ಅನಂತ್ ಕುಮಾರ್ ಹೆಗಡೆ ಹೇಳಿಕೆಯೇ ಬಿಜೆಪಿಗೆ ಮುಳುವಾಯ್ತಾ?

ಬಿಜೆಪಿ ಹೀನಾಯ ಹಿನ್ನಡೆ ಕಂಡಿದೆ, ಈ ಬಾರಿ 400 ಸ್ಥಾನ ಗೆಲ್ಲುವ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ನಾಯಕರಿಗೆ ಕೇವಲ 300 ಸ್ಥಾನ ದಾಟುವುದು ಕೂಡ ಸಾಧ್ಯವಾಗಿಲ್ಲ. ಹೀಗಾಗಿ ಈಗ ದೊಡ್ಡ ಸಂಕಷ್ಟ ಎದುರಾಗಿ, ಎದ್ದೂ ಬಿದ್ದು ಸರ್ಕಾರ ರಚಿಸುತ್ತಿದೆ ಎನ್‌ಡಿಎ. ಆದರೆ ಈ ರೀತಿ ಬಿಜೆಪಿ ಹಿನ್ನಡೆ ಅನುಭವಿಸಲು ಹಲವು ಕಾರಣ ಇವೆ, ಅದರಲ್ಲೂ ಸಂವಿಧಾನದ ಬಗ್ಗೆ ಸ್ವತಃ ಬಿಜೆಪಿ ಸಂಸದರು ನೀಡಿದ್ದ ಹೇಳಿಕೆ ದೊಡ್ಡ ಪರಿಣಾಮ ಬೀರಿದೆ ಎಂಬ ಆರೋಪವು ಕೇಳಿಬಂದಿದೆ.

ಹೌದು, ಬಿಜೆಪಿ ನಾಯಕರು ಪದೇ ಪದೇ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಅದ್ರಲ್ಲೂ ಬಿಜೆಪಿಗೆ ಭಾರತದ ಸಂವಿಧಾನ ಬದಲಾಯಿಸುವುದೇ ಗುರಿ ಅಂತಾ ಕಾಂಗ್ರೆಸ್ ನಾಯಕರೆಲ್ಲಾ ಆರೋಪ ಮಾಡುತ್ತಾರೆ. ಈ ಆರೋಪಕ್ಕೆ ಪುಷ್ಟಿ ನೀಡುವ ರೀತಿ, ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಕೂಡ ಒಂದು ಹೇಳಿಕೆ ನೀಡಿದ್ದರು. ಅದು ಇಡೀ ದೇಶದಲ್ಲಿ ವೈರಲ್ ಆಗಿ ಬಿಜೆಪಿ ನಾಯಕರಿಗೆ ಕೂಡ ಭಾರಿ ಇರಿಸು & ಮುರಿಸು ಉಂಟುಮಾಡಿತ್ತು. ಹೀಗೆ ಸಂವಿಧಾನ ಕುರಿತು ನೀಡಿದ ಹೇಳಿಕೆ ಕೂಡ ಬಿಜೆಪಿ ಹಿನ್ನಡೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

Ananth Kumar Hegde Comment On Indian Constitution Is Viral Now Again

ಸವಿಂಧಾನದ ಬಗ್ಗೆ ಅನಂತ್ ಹೆಗಡೆ ಹೇಳಿಕೆ!

ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರಲು ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಬೇಕು ಎಂಬ ಡಿಮ್ಯಾಂಡ್ ಅನ್ನ ಮತದಾರರ ಎದುರು ಇಟ್ಟಿತ್ತು. ಹಾಗೇ ಇದೇ ಕಾರಣಕ್ಕೆ, ಬಿಜೆಪಿಗೆ 400 ಸ್ಥಾನ ಗೆಲ್ಲಿಸಿಕೊಡಿ ಅಂತಾ ಮನವಿ ಮಾಡುತ್ತಿದ್ದರು. ಆದರೆ ಇದೇ ಸಮಯದಲ್ಲಿ ಬಿಜೆಪಿಯ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದರು.

ನಾವು ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಖಚಿತ, ಇದೇ ಕಾರಣಕ್ಕೆ ನಮಗೆ 400 ಸ್ಥಾನ ಬೇಕು ಎಂಬ ರೀತಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವೈರಲ್ ಆಗಿ, ಇದೇ ವಿಚಾರ ಮುಂದೆ ಇಟ್ಟುಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಕ್ಯಾಂಪೇನ್ ಮಾಡಿದ್ದರು. ಅದು ಕೂಡ 2024ರ ಲೋಕಸಭೆ ಚುನಾವಣೆಯಲ್ಲಿ ವರ್ಕೌಟ್ ಆಗಿರುವಂತೆ, ಈಗ ಭಾಸವಾಗುತ್ತಿದೆ.

ಸಂಸದರ ಮಾತಿಗೆ ಬಿಜೆಪಿ ಬ್ರೇಕ್?

ಇದೀಗ ಬಿಜೆಪಿ ಸೋತು ಸುಣ್ಣವಾಗಿದೆ, ಆದರೂ ಮಿತ್ರ ಪಕ್ಷಗಳ ಸಹಾಯದಿಂದ ಸರ್ಕಾರದ ರಚನೆಗೆ ಸಿದ್ಧತೆ ನಡೆಸಿದೆ. ಹೀಗಿದ್ದಾಗಲೇ ಬಿಜೆಪಿ ಹಿನ್ನಡೆಗೆ ಕಾರಣ ಏನು? ಎಂಬ ಕುರಿತು, ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ತಮ್ಮ ತಮ್ಮ ಸಂಸದರ ಹೇಳಿಕೆಗೆ ಬ್ರೇಕ್ ಹಾಕಲು ಸಿದ್ಧತೆ ನಡೆಸಿದೆ ಎಂಬ ಮಾತು ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+