ಕೆಪಿಸಿಸಿಗೆ ಇದ್ದಾರೆ 'ಬೇನಾಮಿ ಅಧ್ಯಕ್ಷೆ': ಏನಿದು ಬಿಜೆಪಿ ಹೊಸ ಹೇಳಿಕೆ?
ಬೆಂಗಳೂರು, ಏ.16: ಕೆಪಿಸಿಸಿಯ ಅಧ್ಯಕ್ಷ ಹಾಗೂ ಕೆಪಿಸಿಸಿಯ ʼಸೂಪರ್ ಅಧ್ಯಕ್ಷೆʼ ಇಬ್ಬರೂ ಅಕ್ರಮಗಳ ಸರದಾರರು...
Koo Appಕೆಪಿಸಿಸಿಯ ಅಧ್ಯಕ್ಷ ಹಾಗೂ ಕೆಪಿಸಿಸಿಯ ʼಸೂಪರ್ ಅಧ್ಯಕ್ಷೆʼ ಇಬ್ಬರೂ ಅಕ್ರಮಗಳ ಸರದಾರರು. ಬೇನಾಮಿ ಅಧ್ಯಕ್ಷೆ ಬೇನಾಮಿ ಕಾಮಗಾರಿ ನಡೆಸುವುದರಲ್ಲೂ ಎತ್ತಿದ ಕೈ. ಕಾರ್ಯಾದೇಶ ಇಲ್ಲದ ಕಾಮಗಾರಿಗಳಿಗೆ ಕೋಟಿ ಕೋಟಿ ಸುರಿಯುವ ಧೈರ್ಯ ಖಂಡಿತವಾಗಿ ಒಬ್ಬ ಸಣ್ಣ ಗುತ್ತಿಗೆದಾರ ಮಾಡಲಾರ. ಇದರ ಹಿಂದೆ #ಬೇನಾಮಿಅಧ್ಯಕ್ಷೆ ಯ ಕೈವಾಡವಿದೆ. - BJP KARNATAKA (@BJP4Karnataka) 16 Apr 2022
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಆದರೆ, ಬೇನಾಮಿ ಅಧ್ಯಕ್ಷೆ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಎಂಬುದನ್ನು ನೇರವಾಗಿ ಹೇಳದೆ ಸೂಚ್ಯವಾಗಿ ಹೇಳುವಂತಹ ಹಲವು ಕೂಗಳನ್ನು ಬಿಜೆಪಿ ಕರ್ನಾಟಕ ಶನಿವಾರ ಪ್ರಕಟಿಸಿದೆ.
ಬೇನಾಮಿ ಅಧ್ಯಕ್ಷೆ ಬೇನಾಮಿ ಕಾಮಗಾರಿ ನಡೆಸುವುದರಲ್ಲೂ ಎತ್ತಿದ ಕೈ. ಕಾರ್ಯಾದೇಶ ಇಲ್ಲದ ಕಾಮಗಾರಿಗಳಿಗೆ ಕೋಟಿ ಕೋಟಿ ಸುರಿಯುವ ಧೈರ್ಯ ಖಂಡಿತವಾಗಿ ಒಬ್ಬ ಸಣ್ಣ ಗುತ್ತಿಗೆದಾರ ಮಾಡಲಾರ. ಇದರ ಹಿಂದೆ #ಬೇನಾಮಿಅಧ್ಯಕ್ಷೆ ಯ ಕೈವಾಡವಿದೆ ಎಂದು ಆರೋಪಿಸಿದೆ.

ಕೆಪಿಸಿಸಿಯ ಬೇನಾಮಿ ಅಧ್ಯಕ್ಷೆಯ ಆಸ್ತಿ ಹೆಚ್ಚಳದ ಹಿಂದಿರುವ ವ್ಯಕ್ತಿ ಹಾಗೂ ಶಕ್ತಿ ಯಾರು? ಇವರ ಅಕ್ರಮದ ಆಚಾರ- ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಇದು ಸಕಾಲ. ಸಕ್ರಮ ಮಾರ್ಗದಲ್ಲಿ ಇಷ್ಟೊಂದು ಸಂಪತ್ತು ಗಳಿಸಲು ಸಾಧ್ಯವೇ? ಎಂದು ಪ್ರಶ್ನಿಸಲಾಗಿದೆ.

ಓಟು, ನೋಟಿಗಾಗಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಹೊರಟ ಬೇನಾಮಿ ಅಧ್ಯಕ್ಷೆ ಇಂದು ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಅಕ್ರಮವನ್ನೇ ರಾಜಕಾರಣ ಎಂದುಕೊಂಡಿರುವ ಕೆಪಿಸಿಸಿಯ ಸೂಪರ್ ಅಧ್ಯಕ್ಷೆ ತಮ್ಮ ಅಕ್ರಮಗಳ ಬಗ್ಗೆ ಮಾತನಾಡುವ ಧೈರ್ಯ ತೋರುವರೇ? ಎಂದಿದೆ.
ಕೆಪಿಸಿಸಿಯ ಬೇನಾಮಿ ಅಧ್ಯಕ್ಷೆಯ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಸಚಿವನಾಗಿದ್ದ ಅವಧಿಯಲ್ಲಿ ಭ್ರಷ್ಟಾಧ್ಯಕ್ಷ ನಡೆಸಿದ ಅವ್ಯವಹಾರಗಳ ಬಗ್ಗೆ ಬೆಳಕು ಚೆಲ್ಲಬೇಕೇ? ಬೆಳಗಾವಿಯ "ಲಕ್ಷ್ಮಿ"ಗೆ ಮಂಗಳೂರು, ಉತ್ತರ ಕನ್ನಡ ಹಾಗೂ ಇನ್ನಿತರ ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಂದ ನೂರಾರು ಕೋಟಿ ಸಾಲ ಕೊಡಿಸಿದ್ದರ ಹಿಂದೆ ಭ್ರಷ್ಟಾಧ್ಯಕ್ಷನ ಕೈವಾಡ ಇಲ್ಲವೇ?
Koo Appಕೆಪಿಸಿಸಿಯ #ಬೇನಾಮಿಅಧ್ಯಕ್ಷೆ ಯ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಸಚಿವನಾಗಿದ್ದ ಅವಧಿಯಲ್ಲಿ #ಭ್ರಷ್ಟಾಧ್ಯಕ್ಷ ನಡೆಸಿದ ಅವ್ಯವಹಾರಗಳ ಬಗ್ಗೆ ಬೆಳಕು ಚೆಲ್ಲಬೇಕೇ? ಬೆಳಗಾವಿಯ ”ಲಕ್ಷ್ಮಿ”ಗೆ ಮಂಗಳೂರು, ಉತ್ತರ ಕನ್ನಡ ಹಾಗೂ ಇನ್ನಿತರ ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಂದ ನೂರಾರು ಕೋಟಿ ಸಾಲ ಕೊಡಿಸಿದ್ದರ ಹಿಂದೆ ಭ್ರಷ್ಟಾಧ್ಯಕ್ಷನ ಕೈವಾಡ ಇಲ್ಲವೇ? - BJP KARNATAKA (@BJP4Karnataka) 16 Apr 2022












Click it and Unblock the Notifications