ಬೆಂಗಳೂರು & ಮೈಸೂರು ಹೆದ್ದಾರಿಯಲ್ಲಿ ನರಭಕ್ಷಕ ಸಿಂಹ ಓಡಾಟ ನಡೆಸುತ್ತಾ ಇದೆಯಾ... Bengaluru Mysuru Expressway
ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇ ಪದೇ ಪದೇ ಟೋಲ್ ಹೆಚ್ಚಳ ವಿಚಾರಕ್ಕೆ ಚರ್ಚೆಗೆ ಗುರಿ ಆಗುತ್ತಲೇ ಇತ್ತು. ಹಾಗೇ ಮಳೆ ಬಂದಾಗ ಸ್ವಿಮ್ಮಿಂಗ್ ಪೂಲ್ ರೀತಿ ಆಗಿ ಹೋಗುವ ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇ ಕಂಡು ಕಾರು & ಬಸ್ ಚಾಲಕರು ಪರದಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಇದೀಗ ದಿಢೀರ್ ಆಘಾತಕಾರಿ ಸುದ್ದಿಯೊಂದು ಹಬ್ಬಿದ್ದು, ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇ ಬಳಸುವವರ ಎದೆಯಲ್ಲಿ ನಡುಕ ಶುರುವಾಗಿದೆ. ಅಂದಹಾಗೆ, ಬೆಂಗಳೂರು & ಮೈಸೂರು ಹೆದ್ದಾರಿಯಲ್ಲಿ ನರಭಕ್ಷಕ ಸಿಂಹ ಓಡಾಟ ನಡೆಸುತ್ತಾ ಇದೆಯಾ...
ಒಂದಲ್ಲ.. ಎರಡಲ್ಲ.. ಬರೋಬ್ಬರಿ 8,000 ಕೋಟಿ ರೂಪಾಯಿ ಹಣ ಸುರಿದು ನಿರ್ಮಾಣ ಮಾಡಿದ್ದ ಹೆದ್ದಾರಿ ಅದು. ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇ ಇಡೀ ಇಂಡಿಯಾ ಮಾತ್ರವಲ್ಲ, ಜಗತ್ತಿನ ಮೂಲೆ ಮೂಲೆಯಲ್ಲೂ ಗಮನ ಸೆಳೆದಿತ್ತು. ಯಾಕಂದ್ರೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಹೆದ್ದಾರಿ ನಿರ್ಮಾಣ ಮಾಡಿದ್ದಾಗಿ ಸರ್ಕಾರ ಕೂಡ ಹೇಳಿಕೊಂಡಿತ್ತು. ಮತ್ತೊಂದು ಕಡೆ ಪ್ರತಿದಿನ ಹತ್ತಾರು ಲಕ್ಷ ಜನರು ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇ ಮೂಲಕ ಪ್ರಯಾಣ ಮಾಡುತ್ತಾರೆ. ರಾತ್ರಿ ಕೂಡ ಎಕ್ಸ್‌ಪ್ರೆಸ್ ವೇ ತುಂಬಿ ತುಳುಕುತ್ತಾ ಇರುತ್ತದೆ. ಹೀಗಿದ್ದಾಗಲೇ, ಬೆಂಗಳೂರು & ಮೈಸೂರು ಹೆದ್ದಾರಿಯಲ್ಲಿ ನರಭಕ್ಷಕ ಸಿಂಹ ಓಡಾಟ ನಡೆಸುತ್ತಾ ಇದೆಯಾ...

ಮೈಸೂರು ಎಕ್ಸ್‌ಪ್ರೆಸ್ ವೇ ಹಾದಿಯಲ್ಲಿ ಸಿಂಹ?
ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇ ಸುಮಾರು 119 ಕಿಲೋ ಮೀಟರ್ ಉದ್ದ ಇದ್ದು, ಮೈಸೂರಿಗೆ ಹೋಗುವವರು ಹಾಗೂ ಬೆಂಗಳೂರಿಗೆ ಬರುವವರು ಕೆಲವೇ ಗಂಟೆಗಳಲ್ಲಿ ತಮ್ಮ ಗುರಿ ತಲುಪಬಹುದು. ಆದರೆ ಇಂತಹ ಹೆದ್ದಾರಿಯಲ್ಲೇ ಇದೀಗ ಸಿಂಹ ಓಡಾಟ ನಡೆಸುತ್ತಿದೆ, ರಾತ್ರಿ ಸಮಯದಲ್ಲಿ ಓಡಾಡುವ ವಾಹನ ಸವಾರರು ಎಚ್ಚರ... ಎಚ್ಚರ... ಹೀಗಂತಾ ಸೋಷಿಯಲ್ ಮೀಡಿಯಾದಲ್ಲಿ ಹೆದ್ದಾರಿ ಮಧ್ಯೆ ಸಿಂಹ ಓಡಾಟ ನಡೆಸುತ್ತಿರುವ ವಿಡಿಯೋ ಹಾಕುತ್ತಿದ್ದಾರೆ. ಈ ವಿಡಿಯೋ ನೋಡಿ ಪ್ರಯಾಣಿಕರು ಕೂಡ ಬೆಚ್ಚಿಬಿದ್ದಿದ್ದಾರೆ...
ಸಿಂಹ ಹೆದ್ದಾರಿಯಲ್ಲಿ ಓಡಾಡುತ್ತಿರುವ ಬಗ್ಗೆ...
ಅಂದಹಾಗೆ ಇದೀಗ ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇ ಮಧ್ಯೆ ಸಿಂಹ ಓಡಾಟ ನಡೆಸುತ್ತಿರುವ ವಿಡಿಯೋ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಆದರೆ ಇದು ಎಐ ಮೂಲಕ ಕ್ರಿಯೇಟ್ ಮಾಡಿದ್ದು, ಸುಳ್ಳು ಎಂಬ ಸುದ್ದಿ ಕೂಡ ಹಬ್ಬಿದೆ. ಮತ್ತೊಂದು ಕಡೆ ಇದು ಬೇರೆ ಯಾವುದೋ ಊರಿನ ವಿಡಿಯೋ ಆದರೆ ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇಗೆ ಲಿಂಕ್ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಈಗ ಕೇಳಿಬಂದಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ & ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇ ಬಳಸಿ ಓಡಾಡಲು ಭಯವಾಗುತ್ತಿದೆ ಅಂತಿದ್ದಾರೆ ಜನ...












Click it and Unblock the Notifications