ಲಿದೆ)
* ಮೆಜೆಸ್ಟಿಕ್‌ನಿಂದ ಚಿಕ್ಕಪೇಟೆ- 742 ಮೀ. (ಆರಂಭವಾಗಬೇಕಿದೆ)
* ಚಿಕ್ಕಪೇಟೆಯಿಂದ ಕೆಆರ್ ಮಾರುಕಟ್ಟೆ- 435 ಮೀ. (ಪ್ರಗತಿಯಲ್ಲಿದೆ)
* ಕೆಆರ್ ಮಾರುಕಟ್ಟೆಯಿಂದ ಕೆಆರ್ ರಸ್ತೆ ಸೌತ್ ರಯಾಂಪ್ - 400 ಮೀ. (ಪೂರ್ಣಗೊಂಡಿದೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+