ದೇಹ ತೂಕ ತಪ್ಪಿತು: ಬೇಸತ್ತ ಯುವ ಟೆಕ್ಕಿ ನೇಣಿಗೆ

ಮೂಲತಃ ಆಂಧ್ರ ವಿಜಯವಾಡದ ಕೆ. ವಂಶೀಕೃಷ್ಣ (24) ಆತ್ಮಹತ್ಯೆ ಶರಣಾಗಿರುವ ಟೆಕ್ಕಿ. ಒಂದು ತಿಂಗಳ ಹಿಂದಷ್ಟೆ ನಗರದ 'ಹನಿವೆಲ್' ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಉದ್ಯೋಗಕ್ಕೆ ಸೇರಿದ್ದು, ಪಣತ್ತೂರಿನ ಅರುಣಾ ಲಕ್ಸುರಿ ಪಿಜಿ ಹಾಸ್ಟೆಲಿನಲ್ಲಿ ವಾಸ್ತವ್ಯ ಹೂಡಿದ್ದರು.
ಬುಧವಾರ ರಾತ್ರಿ ಒಂಬತ್ತು ಗಂಟೆಯಲ್ಲಿ ಟವಲ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ನೇಹಿತರೊಬ್ಬರು ಈತನ ಮೊಬೈಲಿಗೆ ಕರೆ ಮಾಡಿದ್ದರೂ ಕರೆ ಸ್ವೀಕರಿಸಲಿಲ್ಲ. ತಕ್ಷಣ ಆತ ಪಿಜಿ ಮಾಲೀಕರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಆಗ ಪಣತ್ತೂರಿನಲ್ಲಿರುವ ಪಿಜಿ ಮಾಲೀಕ ವಂಶೀಕೃಷ್ಣ ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಆನಾರೋಗ್ಯದಿಂದ ಬೇಸತ್ತು ನೇಣಿಗೆ ಶರಣಾಗಿರಬಹುದೆಂದು ಶಂಕಿಸಿರುವ ಎಚ್‌ಎಎಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇಹ ತೂಕ ತಪ್ಪಿತ್ತು:
ಆದರೆ ವಂಶಿ ಸ್ನೇಹಿತರ ಪ್ರಕಾರ ದೇಹ ತೂಕ ಹೆಚ್ಚಾಗಿದ್ದ ಕಾರಣ ವಂಶಿ ಆಯುರ್ವೇದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದ. ಅವುಗಳಿಂದ ನಿರೀಕ್ಷಿತ ಫಲಿತಾಂಶ ಸಿಗದಿದ್ದರಿಂದ ಬೇಸರಗೊಂಡಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರ ಮುಂದೆ ಹೇಳಿದ್ದಾರೆ.












Click it and Unblock the Notifications