ಭವ್ಯ ನರಸಿಂಹಮೂರ್ತಿಗೆ IMA ತರಬೇತಿ: ಸುಪ್ರೀಂ ಆದೇಶ ಬೆನ್ನಲ್ಲೆ ಮೊದಲ ಮಹಿಳಾ ಅಧಿಕಾರಿ ಸೇವೆಗೆ..

ಕಾಂಗ್ರೆಸ್ ವಕ್ತಾರೆಯಾಗಿರುವ ಭವ್ಯ ನರಸಿಂಹಮೂರ್ತಿ ಈ ವರ್ಷದ ಮಿಲಿಟರಿ ಸೇವೆಗೆ ರಿಪೋರ್ಟ್ ಮಾಡಿಕೊಳ್ಳಲು ಉತ್ತರಾಖಂಡಗೆ ತೆರಳಿದ್ದಾರೆ. ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ತರಬೇತಿ ಪಡೆಯುತ್ತಿರುವುದು ಇದೇ ಮೊದಲು ಎಂದು ಸ್ವತಃ ಭವ್ಯ ಅವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಕಠಿಣ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಲು ಜನರ ಆಶಿರ್ವಾದ ಕೇಳಿದ್ದಾರೆ. ಎಷ್ಟು ದಿನದ ತರಬೇತಿ, ಯಾವಾಗ ರಿಪೋರ್ಟ್ ಮಾಡಿಕೊಳ್ಳುವುದು, ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಭವ್ಯ ನರಸಿಂಹಮೂರ್ತಿ ಅವರು ಚಿರಪರಿಚಿತ. ಕಳೆದ ವರ್ಷ ಸೇನಾ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಇಂಡಿಯನ್ ಟೆರಿಟೋರಿಯಲ್ ಆರ್ಮಿಯಲ್ಲಿ ಕಮಿಷನಡ್ ಆಫೀಸರ್ ಆಗಿ ಸೇವೆ ನೀಡಿ ಬಂದಿದ್ದರು. ದಕ್ಷಿಣ ಭಾರತದಲ್ಲೇ ಮೊದಲು ಮಹಿಳೆಯೊಬ್ಬರು ಇಂಡಿಯನ್ ಟೆರಿಟೋರಿಯಲ್ ಆರ್ಮಿಯಲ್ಲಿ ಕಮಿಷನಡ್ ಆಫೀಸರ್ ಆಗಿ ಆಯ್ಕೆಯಾಗಿದ್ದರು. ಅದರ ಕರ್ನಾಟಕದವರು ಎಂಬ ಹೆಮ್ಮೆ ಇದೆ. ಅದೇ ರೀತಿ ಈ ವರ್ಷದ ಮಿಲಿಟರಿ ಸೇವೆಗೆ ಅವರು ಉತ್ತರಾಖಂಡಗೆ ತೆರಳಿದ್ದಾರೆ. ಆಗಸ್ಟ್ 04ರಂದು ಅವರು ರಿಪೋರ್ಟ್ ಮಾಡಿಕೊಂಡು ಕಠಿಣ ತರಬೇತಿ ಪಡೆಯುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.

Bhavya Narasimhamurthy has reported for training at the Indian Military Academy in Uttarakhand

ಐಎಂಎನಲ್ಲಿ ಮೊದಲ ಮಹಿಳಾ ಅಧಿಕಾರಿಗೆ ತರಬೇತಿ

''ಇದೀಗ ಭಾರತೀಯ ಮಿಲಿಟರಿ ಅಕಾಡೆಮಿ (IMA) ಸೇವೆಗೆ ರಿಪೋರ್ಟ್ ಆಗಲು ಉತ್ತಾಖಂಡದ ಡೆಹರಾಡೋನ್‌ಗೆ ಹೋಗುತ್ತಿದ್ದೇನೆ. ಅಲ್ಲಿಯೇ ತರಬೇತಿ ಪಡೆಯಲಿದ್ದೇನೆ. ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಈವರೆಗೆ ಯಾವುದೇ ಒಂದು ಲೇಡಿ ಆಫೀಸರ್ ತರಬೇತಿ ಆಗಿಲ್ಲ. ಬರೀ ಪುರಷರು ತರಬೇತಿ ಪಡೆಯುತ್ತಿದ್ದರು. ಉಳಿದವರು ಚೆನ್ನೈ, ಗಾಯಾ ಸೇರಿ ಬೇರೆಡೆ ಟ್ರೈನಿಂಗ್‌ಗೆ ಹೋಗುತ್ತಿದ್ದರು.

''ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶವೊಂದನ್ನು ಮಾಡಿದ್ದು, ಅದರ ಪ್ರಕಾರ, ಲಿಂಗ ಸಮಾನತೆ ಭಾರತೀಯ ಸೇನೆಯಲ್ಲಿರಬೇಕು ಎಂದು ತಿಳಿಸಿದೆ. ಭಾರತೀಯ ಮಿಲಿಟರಿ ಅಕಾಡೆಮಿಯಲ್ಲೂ (ಐಎಂಎ) ಮಹಿಳಾ ಅಧಿಕಾರಿಗಳ ತರಬೇತಿ ಆಗುವಂತೆ ಸುಪ್ರೀಂ ಸೂಚಿಸಿದೆ. ಅದಾದ ಬಳಿಕ ಈವರೆಗೆ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ತರಬೇತಿ ಪಡೆಯವವರಲ್ಲಿ ನಾನೇ ಮೊದಲಿಗಳು'' ಎಂದಿದ್ದಾರೆ.

''ಆದಷ್ಟು ಶೀಘ್ರವೇ ಮಿಲಿಟರಿ ತರಬೇತಿ ಮುಗಿಸಿ ನಮ್ಮ ನಾಡಿಗೆ ಮರಳುತ್ತೇನೆ. ತರಬೇತಿ ತುಂಬಾ ಕಷ್ಟವಿದೆ ಎಂದು ಹೇಳಿದ್ದಾರೆ. ನಿಮ್ಮೆಲ್ಲರ ಆರ್ಶಿವಾದದಿಂದ ನಾನು ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬೇಗ ಬರುತ್ತೇನೆ ''ಎಂದು ಆಶಿರ್ವದಿಸುವಂತೆ ಕೋರಿದ್ದಾರೆ.

2022ರಲ್ಲಿ ಮಿಲಿಟರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಇವರಾಗಿದ್ದಾರೆ. ಅದಾದ ಬಳಿಕ ಭವ್ಯ ನರಸಿಂಹಮೂರ್ತಿ ಅವರು ಭಾರತ ಪಾಕಿಸ್ತಾನ ಗಡಿ (LOC) ಪ್ರದೇಶದ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದ ಪಡೆದುಕೊಂಡಿದ್ದರು. ನಂತರ ಲೆಫ್ಟಿನೆಂಟ್ ಆಗಿ ನಿಯೋಜನೆಗೊಂಡು ಸೇವೆ ನೀಡಿ ಕರ್ನಾಟಕಕ್ಕೆ ಮರಳಿದ್ದರು. ಇದೀಗ ಮತ್ತೆ 2025ನೇ ವರ್ಷ ಸೇವೆಗೆ, ತರಬೇತಿಗಾಗಿ ನೆನ್ನೆ ಆಗಸ್ಟ್ 04ರಂದು ಸೇವೆ ತೆರಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು, ಗಣ್ಯರು, ಹಿತೈಷಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+