ಬೆಳಗಾವಿ ಅಧಿವೇಶನ : ಅನುದಾನ ಕೊಡಿ ಪೂಜೆ ಮಾಡ್ತಿವಿ

ಬೆಳಗಾವಿ, ಜುಲೈ 09 : ಸರ್ಕಾರ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಪ್ರತಿವರ್ಷ 15 ಸಾವಿರ ಕೋಟಿ ಅನುದಾನ ನೀಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋಗೆ ಪೂಜೆ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಇಂದು ವಿಧಾನಸಭೆಯಲ್ಲಿ ಹೇಳಿದರು.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಮೂರು ವರ್ಷಗಳಿವೆ ಪ್ರತಿವರ್ಷ 15 ಸಾವಿರ ಕೋಟಿ ನೀಡಿ, ಬಸವಣ್ಣನ ಜೊತೆ ನಿಮ್ಮ ಫೋಟೋ ಹಾಕಿಕೊಂಡು ಪೂಜಿಸುತ್ತೇವೆ ಎಂದರು.

ಅನುದಾನ ನೀಡಿದರೆ ಮಾತ್ರ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಕೇವಲ ಸದನದಲ್ಲಿ ಖಾಲಿ ಖುರ್ಚಿಗಳ ಮುಂದೆ ಮಾತನಾಡಿದರೆ, ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಸದನಕ್ಕೆ ಗೈರು ಹಾಜರಾಗಿದ್ದ ಶಾಸಕರನ್ನು ಛೇಡಿಸಿದರು.

ಶಾಸಕರೂ ಗೈರು, ಸಚಿವರು ಗೈರು : ಮುಂಗಾರು ಅಧಿವೇಶನದ 9ನೇ ದಿನದ ಕಲಾಪ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಿದೆ. ಸದನಕ್ಕೆ ಶಾಸಕರು ಮತ್ತು ಸಚಿವರು ಗೈರು ಹಾಜರಾಗಿರುವುದಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರದ ಕಲಾಪ ಆರಂಭವಾಗುವಾಗ 32 ಶಾಸಕರು ಮತ್ತು 4 ಸಚಿವರು ಮಾತ್ರ ಸದನದಲ್ಲಿ ಹಾಜರಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ, ಹೀಗೆ ನೀರಸ ಪ್ರತಿಕ್ರಿಯೆ ದೊರೆತರೆ ಹೇಗೆ? ಎಂದು ಪ್ರಶ್ನಿಸಿದರು. [ಹಾಸಿಗೆ-ದಿಂಬು ಖರೀದಿ ಹಗರಣ, ಮೆತ್ತಗಾದ ಸರ್ಕಾರ]

assembly session

ಎಲ್ಲಾ ಪಕ್ಷದ ಸದಸ್ಯರು ಗೈರು ಹಾಜರಾಗಿದ್ದಾರೆ. ಸದನವನ್ನು ಏನೆಂದು ತಿಳಿದುಕೊಂಡಿದ್ದೀರಿ? ಎಂದು ಕಾಗೋಡು ತಿಮ್ಮಪ್ಪ ಅವರು ಅಸಮಾಧಾನ ಹೊರಹಾಕಿದರು. 'ಸದನ ಸತ್ತವರ ಮನೆ ಹರಿಕಥೆಯಂತಾಗಿದೆ. ಕೆಲವು ಸದಸ್ಯರು ಮಾತ್ರ ಇದ್ದಾರೆ' ಎಂದು ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+