ಪಟ್ಟುಬಿಡದ ರೇವಣ್ಣ ದಂಪತಿ, ದಿಢೀರ್ ಪ್ರಚಾರ ಆರಂಭಿಸಿದ ಭವಾನಿ! ಇನ್ಸೈಡ್ ಸ್ಟೋರಿ ಇಲ್ಲಿದೆ ನೋಡಿ
ಹಾಸನ ಟಿಕೆಟ್ ವಿಚಾರವಾಗಿ ದೇವೇಗೌಡರ ಕುಟುಂಬದಲ್ಲಿ ಸಾಕಷ್ಟು ರಹಸ್ಯೆ ಸಭೆಗಳು ನಡೆದಿವೆ.
ಹಾಸನ,ಫೆಬ್ರವರಿ24: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಎಲ್ಲ ಪಕ್ಷಗಳು ಪ್ರಚಾರ ಕಾರ್ಯವನ್ನು ಜೋರಾಗಿ ನಡೆಸುತ್ತಿವೆ. ಇತ್ತ ಹಾಸನ ರಾಜಕೀಯ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹಾಸನದ ಟಿಕೆಟ್ ವಿಚಾರವಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದಲ್ಲಿ ಸಾಕಷ್ಟು ಭಿನ್ನಮತ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ.
ಹಾಸನದಲ್ಲಿ ನಾನೇ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಹೇಳಿಕೊಟ್ಟ ಬಳಿಕ, ಭವಾನಿ ರೇವಣ್ಣ ಚುನಾವಣಾ ಸ್ಪರ್ಧೆ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದಿವೆ. ಈಗಾಗಲೇ ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಮಾರ್ಚ್ ಎರಡನೇ ವಾರದಂದು ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಆದರೆ ಹಾಸನದ ಟಿಕೆಟ್ ಹಂಚಿಕೆ ಮುನ್ನವೇ ಮಾಜಿ ಸಚಿವ ಎಚ್‌ಡಿ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಟೆಂಪಲ್ ರನ್ ನಡೆಸಿರುವುದು ಕುತೂಹಲವನ್ನ ಹುಟ್ಟಿಸಿದೆ.
ಟಿಕೆಟ್ ಘೋಷಣೆಗೂ ಮುನ್ನವೇ ನಿನ್ನೆಯಿಂದ (ಗುರುವಾರ) ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಪ್ರಚಾರ ಆರಂಭಿಸಲಿದ್ದಾರೆ. ಅತ್ತ ಎಚ್‌ಡಿ ರೇವಣ್ಣ ದಂಪತಿ ಹರದನಹಳ್ಳಿಯ ದೇವೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ಇನ್ನು, ಭವಾನಿ ರೇವಣ್ಣ ಬೆಟ್ಡದ ರಂಗನಾಥಸ್ವಾಮಿಗೂ ಪೂಜೆ ಸಲ್ಲಿಸಲಿದ್ದು, ಬಳಿಕ ಹಾಸನದಲ್ಲಿ ನಡೆಯುವ ಪೂಜೆಯಲ್ಲಿ ಭವಾನಿ ರೇವಣ್ಣ ಭಾಗಿಯಾಗಿದ್ದಾರೆ.

ಬಹುತೇಕ ಭವಾನಿ ರೇವಣ್ಣಗೆ ಟಿಕೆಟ್ ?
ಸತತ 18 ವರ್ಷಗಳಿಂದ ರಾಜಕೀಯಕ್ಕೆ ಬರಬೇಕು ಎಂದು ಕನಸು ಕಂಡಿದ್ದ ಎಚ್.ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಕನಸು ನನಸಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಹಾಸನಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿ. ಶೀಘ್ರದಲ್ಲೇ ಪಕ್ಷ ಕೂಡ ಅದನ್ನು ಘೋಷಿಸಲಿದೆ ಎಂದು ಭವಾನಿ ರೇವಣ್ಣ ಹೇಳಿಕೆ ನೀಡಿದ ಬೆನ್ನಲ್ಲೇ ಪಕ್ಷದಲೇ ಭಿನ್ನಾಭಿಪ್ರಾಯಗಳು ಕಂಡು ಬಂದಿದ್ದು, ಸಮರ್ಥ ಅಭ್ಯರ್ಥಿ ಪಕ್ಷದಲ್ಲಿ ಇದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಯಿಂದ ಭವಾನಿ ರೇವಣ್ಣ ಅವರ ಕನಸಿಗೆ ತಣ್ಣೀರು ಎರಚ್ಚುವಂತೆ ಮಾಡಿತ್ತು.
