ಬೆಂಗಳೂರಿನ ಗಾರ್ಮೆಂಟ್ಸ್ ಬಂದ್... 20,00,000 ಕಾರ್ಮಿಕರು ಬೀದಿಗೆ ಬೀಳುವ ಆತಂಕ... Bengaluru Garments

1,500 ವರ್ಷಗಳ ಇತಿಹಾಸ ಇರುವ ನಮ್ಮ ಬೆಂಗಳೂರಿಗೆ, 3,000 ವರ್ಷಗಳ ಇತಿಹಾಸ ಇರುವ ನಮ್ಮ ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಸುಮಾರು 20,00,000 ಕಾರ್ಮಿಕರು ಜೀವನ ಕಂಡುಕೊಂಡಿದ್ದು, ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿರುವುದೇ ಗಾರ್ಮೆಂಟ್ಸ್ ಮೂಲಕ. ಆದರೆ ಇದೀಗ ದಿಢೀರ್ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ... ಹೀಗಿದ್ದಾಗಲೇ, ಬೆಂಗಳೂರಿನ ಗಾರ್ಮೆಂಟ್ಸ್ ಬಂದ್... 20,00,000 ಕಾರ್ಮಿಕರು ಬೀದಿಗೆ ಬೀಳುವ ಆತಂಕ...

ಗಾರ್ಮೆಂಟ್ಸ್ ಕೆಲಸ ಮಾಡುವ ನೌಕರರಿಗೆ ಅಂದ್ರೆ ಗಾರ್ಮೆಂಟ್ಸ್ ಕೆಲಸಗಾರರಿಗೆ ತಿಂಗಳಿಗೆ ಜಾಸ್ತಿ ಜಾಸ್ತಿ ಅಂದ್ರೆ 12,000 ಅಥವಾ 15,000 ರೂಪಾಯಿ ಸಿಗಬಹುದು. ಓಟಿ ಅರ್ಥಾತ್ ಓವರ್ ಟೈಂ ಮಾಡಿದ್ರೆ ಹೊಟ್ಟೆ ತುಂಬುವಷ್ಟು ಹಣ ಕೈಗೆ ಬರುತ್ತೆ ಅಷ್ಟೇ. ಅದೂ 10 ಗಂಟೆ, 12 ಗಂಟೆ ದುಡಿದು ಬೆವರು ಹರಿಸಿ ಪರದಾಡಬೇಕು. ಹೀಗೆ ತಮ್ಮ ಇಡೀ ಜೀವನವನ್ನೇ ಗಾರ್ಮೆಂಟ್ಸ್ ಕೆಲಸಕ್ಕೆ ಅರ್ಪಿಸುವ ನೌಕರರ ಎದೆ ಹೊಡೆದು ಹೋಗುವ ಸುದ್ದಿ ಇದೀಗ ಹೊರಬಿದ್ದಿದೆ...

Bengaluru Textile Production Companies Are Facing This Now

ಬೆಂಗಳೂರಿನ ಗಾರ್ಮೆಂಟ್ಸ್ ಬಂದ್...

ಹೌದು, ಲಕ್ಷಾಂತರ ಕುಟುಂಬಗಳಿಗೆ ನೆರವಾಗಿ ನಿಂತಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಇದೀಗ ದೊಡ್ಡ ಸಮಸ್ಯೆ ಎದುರಾಗಿದೆ. ಯಾರೋ ಮಾಡಿದ ತಪ್ಪಿಗೆ & ಯಾರದ್ದೋ ಅಹಂಕಾರದ ನಿರ್ಧಾರಕ್ಕೆ ಇದೀಗ ಕನ್ನಡ ನಾಡಲ್ಲಿರುವ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಕಂಟಕ ಎದುರಾಗಿದೆ. ಹೀಗಿದ್ದಾಗಲೇ, ಬೆಂಗಳೂರಿನ ಗಾರ್ಮೆಂಟ್ಸ್ ಬಂದ್... 20,00,000 ಕಾರ್ಮಿಕರು ಬೀದಿಗೆ ಬೀಳುವ ಆತಂಕ...

ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಬಂದ್... ಬಂದ್..?

