Video: ಬೆಂಗಳೂರಿನ BMTC ಬಸ್ 'ಮೈಸೂರಲ್ಲಿ' ಪ್ರತ್ಯೆಕ್ಷ: KSRTC ಬಸ್‌ಗಳ ಕೊರತೆಯೇ? ಎಂದ ನೆಟ್ಟಿಗರು..!
ಬೆಂಗಳೂರು, ಜನವರಿ 15: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್ ನಗರ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಅಂತರ್ ಜಿಲ್ಲೆ ಪ್ರಯಾಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಹೀಗಿದ್ದರೂ ಸಹಿತ ಮೈಸೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೌದು, ಬೆಂಗಳೂರು ನಗರದ ಜನರಿಗೆ ಸೇವೆ ನೀಡುವ ಬಿಎಂಟಿಸಿ ಬಸ್‌ಗಳು ಮೈಸೂರಿನಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಬಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಈ ವಿಚಾರವನ್ನು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಉದ್ಯಾನ ನಗರಿಯ ಬಸ್‌ಗಳು ಅರಮನೆ ನಗರಿಯಲ್ಲಿ ಓಡಾಡುತ್ತಿವೆ. ಇದರಿಂದಾಗಿ ರಾಜ್ಯದ ತುಂಬೆಲ್ಲ ಅಂತರ್ ಜಿಲ್ಲೆಗಳಿಗೆ ಬಸ್ ಸೇವೆ ನೀಡುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳಲ್ಲಿ ಕೊರತೆ ಆಗಿವೆಯೇ? ಎಂದು ಕೇಳಲಾಗುತ್ತಿದೆ.
ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್
ಈ ಕುರಿತು ಮೈಸೂರು ಮಿತ್ರ ಎಂಬ x ಹ್ಯಾಂಡಲ್‌ನಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದೆ. ಇದರಲ್ಲಿ ಮೈಸೂರಿನ ಪ್ರಮುಖ ವೃತ್ತಗಳಲ್ಲಿ ಬಿಎಂಟಿಸಿ ಬಸ್ ಬೋರ್ಡ್‌ನ ಬಸ್‌ಗಳು ಸಂಚರಿಸುತ್ತಿವೆ. 'ಬೆಂಗಳೂರು-ಮೈಸೂರು' ಮಾರ್ಗದಲ್ಲಿ ಬಿಎಂಟಿಸಿ ಬಸ್‌ಗಳು ಓಡಾಡುತ್ತಿವೆ. ಹಾಗಾದರೆ, KSRTC ಬಸ್‌ಗಳಲ್ಲಿ ಕೊರತೆ ಉಂಟಾಗಿದೆಯೇ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಲಾಗಿದೆ.
ಮೈಸೂರು - ಬೆಂಗಳೂರು ರೂಟ್ ನಲ್ಲಿ ಓಡಾಡೋ @KSRTC_Journeys ಬಸ್ ಗಳಲ್ಲಿ ಕೊರತೆ ಉಂಟಾಗಿದ್ಯಾ..? @BMTC_BENGALURU ಬಸ್ ಗೋಳನ್ನು ಬಳಸುತ್ತಾಯಿದ್ದಿರಾ..#ksrtc #bmtc #mysuru pic.twitter.com/c1MDV5vxts
— ಮೈಸೂರಿನ_ಮಿತ್ರ (@mysurina_mitra) January 15, 2024
KSRTC ವಿಫಲವಾಯಿತೆ?
ಕೆಎಸ್‌ಆರ್‌ಟಿಸಿ ಬಸ್‌ಗಳು ಈ ಜನದಟ್ಟಣೆ ನಿರ್ವಹಿಸುವುದರಲ್ಲಿ ವಿಫಲವಾಗಿವೆ. ಅದಕ್ಕೆ ಅಂತರ್‌ನಗರಗಳಿಗೆ ಬಿಎಂಟಿಸಿ ಬಸ್‌ಗಳನ್ನು ಬಳಸುತ್ತಿದ್ದಾರೆ. ಬೆಂಗಳೂರಿನಿಂದ ಮೈಸೂರು, ಕೊಳ್ಳೆಗಾಲ, ದಾವಣಗೆರೆ, ಚಿತ್ರದುರ್ಗ, ಪಾವಗಡ, ಹಾಸನ, ಧರ್ಮಸ್ಥಗಳ ಮಾರ್ಗದಲ್ಲಿಯೂ ಈ ಬಿಎಂಟಿಸಿ ಬಸ್‌ಗಳು ಓಡಾಡುತ್ತಿವೆ ಎಂದು ಕಾಮೆಂಟ್ ಮಾಡಿದ್ದಾರೆ.

ಅಂತರನಗರಗಳ ಸಂಪರ್ಕಕ್ಕೆ ಕೆಎಸ್‌ಆರ್‌ಟಿಸಿ ಬಸ್ ಬಳಸಿ, ಯಾಕೆ ಬಿಎಂಟಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪೋಸ್ಟ್ ಅನ್ನು ಪೊಲೀಸರಿಗೆ, ಸಂಬಂಧಿಸಿದವರಿಗೆ ಟ್ಯಾಗ್ ಮಾಡುವಂತೆ ಒತ್ತಾಯಿಸಿದ್ದಾರೆ.
ಹಬ್ಬದ ಸಂಬಂಧ ತಾತ್ಕಾಲಿಕ ಕಾರ್ಯಚರಣೆ?
ಸಂಕ್ರಾಂತಿ ಹಬ್ಬ ಸಂಬಂಧ ಬೆಂಗಳೂರಿನಿಂದ ವಿವಿಧೆಡೆ ಬಸ್‌ಗಳ ಓಡಾಟ, ಆವರ್ತನ ಹೆಚ್ಚಿರುತ್ತದೆ. ಹಬ್ಬಕ್ಕೆ ತೆರಳುವವರ ಸಂಖ್ಯೆ ಅಧಿಕವಾಗಿರುತ್ತದೆ. ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಬಿಟ್ಟಿದೆ. ಹೀಗಿದ್ದರೂ ಹಬ್ಬದ ಋತುವಿನ ಸಂಬಂಧ ಬಿಎಂಟಿಸಿ ಬಸ್‌ಗಳನ್ನು ತಾತ್ಕಾಲಿಕವಾಗಿ ಬಳಕೆ ಮಾಡುತ್ತಿದ್ದಾರೆ. ಹಬ್ಬದ ಜನ ದಟ್ಟಣೆ ನಿರ್ವಹಣೆಗಾಗಿ ಹೀಗೆ ಮಾಡಲಾಗಿದೆ ಅಂತಲೂ ಕೆಲವರು ಮಾತನಾಡುತ್ತಿದ್ದಾರೆ. ಆದರೆ ಈ ಬಗ್ಗೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಆಗಲಿ, ಅಧಿಕಾರಿಗಳಾಗಲಿ ಸಾರ್ವಜನಿಕ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಸಾರಿಗೆ ಇಲಾಖೆಯು ನಗರ ಬಸ್‌ಗಳನ್ನು ಅಂತರ್‌ಜಿಲ್ಲೆಗಳ ಮಾರ್ಗಗಳಲ್ಲಿ ಬಳಸುತ್ತಿರುವ ಪ್ರತಿಕ್ರಿಯಿಸುವ ನಿರೀಕ್ಷೆಗಳು ಇವೆ.












Click it and Unblock the Notifications