Arecanut: ರಾಜ್ಯದಲ್ಲಿ ಅಡಿಕೆ ಬೆಳೆ ಶೇ.37ರಷ್ಟು ವಿಸ್ತರಣೆ, 5 ವರ್ಷಗಳಲ್ಲಿ ಉತ್ಪಾದನೆ ತೀವ್ರ ಇಳಿಕೆ!

ನವದೆಹಲಿ/ಶಿವಮೊಗ್ಗ: ಕರ್ನಾಟಕದಲ್ಲಿ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಯುವ ಪ್ರಯಾಣ ಹೆಚ್ಚಾಗಿದೆ. ಆದರೆ ಕಳೆದ 5 ವರ್ಷಗಳಲ್ಲಿ ಅಡಿಕೆ ಫಲಸು ಮಾತ್ರ ಕುಂಠಿತಗೊಂಡಿದೆ. ಅಡಿಕೆ ಉತ್ಪಾದನೆಯು ತೀವ್ರ ಕುಸಿತಕ್ಕೆ ಅನೇಕ ಕಾರಣಗಳಿವೆ. ಯಾವೆಲ್ಲ ಭಾಗದಲ್ಲಿ ಅಡಿಕೆ ಬೆಳೆ ವಿಸ್ತರಣೆ ಆಗಿದೆ, ಅಡಿಕೆ ಕೃಷಿಯ ಇಳುವರಿಯ ಏರಿಳಿತ ಕುರಿತು ಲೋಕಸಭೆಯಲ್ಲಿ ನೀಡಿದ ದತ್ತಾಂಶಗಳು ಬಹಿರಂಗಗೊಂಡಿವೆ.

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಶ್ನೆಗೆ ಲೋಕಸಭೆಯಲ್ಲಿಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ರಾಮನಾಥ್ ಠಾಕೂರ್ ಅವರು ಲಿಖಿತ ಉತ್ತರ ನೀಡಿದರು. 2021-22ಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಸಾವಿರಾರು ಹೆಕ್ಟೇರ್ ಪ್ರಮಾಣದಲ್ಲಿ ಏರಿಕೆ ಆಗಿದೆ. ಐದು ವರ್ಷದ ಹಿಂದೆ (2021-22ರಲ್ಲಿ) 6,03,121 ಹೆಕ್ಟೇರ್‌ ನಷ್ಟಿದ್ದ ಅಡಿಕೆ ಬೆಳೆ 2025-26ರಲ್ಲಿ 7,98,677 ಹೆಕ್ಟೇರ್‌ಗಳಿಗೆ ವಿಸ್ತರಣೆ ಆಗಿದೆ. ಅಂದರೆ ಶೇಕಡಾ 32 (1,95,500 ಹೆಕ್ಟೇರ್‌ಗಳ) ಏರಿಕೆ ಆಗಿದೆ. ಆದರೆ ಅಡಿಕೆ ಉತ್ಪಾದನೆ ಮಾತ್ರ ಒಂದು ಹೆಕ್ಟೇರ್‌ಗೆ 2.24 ಟನ್‌ಗಳಿಂದ ಹೆಕ್ಟೇರ್‌ಗೆ 1.42 ಟನ್ (ಶೇಕಡಾ 37) ಕುಸಿದಿದೆ ಎಂದು ತಿಳಿಸಿದರು.

Arecanut

2021-22ರಲ್ಲಿ ಕರ್ನಾಟಕ 13.5 ಲಕ್ಷ ಟನ್ ಅಡಿಕೆ ಉತ್ಪಾದನೆ ಆಗಿದ್ದು, 2022-23ರಲ್ಲಿ 10.2 ಲಕ್ಷ ಟನ್‌ಗಳಿಗೆ ಉತ್ಪಾದನೆ ಕುಸಿದಿತ್ತು. ನಂತರದ ವರ್ಷದಲ್ಲಿ ಏರಿಕೆ ಆಯಿತಾದರೂ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ವಾಣಿಜ್ಯ ಬೆಳೆ ಅಡಿಕೆ ಕೃಷಿ ಮೂಲಕ ದೇಶದ ಆರ್ಥಿಕತೆಗೆ ಕರ್ನಾಟಕವು ಕೊಡುಗೆ (71.56) ನೀಡುತ್ತಾ ಬಂದಿದೆ ಎಂದು ಸಚಿವರು ಉತ್ತರಿಸಿದರು. ಇದರೊಂದಿಗೆ ಕೆಲವು ಜಿಲ್ಲಾವಾರು ಬೆಳೆ ವಿಸ್ತರಣೆ, ಇಳುವರಿ ಕುಸಿತದ ಮಾಹಿತಿ ನೀಡಿದರು.

