Bengaluru Suburban Rail: ರಾಜ್ಯ ಬಜೆಟ್‌ನಲ್ಲಿ ಉಪನಗರ ರೈಲ್ವೆ ಯೋಜನೆಗೆ ಸಿಕ್ಕಿದ್ದೇನು?

ಬೆಂಗಳೂರು, ಫೆಬ್ರವರಿ 16: ಬಹುನಿರೀಕ್ಷೆಯ ಪ್ರಸಕ್ತ ಸಾಲಿನ ಕರ್ನಾಟಕ ಬಜೆಟ್ ಇಂದು ಮಂಡನೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಲ್ಕು ಕಾರಿಡಾರ್‌ನಲ್ಲಿ ನಿರ್ಮಾಣವಾಗುತ್ತಿರುವ ಉಪನಗರ ರೈಲು ಯೋಜನೆಗೆ (Benglauru Suburban Rail Project) ಚುರುಕುಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

149 ಕಿಲೋ ಮೀಟರ್‌ನ ಬೆಂಗಳೂರು ಉಪರೈಲು ಯೋಜನೆಯ ಎರಡನೇ ಕಾರಿಡಾರ್ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ವರೆಗಿನ (ಕಾರಿಡಾರ್-2) ಅನ್ನು ವೇಗವಾಗಿ ಪೂರ್ಣಗೊಳಿಸಲಾಗುವುದು. ಇದರ ಶೀಘ್ರವೇ ಅನುಷ್ಠಾನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಬಜೆಟ್ ಮೂಲಕ ಮಾಹಿತಿ ನೀಡಿದೆ.

Bengaluru Suburban Railways Projects To be Accelerated: CM Siddaramaiah in Karnataka Budget 2024

ಕಾರಿಡಾರ್-2 ಅನ್ನು 2025 ರ ಹೊತ್ತಿಗೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಇದು ವಿಳಂಬವಾಗದಂತೆ ನೋಡಿಕೊಳ್ಳಲಿದೆ. ಆರಂಭದಲ್ಲಿ ಒಟ್ಟಾರೆ ಉಪನಗರ ರೈಲು ಯೋಜನೆ ಘೋಷಿಸಿದಾಗ ಅಧಿಕಾರಿಗಳು 2026 ರ ವೇಳೆಗೆ 148 ಕಿಮೀ ರೈಲು ಮಾರ್ಗ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿತ್ತು. ಜೂನ್ 2022 ರಲ್ಲಿ ಪ್ರಧಾನಿ ಮೋದಿ ಅವರು ಅಡಿಗಲ್ಲು ಹಾಕಿದ ಬಳಿಕ 40 ತಿಂಗಳಲ್ಲಿ ಈ ನಾಲ್ಕು ಕಾರಿಡಾರ್ ನಿರ್ಮಿಸಲಾಗುವುದು ಎಂದು ರಾಜ್ಯ ತಿಳಿಸಿತ್ತು.

ಬೈಯಪ್ಪನಹಳ್ಳಿ ಮಾರ್ಗವಾಗಿ ಅತ್ಯಧಿಕ ಜನರು ಸಂಚರಿಸುತ್ತಾರೆ. ಇಲ್ಲಿ ನಮ್ಮ ಮೆಟ್ರೋ ನಿಲ್ದಾಣವು ಇದೆ. ಬೆಂಗಳೂರಿನ ಹೊರ ಭಾಗಗಳಿಂದ ಬರುವವರಿಗೆ ಮೆಟ್ರೋ ಜತೆಗೆ ಉಪನಗರ ರೈಲು ಯೋಜನೆ ಸಹಾಯಕ್ಕೆ ಬರುವಂತೆ ಜಾರಿಗೆ ತರಲಾಗುತ್ತಿದೆ. ಒಟ್ಟು ಯೋಜನೆಯಲ್ಲಿ ಕಾರಿಡಾರ್ 2 ನಲ್ಲಿ ಆದಷ್ಟು ಬೇಗ ರೈಲ್ವೆ ಕಾರ್ಯಾಚರಣೆ ಆರಂಭಗೊಳ್ಳಲಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+