ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?

By ರೋಹಿಣಿ ಜಿ.ಎಂ., ಬಳ್ಳಾರಿ
|
Google Oneindia Kannada News

Recommended Video

ವೀಕ್ಷಿಸಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಹಂಪಿಯನ್ನ ಗಾಯಬ್ ಮಾಡಿದ ಭಾರತೀಯ ಪುರಾತತ್ವ ಇಲಾಖೆ | Oneindia Kannada

ಬೆಂಗಳೂರು/ಬಳ್ಳಾರಿ, ಆಗಸ್ಟ್ 1: ಹಂಪಿಗೆ ಜಾಹೀರಾತು ಮಾಡುವ ತುರ್ತು ಅಗತ್ಯ ಇಲ್ಲ. ವಿಶ್ವದ ಜನಪ್ರಿಯ ಪ್ರವಾಸಿ ತಾಣಗಳ ಪೈಕಿ ಹಂಪಿ ಸೇರಿದಂತೆ ಭಾರತದ ಇಪ್ಪತ್ತೈದು ಐತಿಹಾಸಿಕ, ಧಾರ್ಮಿಕ ಹಾಗೂ ಪ್ರಾಚ್ಯಶಿಲ್ಪ ಹಿನ್ನೆಲೆಯುಳ್ಳ ಸ್ಥಳಗಳು ಸ್ಥಾನ ಪಡೆದಿವೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಕಮಲಾಪುರ ವೃತ್ತದ ಹಿರಿಯ ಅಧಿಕಾರಿ ಮೂರ್ತೇಶ್ವರಿ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಇರುವ ಹಂಪಿಯು ಭಾರತೀಯ ಪುರಾತತ್ವ ಇಲಾಖೆ ಮಾಡಿರುವ ಕಡ್ಡಾಯವಾಗಿ ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಿಂದ ಬಿಟ್ಟುಹೋಗಿರುವ ಬಗ್ಗೆ ಎದ್ದಿರುವ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದರು.

ಹಂಪಿ ಸೇರಿ ರಾಜ್ಯದ ಐದು ಪ್ರವಾಸಿ ತಾಣಗಳ ಅಭಿವೃದ್ಧಿಹಂಪಿ ಸೇರಿ ರಾಜ್ಯದ ಐದು ಪ್ರವಾಸಿ ತಾಣಗಳ ಅಭಿವೃದ್ಧಿ

ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ ಹಂಪಿಯನ್ನು ವಿಶೇಷವಾಗಿ ಪರಿಗಣಿಸಿ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ವಿಶೇಷ ಸವಲತ್ತು ನೀಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಹಂಪಿಯನ್ನು ಮಹತ್ವಪೂರ್ಣ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಿಂದ ಕೈ ಬಿಡಲು ಸಾಧ್ಯವೇ ಇಲ್ಲ ಎಂದರು.

ASI leaves out Hampi from its must see list

ಬೆಳಕಿಗೆ ಬಾರದ ಕೆಲ ಮೌಲ್ಯಯುಕ್ತ ಪ್ರವಾಸಿ ತಾಣಗಳನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಒಂದು ಪ್ರತ್ಯೇಕ ಪಟ್ಟಿ ರಚಿಸಿದ್ದು, ಅದರಲ್ಲಿ ಎಲ್ಲವೂ ಹೊಸ ಸ್ಥಳಗಳಿವೆ ಎಂದು ಅವರು ಸ್ಪಷ್ಟಪಡಿಸಿದರು.

ಭಾರತೀಯ ಪುರಾತತ್ವ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈ ಪಟ್ಟಿಯನ್ನು ಸಿದ್ಧಪಡಿಸಿರುವ ಸಂಸ್ಕೃತಿ ಸಚಿವಾಲಯ. ಕಲೆ, ವಾಸ್ತುಶಿಲ್ಪ ಮತ್ತಿತರ ಕಾರಣಗಳಿಗೆ ವಿಶಿಷ್ಟ ಎನಿಸುವ ಸ್ಥಳಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಕರ್ನಾಟಕ ಇತಿಹಾಸ ಅಕಾಡೆಮಿ ಉಪಾಧ್ಯಕ್ಷ ಎಚ್.ಎಸ್.ಗೋಪಾಲರಾವ್ ಮಾತನಾಡಿ, ಹಂಪಿ ಹಾಗೂ ನಳಂದವನ್ನು ಪಟ್ಟಿಯಿಂದ ಕೈ ಬಿಟ್ಟಿರುವುದರಿಂದ ಆಘಾತವಾಗಿದೆ. ನೀವು ಪ್ರೇಕ್ಷಣೀಯ ಸ್ಥಳಗಳ ಪ್ರಚಾರ ಮಾಡುವುದಕ್ಕೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹಂಪಿ ಬೇಡವೆ ಎಂದು ಪ್ರಶ್ನಿಸಿದ್ದಾರೆ.

ಅಂದಹಾಗೆ, ಯುನೆಸ್ಕೋದ ಪಾರಂಪರಿಕ ಪಟ್ಟಿಯಲ್ಲಿ ಎಷ್ಟೋ ಸ್ಥಳಗಳು ಭಾರತೀಯ ಪುರಾತತ್ವ ಇಲಾಖೆಯ ಪಟ್ಟಿಯಲ್ಲಿ ಇಲ್ಲ. ಬಿಹಾರದ ನಳಂದ ಮಹಾವಿಹಾರ, ರಾಜಸ್ತಾನದ ಕೋಟೆ ಹೀಗೆ ಒಂದಿಷ್ಟು ಹೆಸರು ಕೈ ಬಿಡಲಾಗಿದೆ.

ಪುರಾತತ್ವ ಇಲಾಖೆಯ ವೆಬ್ ಸೈಟ್ ನಲ್ಲಿ ಕರ್ನಾಟಕ ರಾಜ್ಯದಲ್ಲಿ ವೀಕ್ಷಿಸಲೇಬೇಕಾದ ಸ್ಥಳಗಳ ಪಟ್ಟಿ ಗಮನಿಸಿದರೆ ಅದರಲ್ಲಿ ಹಂಪಿ ಹೆಸರು ಇಲ್ಲ.

English summary
Hampi has received global recognition with a Unesco world heritage tag. But it’s left out of the list of 98 must see sites by the Archaeological Survey of India. Here is the reason why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X