ಈ ವಿಚಾರ ದೇವೇಗೌಡರ ಕುಟುಂಬದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಖಾಸಗಿ ಹೋಟೆಲ್ ನಲ್ಲಿ ಸಹೋದರಾದ ಹೆಚ್ ಡಿ ರೇವಣ್ಣ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರು ರಹಸ್ಯವಾಗಿ ಮಾತುಕತೆಯನ್ನ ನಡೆಸಿದ್ದರು. ಆದರೆ ಇದುವರೆಗೂ ಹಾಸನ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಬಗ್ಗೆ ಅಧಿಕೃತವಾಗಿ ಘೋಷಣೆಯಾಗುವ ಮುನ್ನವೇ ಮಾಜಿ ಸಚಿವ ಎಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಕ್ಷೇತ್ರದಲ್ಲಿ ಪ್ರಚಾರವನ್ನ ಆರಂಭಿಸಿದ್ದು, ಟಿಕೆಟ್ ಗಾಗಿ ಪಟ್ಟು ಹಿಡಿದ ದಂಪತಿಗೆ ಟಿಕೆಟ್ ಸಿಗುವ ಭರವಸೆ ಇದೆ ಎಂದು ಹೇಳಲಾಗಿದ್ದು, ಬಹುತೇಕವಾಗಿ ಈ ಬಾರಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಿಕೆಟ್ ಆಕಾಂಕ್ಷಿ ಸ್ವರೂಪ್ ಕಥೆ ಏನು.?
ಈ ಹಿಂದೆ ಹಾಸನ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸ್ವರೂಪ್ ಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನವಾಗಿದೆ. ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರಾಗ್ತಾರೆ? ಈ ಪ್ರಶ್ನೆ ಇದೀಗ ಜೆಡಿಎಸ್‌ನಲ್ಲಿ ಭಾರೀ ಗೊಂದಲ ಸೃಷ್ಟಿಸಿದೆ. ಈಗಾಗಲೇ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅಬ್ಬರದ ಪ್ರಚಾರ ನಡೆಸ್ತಿರೋ ಕಾರಣ, ಸ್ವರೂಪ್ ಪ್ರಕಾಶ್ ಅವರಿಗೆ ಟಿಕೆಟ್ ಸಿಗೋದೇ ಇಲ್ವಾ ಅನ್ನೋ ಮಾತು ಕೂಡಾ ಕೇಳಿ ಬರ್ತಿದೆ.
ಒಂದು ಕಡೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಲ್ಲೂ ಗೊಂದಲ ಇದೆ. ಆದರೆ ಟಿಕೆಟ್ ಆಕಾಂಕ್ಷಿಯಾಗಿರುವ ಸ್ವರೂಪ್ ಪ್ರಕಾಶ್ ಮಾತ್ರ ಕುಮಾರಸ್ವಾಮಿ ಅವರು ನನ್ನ ಕೈ ಬಿಡೋದಿಲ್ಲ ಅನ್ನೋ ನಂಬಿಕೆಯಲ್ಲಿದ್ದಾರೆ.

ಕ್ಷೇತ್ರ ಕೈ ತಪ್ಪುವ ಆತಂಕದಲ್ಲಿದ್ದರಾ ಪ್ರೀತಂ ಗೌಡ?
