ಬೆಂ ದಕ್ಷಿಣ: ಅನಂತ್, ನಿಲೇಕಣಿ ವಿರುದ್ಧ ಜಸ್ಟೀಸ್ ಸ್ಪರ್ಧೆ

ಈಗಾಗಲೇ ರಂಗೇರಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಜೆ ಸದಾಶಿವ ಅಥವಾ ಮಾಜಿ ಉಪ ಲೋಕಾಯುಕ್ತ ಚಂದ್ರಶೇಖರಯ್ಯ ಅವರನ್ನು ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆಸಿದೆ. [ನಿಲೇಕಣಿ ದಾಕ್ಷಿಣ್ಯದಲ್ಲಿ ಕಾಂಗ್ರೆಸ್ ಪಕ್ಷ: ಕಾರ್ಯಕರ್ತರು ಕಿಡಿ]
ಸದರಿ ಕ್ಷೇತ್ರದಿಂದ ಬಿಜೆಪಿಯ ಅಜೇಯ ಸಂಸದ ಅನಂತ ಕುಮಾರ್ ಮತ್ತು ಕಾಂಗ್ರೆಸ್ಸಿನಿಂದ ನಂದನ್ ನಿಲೇಕಣಿ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹಾಗಾಗಿ, ಈ ಎರಡೂ ಪಕ್ಷಗಳಿಗೆ ಮರ್ಮಾಘಾತ ನೀಡಲು ಜೆಡಿಎಸ್ ತನ್ನದೇ ಆ ದ ಕಾರ್ಯತಂತ್ರ ಹೆಣೆಯುತ್ತಿದೆ. ನಿವೃತ್ತ ನ್ಯಾಯಮೂರ್ತಿಯೊಬ್ಬರಿಗೆ ಟಿಕೆಟ್ ನೀಡಿ ಎರಡೂ ಪಕ್ಷಗಳಿಗೆ ಟಾಂಗ್ ಕೊಡುವುದು ಇದರ ಉದ್ದೇಶವಾಗಿದೆ.
ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಮತ್ತು ಒಕ್ಕಲಿಗ ಮತಗಳು ನಿರ್ಣಾಯಕ. ಅನಂತ ಕುಮಾರ್, ನಂದನ್ ನಿಲೇಕಣಿ ಇಬ್ಬರೂ ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅದೇ ರೀತಿ ಜಸ್ಟೀಸ್ ಸದಾಶಿವ ಕೂಡ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವುದರಿಂದ ಆ ಸಮುದಾಯದ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದು ಎಂಬುದು ಜೆಡಿಎಸ್ ಪಕ್ಷದ ಸರಳ ಲೆಕ್ಕಾಚಾರ.
ಇನ್ನು, ಬ್ರಾಹ್ಮಣ ಸಮುದಾಯದವರನ್ನು ಬಿಟ್ಟರೆ ಒಕ್ಕಲಿಗ ಸಮುದಾಯದವರು ಇಲ್ಲಿ ಹೆಚ್ಚಾಗಿದ್ದಾರೆ. ಅದಕ್ಕೆ ತಕ್ಕಂತೆ ಮಾಜಿ ಉಪ ಲೋಕಾಯುಕ್ತ ಚಂದ್ರಶೇಖರಯ್ಯ ಅವರನ್ನು ಕಳಕ್ಕಿಳಿಸಿದರೆ ಹೇಗೆ? ಎಂಬ ಚಿಂತನೆಯೂ ಜೆಡಿಎಸ್ಸಿನಲ್ಲಿ ನಡೆದಿದೆ. [ ಮೂರು ಪತ್ರದ ಮೂಲಕ ಬಿಜೆಪಿ ಮನೆ-ಮನೆ ಪ್ರಚಾರ ]
ಪದ್ಮನಾಭ ನಗರ, ವಿಜಯನಗರ, ಗೋವಿಂದರಾಜ ನಗರ, ಬಸವನಗುಡಿ, ಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿನ ಗೌಡರ ಮತಗಳು ನಿರ್ಣಾಯಕವಾಗಲಿವೆ. ಆದ್ದರಿಂದ ಬೆಂಗಳೂರು ಲೋಕಸಭಾ ಕ್ಷೇತ್ರಕ್ಕೆ ಚಂದ್ರಶೇಖರಯ್ಯ ಮತ್ತು ಎಜೆ ಸದಾಶಿವ ಇಬ್ಬರೂ ಸಲ್ಲುತ್ತಾರೆ. ಅವರ ಪೈಕಿ ಒಬ್ಬರನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠ ದೇವೇಗೌಡರು ತಮ್ಮದೇ ಆದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.












Click it and Unblock the Notifications