ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬಂತು ಮೊಬೈಲ್ ಆಪ್
ಬೆಂಗಳೂರು, ಜನವರಿ, 22: ಬೆಂಗಳೂರು ಮೂಲದ ದೀಕ್ಷಾ ಕೋಚಿಂಗ್ ಸೆಂಟರ್ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಈ ಅಪ್ಲಿಕೇಶನ್ ನೆರವಾಗಲಿದೆ.
ಮುಂದಿನ ಮಾರ್ಚ್ ನಲ್ಲಿ ನಡೆಯಲಿರುವ ದ್ವಿತೀಯ ಪಿಯು ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲು ಈ ಅಪ್ಲಿಕೇಶನ್ ನೆರವಾಗುತ್ತದೆ ಎಂದು ದೀಕ್ಷಾ ಸೆಂಟರ್ ನ ಸಹ ಸಂಸ್ಥಾಪಕ ಲಲಲಿತ್ ಶ್ರೀಧರ್ ಮಾಹಿತಿ ನೀಡಿದ್ದಾರೆ.[2016ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ]

ಅಪ್ಲಿಕೇಶನನ್ ನಲ್ಲಿ ಎರಡು ಆಯ್ಕೆಗಳನ್ನು ನೀಡಲಾಗಿದೆ. ಪಾಸಿಂಗ್ ಮತ್ತು ಡಿಸ್ಟಿಂಕಶನ್ ಎಂಬ ಆಯ್ಕೆಗಳಿದ್ದು ಪರೀಕ್ಷಾ ಪೂರ್ವ ಸಿದ್ಧತೆಗೆ ಬೇಕಾದ ಸಕಲ ಮಾಹಿತಿಯನ್ನು ಇದು ನೀಡುತ್ತದೆ. ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಎಲ್ಲ ವಿಷಯಗಳ ಆಧಾರದಲ್ಲಿ ಪ್ರಶ್ನೆಗಳನ್ನು ಸಿದ್ಧಮಾಡಿ ನೀಡಲಾಗಿದ್ದು ವಿದ್ಯಾರ್ಥಿ ಸ್ನೇಹಿಯಾಗಿದೆ ಎಂದು ಶ್ರೀಧರ್ ತಿಳಿಸಿದ್ದಾರೆ.[2015ರ ಜಿಲ್ಲಾವಾರು ಫಲಿತಾಂಶ ನೋಡಿ]
2ಜಿ ಮತ್ತು 3ಜಿ ಮೂಲಕ ಸೇವೆಯನ್ನು ಪಡೆದುಕೊಳ್ಳಬಹುದು. ವಿಡಿಯೋ ಕಾಮೆಂಟರಿಯನ್ನು ಸಹ ವೀಕ್ಷಣೆ ಮಾಡಬಹುದಾಗಿದೆ. ಇದು ಉತ್ತಮ ಫಲಿತಾಂಶ ನೀಡಲು ನೆರವಾಗುವುದರಲ್ಲಿ ಅನುಮಾನವಿಲ್ಲ ಎಂದು ಶ್ರೀಧರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications