ಹನ್ಯಾಳು ಗ್ರಾಮದ ಸಚಿವ ಮಂಜುಗೆ ಬರ್ಥ್ ಡೇ ಗಿಫ್ಟ್!

ಹಾಸನ, ಅ.30: ದೇವರಹಟ್ಟಿ ಅಣ್ಣೇಗೌಡ ಹಾಗೂ ಮಾಯಮ್ಮ ಅವರ ಪುತ್ರ ಹನ್ಯಾಳು ಗ್ರಾಮದ ರೈತ ಕುಟುಂಬದ ಮಗ ಮಂಜು ಅವರು ಈಗ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ರಾಜ್ಯ ಸಚಿವರಾಗಿದ್ದಾರೆ. ಹನ್ಯಾಳು ಗ್ರಾಮದಲ್ಲಿ ಅವಧಿಗೂ ಮುನ್ನ ದೀಪಾವಳಿ ಹಬ್ಬದಾಚರಣೆ ಸಂಭ್ರಮ ಕಂಡು ಬಂದಿದೆ. ಜೊತೆಗೆ ನವೆಂಬರ್ 1 ರಂದು ಹುಟ್ಟಿರುವ ಮಂಜು ಅವರಿಗೆ ಸಿಕ್ಕಿರುವ ಮಂತ್ರಿ ಪದವಿ ಹುಟ್ಟುಹಬ್ಬದ ಕೊಡುಗೆ ಎಂದು ಕೊಂಡಾಡಲಾಗುತ್ತಿದೆ.

ಮಂಜು ಅವರು ವಿದ್ಯಾಭ್ಯಾಸ ಮಾಡಿರುವ ಹನ್ಯಾಳು, ಆನಂದೂರು, ಕೊಣನೂರು ಹಾಗೂ ಅರಕಲಗೂಡುಗಳಲ್ಲಿ ಸಂಭ್ರಮಾಚರಣೆ ಕಂಡು ಬಂದಿದೆ. ಮನೆ ದೇವತೆ ಹನ್ಯಾಳಮ್ಮನ ಪ್ರಭಾವದಿಂದಲೋ ಏನೋ ಮಂಜು ಅವರು ಹೆಚ್ಚಾಗಿ ಹಳದಿ ಬಣ್ಣದ ವಸ್ತ್ರ ಇಷ್ಟಪಡುತ್ತಾರೆ. ಪ್ರಮಾಣವಚನ ಸಮಾರಂಭಕ್ಕೂ ಹಳದಿ ಕೋಟ್ ಧರಿಸಿ ಬಂದಿದ್ದರು. ತಂದೆ ತಾಯಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. [ಶಾಸಕ ಅರಕಲಗೂಡು ಮಂಜು ಪರಿಚಯ]

ನೂತನ ಸಚಿವ ಮಂಜು ಅವರಿಗೆ ವಿಕಾಸ ಸೌಧದಲ್ಲಿ ಕೊಠಡಿ ನೀಡಲಾಗಿದೆ.ರೇಷ್ಮೆ, ಅಬಕಾರಿ, ಪ್ರವಾಸೋದ್ಯಮ, ಮುಜರಾಯಿ ಹೀಗೆ ಯಾವುದಾದರೂ ಖಾತೆ ಸಿಗುವ ನಿರೀಕ್ಷೆ ಇದೆ. ಶುಕ್ರವಾರ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವರಿಗೆ ಕಿರಿಸಾವೆಯಲ್ಲಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಚನ್ನರಾಯಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಸಂಭ್ರಮವನ್ನು ಹಂಚಿಕೊಳ್ಳಲಿದ್ದಾರೆ.

ಮಂಜು ಅವರಿಗೆ ಹುಟ್ಟುಹಬ್ಬಕ್ಕೆ ಕೊಡುಗೆ

ಮಂಜು ಅವರಿಗೆ ಹುಟ್ಟುಹಬ್ಬಕ್ಕೆ ಕೊಡುಗೆ

ನವೆಂಬರ್ 1 ರಂದು ಎ ಮಂಜು ಅವರಿಗೆ 58 ವರ್ಷ ತುಂಬಲಿದೆ. ಹನ್ಯಾಳು ಗ್ರಾಮದ ರೈತ ಕುಟುಂಬದ ಮಗ ಇಂದು ಸಚಿವ ಸ್ಥಾನಕ್ಕೇರಿರುವುದು ಊರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಎಲ್ಲೆಡೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ. ಇಡೀ ರಾಜ್ಯ ಮೆಚ್ಚುವಂಥ ಕಾರ್ಯ ಮಾಡಲಿ ಎಂದು ಗ್ರಾಮಸ್ಥರು ತುಂಬು ಹೃದಯದಿಂದ ಹರಿಸಿದ್ದಾರೆ.