ಅಂದಹಾಗೆ ಬೆಂಗಳೂರಿನ ಗಾರ್ಮೆಂಟ್ಸ್ ಫ್ಯಾಕ್ಟರಿಗಳೂ ಸೇರಿದಂತೆ ಕರ್ನಾಟಕದ ಸಾವಿರಾರು ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಇದೀಗ ಬೀಗ ಹಾಕುವ ಆತಂಕ ಎದುರಾಗಿದ್ದು, ಕಾರ್ಮಿಕರಿಗೆ ಭಯವೂ ಶುರುವಾಗಿದೆ. ಆಗಸ್ಟ್ 27 ಅಂದ್ರೆ ಇಂದಿನಿಂದ ಭಾರತದ ವಿರುದ್ಧ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹೇರಿಕೆಯ ಆದೇಶ ಜಾರಿಗೆ ತರಲು ಅಮೆರಿಕ ಮುಂದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಭಾರತ & ಅಮೆರಿಕ ನಡುವಿನ ಸಂಬಂಧ ಹಾಳು ಮಾಡುವ ಜೊತೆಗೆ ಭಾರತದಲ್ಲಿ ಇರುವ ಅನೇಕ ಉದ್ಯಮಗಳನ್ನ ಕೂಡ ಸಂಕಷ್ಟಕ್ಕೆ ನೂಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿಕೆ ಮಾಡಿದ್ದ ಶೇ. 25 ಹೆಚ್ಚುವರಿ ಸುಂಕವೂ ಸೇರಿ ಒಟ್ಟು ಶೇಕಡಾ 50ರಷ್ಟು ಟ್ಯಾಕ್ಸ್ ಅನ್ನ ಭಾರತ ದೇಶ ರಫ್ತು ಮಾಡುವ ವಸ್ತುಗಳ ಮೇಲೆ ಇದೀಗ ವಿಧಿಸಲು ನಿರ್ಧರಿಸಲಾಗಿದೆ.

20,00,000 ಕಾರ್ಮಿಕರ ಬದುಕು ಮುಂದೆ ಹೇಗೆ?

ಅಂದಹಾಗೆ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟ (FIEO) ಈಗ ತಿಳಿಸಿರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ರಫ್ತು ಮಾಡುವ ವಸ್ತುಗಳ ಮೇಲೆ ಹೆಚ್ಚುವರಿ ಶೇಕಡಾ 25 ಸುಂಕ ವಿಧಿಸಿದ ಕಾರಣ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಇದರ ಪರಿಣಾಮ ನೇರವಾಗಿ ಗಾರ್ಮೆಂಟ್ಸ್ ಅಂದ್ರೆ ಬಟ್ಟೆ ಉದ್ಯಮದ ಮೇಲೆ ಬಿದ್ದಿದ್ದು, ತಿರುಪುರ್, ನೊಯ್ಡಾ ಮತ್ತು ಸುರತ್‌ ಸೇರಿದಂತೆ ಹಲವು ಪ್ರಮುಖ ನಗರಗಳ ಗಾರ್ಮೆಂಟ್ಸ್ ಮಾಲೀಕರು ಸ್ಪರ್ಧಾತ್ಮಕತೆಯ ಸಮಸ್ಯೆಯಿಂದ ಉತ್ಪಾದನೆ ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ನಮ್ಮ ಕರ್ನಾಟಕ & ಬೆಂಗಳೂರು ನಗರದ ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಕೂಡ ಬಂದ್ ಆಗುವ ಆತಂಕ ಮನೆಮಾಡಿದೆ...

ಈ ಸುದ್ದಿ ಇದೀಗ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡುವ ಜೊತೆಯಲ್ಲೇ ಭಾರತೀಯ ಗಾರ್ಮೆಂಟ್ಸ್ ಉದ್ಯಮದ ಮೇಲೆ ಕೂಡ ಕರಿನೆರಳ ಚಾಚುವಂತೆ ಮಾಡಿದೆ. ಇದರ ಜೊತೆಗೆ ನಮ್ಮ ಊರು ಬೆಂಗಳೂರು ನಗರದ ಗಾರ್ಮೆಂಟ್ಸ್ ಫ್ಯಾಕ್ಟರಿಗಳೂ ಬಾಗಿಲು ಹಾಕುವ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಬೆಂಗಳೂರಿನ ಗಾರ್ಮೆಂಟ್ಸ್ ಬಂದ್ ಆಗಿ, 20,00,000 ಕಾರ್ಮಿಕರು ಬೀದಿಗೆ ಬೀಳುವ ಸ್ಥಿತಿ ಬರುತ್ತದಾ? ಅನ್ನೋ ಭಾರಿ ದೊಡ್ಡ ಆತಂಕ ಮನೆ ಮಾಡಿದೆ. ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲೂ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರ & ವರ್ತನೆ ಬಗ್ಗೆ ಭಾರಿ ಬೇಸರ ವ್ಯಕ್ತವಾಗುತ್ತಿದೆ. ಹೀಗಾಗಿ ಟ್ರಂಪ್ ತಮ್ಮ ನಿರ್ಧಾರ ಬದಲು ಮಾಡುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+