ಬಹುತೇಕ ಜಿಲ್ಲೆಗಳಲ್ಲಿ ಉತ್ಪಾದನೆ ಇಳಿಕೆ

ದಕ್ಷಿಣ ಕನ್ನಡದಲ್ಲಿ ಅಡಿಕೆ ಕೃಷಿ 1,01,689 ಹೆಕ್ಟೇರ್ ನಿಂದ 1,07,900 ಹೆಕ್ಟೇರ್‌ಗೆ ಏರಿಕೆ ಆಗಿದೆ. ಇಲ್ಲಿ ಸಹ ಪ್ರತಿ ಹೆಕ್ಟೇರ್‌ಗೆ 2.70 ಟನ್‌ಗಳಿಂದ 1.31 ಟನ್‌ಗಳಿಗೆ ಇಳುವರಿ ಕಡಿಮೆಯಾಗಿದೆ. ಉಡುಪಿಯಲ್ಲಿ ಪ್ರತಿ ಹೆಕ್ಟೇರ್‌ಗೆ 3.12 ಟನ್‌ಗಳಿಂದ ಹೆಕ್ಟೇರ್‌ಗೆ 1.50 ಟನ್ ಗೆ ಇಳಿಕೆ ಆಗಿದ್ದು, ಇಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಅಡಿಕೆ ಬೆಳೆ ವಿಸ್ತರಣೆ ಆಗಿಲ್ಲ ಎನ್ನಲಾಗಿದೆ. ಇನ್ನೂ ಉತ್ತರ ಕನ್ನಡದಲ್ಲಿ ಅಡಿಕೆ ಬೆಳೆ 32,698 ಹೆಕ್ಟೇರ್‌ಗಳಿಂದ 39,354 ಹೆಕ್ಟೇರ್ ಹೆಚ್ಚಾಗಿದ್ದು, ಉತ್ಪಾದನೆಯು 2.90 ಟನ್‌ಗಳಿಂದ 1.50 ಟನ್ ಗೆ ಕುಸಿದೆ.

ಹಾವೇರಿ, ಹಾಸನದಲ್ಲಿ ಬೆಳೆ, ಉತ್ಪಾದನೆ ಹೆಚ್ಚಳ

ಉತ್ತಮ ಅಡಿಕೆ ಇಳುವರಿ ನೋಡುವುದಾದರೆ ಚಿಕ್ಕಮಗಳೂರಿನಲ್ಲಿ ಸ್ಥಿರ ಉತ್ಪಾದನೆ ಕಂಡು ಬಂದಿದೆ. ಮಧ್ಯ ಕರ್ನಾಟಕದ ಹಾವೇರಿ ಮತ್ತು ದಕ್ಷಿಣ ಕರ್ನಾಟಕದ ಹಾಸನ ಜಿಲ್ಲೆಗಳು 5 ವರ್ಷದಲ್ಲಿ ಕೃಷಿ ಬೆಳೆಯುವ ಪ್ರಮಾಣ ಹಾಗೂ ಉತ್ಪಾದನೆ ಹೆಚ್ಚಾಗಿದೆ.

ಇಳುವರಿ ಕುಸಿತಕ್ಕೆ ಕಾರಣಗಳೇನು?

ಕರ್ನಾಟಕದಲ್ಲಿ ಅಡಿಕೆ ಉತ್ಪಾದನೆ ಇಳಿಕೆ ಆಗಲು ನಿಖರ ಕಾರಣ ತಿಳಿಸಿಲ್ಲ. ಆದರೆ ಅಡಿಕೆ ಮತ್ತು ಸಾಂಬಾರ ಪದಾರ್ಥಗಳ ಅಭಿವೃದ್ಧಿ ನಿರ್ದೇಶನಾಲಯ (DASD) ಪ್ರಕಾರ 'ಎಲೆ ಚುಕ್ಕೆ ರೋಗ, ಹಣ್ಣಿನ ಕೊಳೆತ ರೋಗ ಮತ್ತು ಬೇರು ಗ್ರಬ್ ಬಾಧೆಯ ನಿರ್ವಹಣೆ, ಬಹುಜಾತಿ ಬೆಳೆ ವ್ಯವಸ್ಥೆ ಹಾಗೂ ಹವಾಮಾನ ಆಧಾರಿತ ರೋಗಗಳು' ಕಾರಣವೆಂದು ತಿಳಿಸಲಾಗಿದೆ. ಇನ್ನೂ 10 ರೋಗ ಪೀಡಿತ ತಾಲ್ಲೂಕುಗಳಲ್ಲಿ ಸಮುದಾಯ ಆಧಾರಿತ ಎಲೆ ಚುಕ್ಕೆ ರೋಗ ನಿರ್ವಹಣಾ ಕಾರ್ಯಕ್ರಮ ಸರ್ಕಾರದಿಂದ ಹಮ್ಮಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+