ಹನ್ಯಾಳು ಗ್ರಾಮದಿಂದ ಸಚಿವ ಭಾಗ್ಯ

ಹನ್ಯಾಳು ಗ್ರಾಮದಿಂದ ಸಚಿವ ಭಾಗ್ಯ

ಹಾಸನ ಜಿಲ್ಲೆ ಅರಕಲಗೂಡು ಗ್ರಾಮದ ಹನ್ಯಾಳು ಗ್ರಾಮದ ಮಂಜು ಅವರು ಸಚಿವರಾಗುವ ಮೂಲಕ ಹನ್ಯಾಳು ಗ್ರಾಮ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಹಿಂದೆ ಇದೇ ಊರಿನ ಎಚ್.ಎನ್ ನಂಜೇಗೌಡರು ನೀರಾವರಿ ಸಚಿವರಾಗಿದ್ದರು. ಇದಾದ ಮೂರು ದಶಕಗಳ ನಂತರ ಮಂತ್ರಿಗಿರಿ ಈ ಗ್ರಾಮದ ಕಡೆಗೆ ಒಲಿದಿದೆ. ಮಂಜು ಅವರು ನಂಜೇಗೌಡ ಅವರ ಭಾವಮೈದುನ ಆಗಿರುವುದನ್ನು ಇಲ್ಲಿ ಸ್ಮರಿಸಬಹುದು. ಇದಲ್ಲದೆ ಇಲ್ಲಿನ ಕಡುವಿನ ಹೊಸಳ್ಳಿಯ ಕೆ.ಬಿ ಮಲ್ಲಪ್ಪ ಅವರು ಮಂತ್ರಿಯಾಗಿದ್ದರು.

ರೈತರಿಗೆ ಭಾಗ್ಯಗಗಳನ್ನು ತಲುಪಿಸಬೇಕು

ರೈತರಿಗೆ ಭಾಗ್ಯಗಗಳನ್ನು ತಲುಪಿಸಬೇಕು

ಸಿದ್ದರಾಮಯ್ಯ ಅವರ ಸರ್ಕಾರ ಘೋಷಿಸಿರುವ ಹಲವು ಭಾಗ್ಯ ಯೋಜನೆಗಳನ್ನು ರೈತರಿಗೆ, ಜನ ಸಾಮಾನ್ಯರಿಗೆ ತಲುಪಿಸಬೇಕು. ಎರಡು ನದಿ, ಮೂರು ಜಲಾಶಯ ಹೊಂದಿರುವ ಜಿಲ್ಲೆಯಲ್ಲಿ ಏತ ನೀರಾವರಿಗೆ ಹೆಚ್ಚಿನ ಒತ್ತು ನೀಡಿ, ಜನ-ಜಾನುವಾರುಗಳ ನೀರು ಒದಗಿಸಬೇಕು. ಇರುವ ಜಲ ಸಂಪತ್ತು ಉಳಿಸಿಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಮಂಜು ಹೇಳಿದ್ದಾರೆ.

ಮಂಜು ಕುಟುಂಬದಲ್ಲಿ ಸಂತಸದ ವಾತಾವರಣ

ಮಂಜು ಕುಟುಂಬದಲ್ಲಿ ಸಂತಸದ ವಾತಾವರಣ

ಅರಕಲಗೂಡಿನ ಮನೆಯಲ್ಲಿ ದೀಪಾವಳಿ, ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಜು ಅವರ ಪುತ್ರಿ ಲಗ್ನಾ ಹಾಗೂ ಎಂಎಸ್ ಅರವಿಂದ್, ಪುತ್ರ ಡಾಕ್ಟರ್ ಮಂಥರ್ ಗೌಡ, ಸೊಸೆ ದಿವ್ಯಾ ನರೈನ್(ಬಿಇ, ಎಂಎಸ್ ಸಿ) ಮನೆ ಕೆಲಸದವರಾದ ಗೌರಮ್ಮ, ವೇದಾವತಿ, ಮಂಜು ಅವರ ಕುಟುಂಬದ ಡ್ರೈವರ್ ಗಳು ತೋಟದ ಕೆಲಸಗಾರರು ಎಲ್ಲರೂ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಚಿತ್ರದಲ್ಲಿ: ಸಚಿವ ಎ ಮಂಜು ಅವರ ಜೊತೆ ಪತ್ರಕರ್ತ ಅರಕಲಗೂಡೂ ಜಯಕುಮಾರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+