ಆಂಧ್ರಪ್ರದೇಶದ ಗೂಗಲ್ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು: ಪ್ರಿಯಾಂಕ್ ಖರ್ಗೆ

ಬೆಂಗಳೂರು, ಅಕ್ಟೋಬರ್‌ 16: ಗೂಗಲ್‌ ವಿಶಾಖಪಟ್ಟಣದಲ್ಲಿ 1.3 ಲಕ್ಷ ಕೋಟಿ ರೂ. ಹೂಡಿಕೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ಮತ್ತು ಆಂಧ್ರ ಮಧ್ಯೆ ಜಟಾಪಟಿ ನಡೆಯುತ್ತಿದೆ.
ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಗೂಗಲ್‌ ಕಂಪನಿಗೆ ಆಂಧ್ರಪ್ರದೇಶ ನೀಡಿದ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದು ಹೇಳಿದ್ದಾರೆ.

ಆಂಧ್ರಪ್ರದೇಶವು ಗೂಗಲ್ ಕಂಪನಿಗೆ ಬಹಳ ಪ್ರೋತ್ಸಾಹ ನೀಡುತ್ತಿದೆ. 22,000 ಕೋಟಿ ರೂ. ಪ್ರೋತ್ಸಾಹ ಧನ, ಭೂಮಿಗೆ 25% ಸಬ್ಸಿಡಿ, ನೀರಿನ ಶುಲ್ಕಕ್ಕೆ 25% ಸಬ್ಸಿಡಿ, ಉಚಿತ ವಿದ್ಯುತ್ ಮತ್ತು ರಾಜ್ಯ ಜಿಎಸ್‌ಟಿಯ 100% ಮರುಪಾವತಿಯನ್ನು ನೀಡುತ್ತಿದೆ. ಈ ಆರ್ಥಿಕ ವಿಪತ್ತನ್ನು ಭರಿಸಲು ಸಾಧ್ಯವೇ? ಕರ್ನಾಟಕ ಇದನ್ನು ಮಾಡಿದ್ದರೆ ರಾಜ್ಯವನ್ನು ದಿವಾಳಿಯತ್ತ ತಳ್ಳಿದ ಆರೋಪ ನಮ್ಮ ಮೇಲಿತ್ತು ಎಂದು ಪ್ರತಿಕ್ರಿಯಿಸಿದ್ದರು.

Andhra Pradesh s Google incentive package is economic disaster Priyank Kharge

ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಸುವ ಗೂಗಲ್‌ನ 1.3 ಲಕ್ಷ ಕೋಟಿ ರೂ. ಹೂಡಿಕೆ ಕರ್ನಾಟಕದಿಂದ ಕೈ ತಪ್ಪಿ ಹೋಗಿದ್ದಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿತ್ತು. ವಿಪಕ್ಷಗಳ ಟೀಕೆಗೆ ಉತ್ತರಿಸುವ ಸಂದರ್ಭದಲ್ಲಿ ಪ್ರಿಯಾಂಕ್‌ ಖರ್ಗೆ ಆಂಧ್ರ ಸರ್ಕಾರದ ಗೂಗಲ್ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದು ಬಣ್ಣಿಸಿದ್ದರು.

ವೈಜಾಗ್‌ನಲ್ಲಿ 15 ಬಿಲಿಯನ್ ಡಾಲರ್‌ಗಳ ಬೃಹತ್ ಎಐ ಡೇಟಾ ಸೆಂಟರ್ ಯೋಜನೆಯನ್ನು ಘೋಷಿಸಿರುವ ತಂತ್ರಜ್ಞಾನ ದೈತ್ಯ ಗೂಗಲ್‌ಗೆ ಆಂಧ್ರಪ್ರದೇಶದ ಔದಾರ್ಯವು "ಆರ್ಥಿಕ ವಿಕೋಪ" ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕರ್ನಾಟಕವು ಗೂಗಲ್ ಯೋಜನೆಯನ್ನು ತಪ್ಪಿಸಿಕೊಂಡಿರುವುದಕ್ಕೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ಪ್ರತಿಕ್ರಿಯಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ರಾಜ್ಯ ಜಿಎಸ್‌ಟಿಯ 100% ಮರುಪಾವತಿಯನ್ನು ನೀಡುತ್ತಿದೆ ಎಂಬುದನ್ನು ಬಿಜೆಪಿ ಮತ್ತು ಜೆಡಿಎಸ್ ಅನುಕೂಲಕರವಾಗಿ ಮರೆಮಾಡುತ್ತಿವೆ. ಆಂಧ್ರಪ್ರದೇಶವು ಈ ಆರ್ಥಿಕ ವಿಪತ್ತನ್ನು ಭರಿಸಬಹುದೇ? ಎಂದು ಪ್ರಿಯಾಂಕ್ ಪ್ರಶ್ನಿಸಿದರು. ಕರ್ನಾಟಕ ಹೀಗೆ ಮಾಡಿದ್ದರೆ, ರಾಜ್ಯವನ್ನು ದಿವಾಳಿಯತ್ತ ತಳ್ಳಿದ ಆರೋಪ ನಮ್ಮ ಮೇಲಿರುತ್ತಿತ್ತು ಎಂದು ಪ್ರಿಯಾಂಕ್ ಹೇಳಿದರು. ಈ ಯೋಜನೆಯ ಬಗ್ಗೆ ಗೂಗಲ್ ಕರ್ನಾಟಕದೊಂದಿಗೆ ಚರ್ಚಿಸಿಲ್ಲ ಎಂದು ಪ್ರಿಯಾಂಕ್ ಸ್ಪಷ್ಟಪಡಿಸಿದರು. ಮತ್ತು ನಾವು ಚರ್ಚೆ ನಡೆಸಿದ ಯಾವುದೇ ಕಂಪನಿಯು ರಾಜ್ಯವನ್ನು ತೊರೆದಿಲ್ಲ ಎಂದು ಗಮನಸೆಳೆದರು.

ಬೆಂಗಳೂರು ಹೈದರಾಬಾದ್‌ಗಿಂತ ಬಹಳ ಮುಂದಿದೆ ಎಂದು ಸಚಿವರು ಸಮರ್ಥಿಸಿಕೊಂಡರು. "ಹೈದರಾಬಾದ್‌ನ 2 ಲಕ್ಷ ಕೋಟಿ ರೂ. ಮೌಲ್ಯದ ಐಟಿ ಸೇವೆಗಳ ರಫ್ತು ಮೌಲ್ಯಕ್ಕೆ ಹೋಲಿಸಿದರೆ ನಾವು 4.5 ಲಕ್ಷ ಕೋಟಿ ರೂ. ಮೌಲ್ಯದ ಐಟಿ ಸೇವೆಗಳನ್ನು ರಫ್ತು ಮಾಡಿದ್ದೇವೆ. ವ್ಯತ್ಯಾಸವು ದೊಡ್ಡದಾಗಿದೆ ಎಂದು ಅವರು ಹೇಳಿದರು. AI ವಿಷಯಕ್ಕೆ ಬಂದಾಗ ಬೆಂಗಳೂರು ಅಗ್ರ ಐದು ನಗರಗಳಲ್ಲಿ ಒಂದಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+