ಬೆಂಗಳೂರು ಕಾಲ್ತುಳಿತ: ಸಾವನ್ನು ಸಮರ್ಥಿಸಿಕೊಳ್ಳಲ್ಲ! ಸರ್ಕಾರದ ವೈಫಲ್ಯ ಒಪ್ಪಿಕೊಂಡ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜೂನ್ 05: ಬೆಂಗಳೂರಿನಲ್ಲಿ RCB ವಿಜಯೋತ್ಸವ ವೇಳೆ ಕಾಲ್ತುಳಿತ (Benglauru Stampede) ದುರ್ಘಟನೆ ನಡೆದಿದೆ. ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕಿದೆ. ಇದರಿಂದ ತಪ್ಪಿಸಿಕೊಳ್ಳಲು ಆಗಲ್ಲ. ಅನಿರೀಕ್ಷಿತ ಜನ ಸೇರಿದ್ದಂತೆ ಹೀಗಾಗಿದೆ. ರಾಜ್ಯ ಸರ್ಕಾರ ಮತ್ತಷ್ಟು ಸೂಕ್ತ ಪ್ಲಾನ್ (ಅಗತ್ಯ ಸಿದ್ಧತೆ) ಮಾಡಿಕೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಸ್ವತಃ ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಒಪ್ಪಿಕೊಂಡಿದ್ದಾರೆ.
ಹೊಣೆಗೇಡಿ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಸಚಿವ ಪ್ರಿಯಾಂಕ ಖರ್ಗೆ ಅವರು ಒಪ್ಪಿಕೊಂಡಿದ್ದಾರೆ. ರಾಯಲ್ ಚಾಲೇಂಜರ್ಸ್ ಬೆಂಗಳುರು (RCB) ವಿಜಯೋತ್ಸವಕ್ಕೆ ಸೂಕ್ತ ಪೂರ್ವಸಿದ್ಧತೆ ಮಾಡಿಕೊಳ್ಳುವಲ್ಲಿ ಕರ್ನಾಟಕ ಕಾಂಗ್ರೆಸ್ ಸಕಾfರ ಎಡವಿದೆ ಎಂಬುದನ್ನು ಸ್ವತಃ ಸಚಿವರೇ ಬಹಿರಂಗಪಡಿಸಿದ್ದಾರೆ. ಹೊಣೆ ಹೊರಬೇಕಿದೆ ಎಂದು ಮಾತನಾಡಿದ ವಿಡಿಯೋವನ್ನು ಜೆಡಿಎಸ್ ಟ್ವೀಟ್ ಮಾಡುವ ಮೂಲಕ ಹರಿಹಾಯ್ದಿದೆ.

ಬೆಂಗಳೂರಲ್ಲಿ ಇಂಥದ್ದೊಂದು ಕಾಲ್ತುಳಿತ ದುರ್ಘಟನೆ ನಡೆಯಬಾರದಿತ್ತು. 18 ವರ್ಷದಿಂದ ಆರ್‌ಸಿಬಿ ಅಭಿಮಾನಿಗಳು ಈ ಸಂಭ್ರಮಕ್ಕೆ ಕಾಯುತ್ತಿದ್ದರು. ಸರ್ಕಾರ 35,000 ಜನರು ಚಿನ್ನಸ್ವಾಮಿ ಸ್ಟೇಡಿಯಂದ ನಲ್ಲಿ ಸೇರಬಹುದೆಂದು ನಾವು ಅಂದಾಜಿಸಿದ್ದೇವು. ಆದರೆ 2.5 ಲಕ್ಷದಿಂದ 03 ಲಕ್ಷದವರೆಗೆ ಜನರು ಸೇರಿದ್ದಾರೆ. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಇದರ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಈ ಮೂಲಕ ಸರ್ಕಾರದಿಂದ ಆದ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ವಿಪಕ್ಷಗಳ ಆರೋಪ, ಅನುಮಾನ ಈ ಮೂಲಕ ನಿಜವಾಗಿದೆ.
