Breaking; ಸಿದ್ದರಾಮಯ್ಯಗೆ ಬಿ. ಶ್ರೀರಾಮುಲು ಸರಳ ಪ್ರಶ್ನೆ!
ಬೆಂಗಳೂರು, ಅಕ್ಟೋಬರ್ 14; ಭಾರತ್ ಜೋಡೋ ಯಾತ್ರೆಯ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದೆ. ಸಾರಿಗೆ ಸಚಿವ ಬಿ. ಶ್ರೀರಾಮುಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸರಳ ಪಶ್ನೆಯೊಂದನ್ನು ಕೇಳಿದ್ದಾರೆ.
ಕರ್ನಾಟಕ ಬಿಜೆಪಿಯ ಜನಸಂಕಲ್ಪ ಯಾತ್ರೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಉಭಯ ಪಕ್ಷಗಳ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಭಾರತ್ ಜೋಡೋ ಯಾತ್ರೆಯ ಹಿನ್ನಲೆ ಶನಿವಾರ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ಶುಕ್ರವಾರ ಸಚಿವ ಬಿ. ಶ್ರೀರಾಮುಲು ಸರಣಿ ಟ್ವೀಟ್ ಮಾಡಿದ್ದಾರೆ.'ಮಾಜಿ ಮುಖ್ಯಮಂತ್ರಿಗಳಾದ ಗೌರವಾನ್ವಿತ ಶ್ರೀ ಸಿದ್ದರಾಮಯ್ಯನವರೇ ನನ್ನದೊಂದು ಸರಳ ಪ್ರಶ್ನೆ. ನಿಮ್ಮ ಕಾಂಗ್ರೆಸ್ ಯುವನಾಯಕ ಶ್ರೀ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅವರ ಭಾಷಣವನ್ನು ಎರಡು ನಿಮಿಷ ನೀವು ನಿದ್ದೆ ಮಾಡದೆ ಕೇಳಲು ಸಾಧ್ಯವೇ.?' ಎಂದು ಹೇಳಿದ್ದಾರೆ.
'ನಿಮ್ಮ ವಿಫಲ ನಾಯಕ ಶ್ರೀ ರಾಹುಲ್ ಗಾಂಧಿ ಜೊತೆಗೆ ಮೂರು ಹೆಜ್ಜೆ ಹಾಕಲು ಆಗದೆ, ಕಣ್ ಕಣ್ ಬಿಡುತ್ತಿದ್ದಾಗ ಬಲವಂತವಾಗಿ ಕೈ ಹಿಡಿದುಕೊಂಡು ಓಡೋಡಿ ಹೋಗಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದು ಯಾರು?. ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಆಗದಿದ್ದರೂ, ಅಸ್ತಿತ್ವಉಳಿಸಿಕೊಳ್ಳಲು ಹೆಣಗಾಟ ನಡೆಸುತ್ತಿರುವವರು ನಾವೋ ನೀವಾ.?' ಎಂದು ಪ್ರಶ್ನೆ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಗೌರವಾನ್ವಿತ ಶ್ರೀ @siddaramaiah ನವರೇ ನನ್ನದೊಂದು ಸರಳ ಪ್ರಶ್ನೆ. ನಿಮ್ಮ ಕಾಂಗ್ರೆಸ್ ಯುವನಾಯಕ ಶ್ರೀ @RahulGandhi ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅವರ ಭಾಷಣವನ್ನು ಎರಡು ನಿಮಿಷ ನೀವು ನಿದ್ದೆ ಮಾಡದೆ ಕೇಳಲು ಸಾಧ್ಯವೇ.? 1/12
— B Sriramulu (@sriramulubjp) October 14, 2022
ಸಚಿವ ಶ್ರೀರಾಮುಲು, 'ನಿಮ್ಮ ನಾಮಸ್ಮರಣೆ ಮಾಡಿಕೊಂಡು ರಾಜಕೀಯ ಮಾಡಬೇಕಾದ ದರ್ದು ನಮಗಿಲ್ಲ. ಅದರ ಅಗತ್ಯವೂ ಇಲ್ಲ. ನಾವು ನಿಮ್ಮ ಹೆಸರು ಹೇಳದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಮೇಲೆ ಜನರ ಬಳಿ ಹೋಗಿ ಭಾಷಣ ಮಾಡುತ್ತೇವೆ. ಆದರೆ ನೀವು ಯಾವ ಮುಖ ಇಟ್ಟುಕೊಂಡು ಹೋಗುತ್ತೀರಿ?' ಎಂದು ಸಿದ್ದರಾಮಯ್ಯಗೆ ಕೇಳಿದ್ದಾರೆ.
ಬಿಜೆಪಿ ಜನಸಂಕಲ್ಪ ಯಾತ್ರೆ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, "ಜೆಪಿಯವರು ತಾವು ನಡೆಸುತ್ತಿರುವ ಜನಸಂಕಲ್ಪ ಯಾತ್ರೆ ಎಂಬ ಹೆಸರಿನ ಬದಲು ಜನರಿಗೆ ಸುಳ್ಳು ಹೇಳುವ ಯಾತ್ರೆ ಎಂದು ನಾಮಕರಣ ಮಾಡುವುದು ಒಳ್ಳೆಯದು. ತನ್ನ ಯಾತ್ರೆಯನ್ನು ನನ್ನ ವಿರುದ್ಧ ಸುಳ್ಳು ಹೇಳುವುದಕ್ಕಷ್ಟೇ ಸೀಮಿತ ಮಾಡಿಕೊಂಡಂತಿದೆ' ಎಂದು ದೂರಿದ್ದರು.












Click it and Unblock the Notifications