ಈ ಹಿಂದೆ ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಜೆಡಿಎಸ್ ಮಾಡಿದ ಸಣ್ಣ ತಪ್ಪಿನಿಂದ ಕ್ಷೇತ್ರದಲ್ಲಿ ಕಮಲ ಅರಳವು ಕಾರಣವಾಗಿದೆ. ಆದರೆ ಈ ಬಾರಿ ಕ್ಷೇತ್ರವನ್ನ ಮತ್ತೆ ಮರಳಿ ಪಡೆಯಬೇಕು ಎಂದು ಜೆಡಿಎಸ್ ನಿರ್ಧರಿಸಿದ್ದು, ದೇವೇಗೌಡರ ಹಿರಿಯ ಸೊಸೆ ಭವಾನಿ ರೇವಣ್ಣ ಅವರನ್ನ ಕಣಕ್ಕಿಳಿಸಲು ನಿರ್ಧಾರಿಸಲಾಗಿದೆ ಎಂದು ಹೇಳಲಾಗಿದೆ.
ಈಗಾಗಲೇ ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಹಾಸನದಲ್ಲಿ ಈ ಬಾರಿ ಕ್ಷೇತ್ರ ಎಲ್ಲಿ ಕೈ ತಪ್ಪಿ ಹೋಗುತ್ತೋ ಎನ್ನುವ ಆತಂಕ ಹೆಚ್ಚಾಗಿದೆ. ಏಕೆಂದರೆ ಭವಾನಿ ರೇವಣ್ಣ ಹಾಗೂ ರೇವಣ್ಣ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದ ಪ್ರೀತಂ ಗೌಡ ಅವರನ್ನ ಸೋಲಿಸಲು ರೇವಣ್ಣ ಕುಟುಂಬದವರು ನಿರ್ಧರಿಸಿದ್ದಾರೆ. ಹೀಗಾಗಿ ಎಲ್ಲಿ ಕ್ಷೇತ್ರ ಕೈ ತಪ್ಪಿ ಹೋಗುತ್ತೋ ಎನ್ನುವ ಆತಂಕದಲ್ಲಿ ಪ್ರೀತಂ ಗೌಡ ಅವರು ಇದ್ದಾರೆ ಎನ್ನಲಾಗಿದೆ.

ಗೌಡರ ಕುಟುಂಬದಲ್ಲಿನ ಭಿನ್ನಮತ ಶಮನವಾಯ್ತಾ?
ಹಾಸನ ಟಿಕೆಟ್ ವಿಚಾರವಾಗಿ ದೇವೇಗೌಡರ ಕುಟುಂಬದಲ್ಲಿ ಸಾಕಷ್ಟು ರಹಸ್ಯೆ ಸಭೆಗಳು ನಡೆದಿವೆ ಎಂದು ಹೇಳಲಾಗಿದ್ದು, ಟಿಕೆಟ್ ವಿಚಾರವಾಗಿ ಕುಟುಂಬದಲ್ಲಿಯೇ ಭಿನ್ನಮತಗಳು ಉಂಟಾಗಿವೆ ಎಂದು ಹೇಳಲಾಗಿತ್ತು.
ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಭೇಟಿ ಆಗಿ ಭವಾನಿ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿಯೇ ಅಣ್ಣ- ತಮ್ಮನ ಮಧ್ಯೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಮಾತುಕತೆಯ ಬಳಿಕ ಪದ್ಮನಾಭನಗರದಲ್ಲಿ ಇರುವ, ದೇವೇಗೌಡರು ನಿವಾಸಕ್ಕೆ ರೇವಣ್ಣನವರು ಬಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಜೊತೆಗೆ ಈ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗಿದ್ದು, ರೇವಣ್ಣ ಅವರ ಕುಟುಂಬದವರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವುದರಿಂದ ಕುಟುಂಬದಲ್ಲಿ ಭಿನ್ನಮತ ಶಮನವಾಗಿರಬೇಕು ಎಂದು ಹೇಳಲಾಗಿದೆ.












Click it and Unblock the Notifications