ಜನರ ಸಾವನ್ನು ಸಮರ್ಥಿಸಿಕೊಳ್ಳಲು ಆಗಲ್ಲ
ಮುಂದುವರಿದು ಸಚಿವರು, ಕರ್ನಾಟಕ ಸರ್ಕಾರದಿಂದ ಉತ್ತಮ ಪೂರ್ವ ಸಿದ್ಧತೆ ಆಗಬೇಕಿತ್ತು. ಅಲ್ಲದೇ ಸೂಕ್ತ ನಿರ್ದೇಶನಗಳನ್ನು ನಾವು ನೀಡಿದ್ದೇವು. ನಮಗೆ ಕಾಲವಾಕಾಶ ಕಡಿಮೆ ಇತ್ತು. ಆದ್ದರಿಂದ ಆಗಬಾರದಂತಹ ಅನಾಹುತವಾಗಿದೆ. ಇದನ್ನು ನಾವು ಜವಾಬ್ದಾರಿಯವ ತೆಗೆದುಕೊಳ್ಳಲಿದ್ದೇವೆ. ಇದರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಈ ಘಟನೆ, ಹನ್ನೊಂದು ಜನರ ಸಾವನ್ನು ಸಮರ್ಥಿಸಿಕೊಳ್ಳು ಆಗುವುದಿಲ್ಲ ಎಂದು ಹೇಳಿದ್ದಾರೆ.
ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಯುವಕರು ಮೃತಪಟ್ಟಿದ್ದಾರೆ. ಇದೊಂದು ದೊಡ್ಡ ಘಟನೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ, ಅದನ್ನು ನಾವು ಮಾಡುತ್ತೇವೆ ನಮ್ಮ ಸರ್ಕಾರದ ಇದೆಲ್ಲವನ್ನು ನೋಡಿಕೊಳ್ಳುತ್ತದೆ. ಅದ ಘಟನೆಯ ಹೊಣೆ ಹೊರಬೇಕಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ಈ ಮೂಲಕ ವಿಪಕ್ಷಗಳು, ಸಾರ್ವಜನಿಕರು, ಮಾಧ್ಯಮಗಳು, ಸರ್ಕಾರಕ್ಕೆ ಆರ್‌ಸಿಬಿ ಗೆಲುವಿನ ಬೆನ್ನಲ್ಲೆ ಬೃಹತ್ ವಿಜಯೋತ್ಸವ ಆಚರಿಸುವ ಅವಸರ ಏನಿತ್ತು?. ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಸುವ ಅಗತ್ಯವೇನಿತ್ತು? ಪೊಲೀಸರ ಸೂಚನೆ ಸರ್ಕಾರ ಪಾಲಿಸಿಲ್ಲ ಎಂಬ ಪ್ರಶ್ನೆ, ಆರೋಪಗಳಿಗೆ ಸಚಿವರು ಉತ್ತರ ನೀಡಿದಂತಿದೆ.
ಮೃತರ ಕುಟುಂಬಗಳಿಗೆ ಸರ್ಕಾರ ಎಲ್ಲ ನೆರವು: ಸಚಿವ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ತಂಡದ ವಿಜಯೋತ್ಸವ ಆಚರಣೆಯ ವೇಳೆ ಉಂಟಾದ ಕಾಲ್ತುಳಿತದ ದುರಂತವು ಅತ್ಯಂತ ಅಘಾತಕಾರಿ ಎಂದು ಬುಧವಾರ ಅವಘಡ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆಯವರು ಎಕ್ಸ್ ಪೋಸ್ಟ್ ಮಾಡಿದ್ದರು. ಸರ್ಕಾರ ಕೈಗೊಂಡ ರಕ್ಷಣಾ ವ್ಯವಸ್ಥೆಗಳನ್ನೂ ಮೀರಿ ಅನಿರೀಕ್ಷಿತವಾಗಿ ಉಂಟಾದ ಕಾಲ್ತುಳಿತದಿಂದ ಹಲವರು ಗಾಯಗೊಂಡು, ಸುಮಾರು 11 ಜನರು ಸಾವನ್ನಪ್ಪಿ ಸಂಭ್ರಮದ ಸಮಾರಂಭವು ಶೋಕವಾಗಿ ಮಾರ್ಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದರು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಮೃತರ ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಸರ್ಕಾರವು ಮೃತರ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ಹಾಗೂ ನೈತಿಕ ಸ್ಥೈರ್ಯ ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದರು.












Click it and Unblock the Notifications