ದಾವಣಗೆರೆ : ಹೊನ್ನಾಳಿಯಲ್ಲಿ ಬಾಂಗ್ಲಾದೇಶದ ಉಗ್ರನ ಬಂಧನ

ದಾವಣಗೆರೆ, ಜ.29 : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಜಮಾಯಿತುಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ ಸಂಘಟನೆಯ ಉಗ್ರನನ್ನು ಬಂಧಿಸಲಾಗಿದೆ. ಹೊನ್ನಾಳಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.

ಬಂಧಿತ ಉಗ್ರನನ್ನು ಪಬನೂರ್‌ ಹುಸೇನ್‌ (29)ಎಂದು ಗುರುತಿಸಲಾಗಿದೆ. ಜಮಾಯಿತುಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ ಉಗ್ರ ಸಂಘಟನೆಯಲ್ಲಿದ್ದ ಈತ ಕೆಲವು ದಿನಗಳ ಹಿಂದೆ ಅಸ್ಸಾಂನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿಯೂ ಭಾಗಿಯಾಗಿದ್ದಾನೆ ಎಂಬ ಶಂಕೆ ಇದೆ.

JMB

ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಅನ್ವಯ ದಾಳಿ ನಡೆಸಿರುವ ಹೊನ್ನಾಳಿ ಪೊಲೀಸರು ಶಿವಮೊಗ್ಗ ಹೆದ್ದಾರಿಯಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹುಸೇನ್‌ಅನ್ನು ವಶಕ್ಕೆ ಪಡೆದಿದ್ದಾರೆ.[ಬೆಂಗಳೂರಿನಲ್ಲಿ ಶಂಕಿತ ಬೋಡೋ ಉಗ್ರನ ಬಂಧನ]

ಹುಸೇನ್‌ನನ್ನು ದಾವಣಗೆರೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ಈತ ಹೊನ್ನಾಳಿಗೆ ಆಗಮಿಸಿದ್ದು ಹೇಗೆ ಎಂಬ ವಿಚಾರ ತನಿಖೆ ನಂತರ ತಿಳಿದುಬರಲಿದೆ. [ಬರ್ದ್ವಾನ್ ಸ್ಫೋಟ ಆರೋಪಿಗೆ ಆಶ್ರಯ: ಪೇದೆ ವಿಚಾರಣೆ]

ಜಮಾಲ್-ಉಲ್-ಮುಜಾಹಿದೀನ್(ಜೆಎಂಬಿ) ಬಾಂಗ್ಲಾದೇಶದ ನಿಷೇಧಿತ ಇಸ್ಲಾಮಿ ಉಗ್ರ ಸಂಘಟನೆಯಾಗಿದ್ದು, ಪಶ್ಚಿಮ ಬಂಗಾಳದ ಬರ್ದ್ವಾನ್‌ ಸ್ಫೋಟ ಪ್ರಕರಣದಲ್ಲಿ ಈ ಸಂಘಟನೆಯ ಸದಸ್ಯರು ಭಾಗಿಯಾಗಿದ್ದಾರೆ. ದೇಶದಲ್ಲಿ ಈಗಾಗಲೇ 9 ಕ್ಕೂ ಹೆಚ್ಚು ಜೆಎಂಬಿ ಉಗ್ರರನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+