ಕಲರ್ಸ್ ಕೊಡವ ಕಪ್ ಹಾಕಿ ಲೀಗ್ ಲಾಂಛನ ಬಿಡುಗಡೆ
ಮಡಿಕೇರಿ, ಆ.4: ಅಮ್ಮತ್ತಿಯ ಫ್ಲೈಯಿಂಗ್ ಕಲರ್ಸ್ ಸಂಸ್ಥೆ ಆಯೋಜಿಸಿರುವ ಕೊಡವ ಚಾಂಪಿಯನ್ಸ್ ಹಾಕಿ ಲೀಗ್ ಪಂದ್ಯಾಟದ ಲಾಂಛನ ಅಮ್ಮತ್ತಿ ಕೊಡವ ಸಮಾಜದಲ್ಲಿ ಬಿಡುಗಡೆಯಾಗಿದೆ.
ರಾಜ್ಯ ಹಾಕಿ ಅಕಾಡೆಮಿ ಉಪಾಧ್ಯಕ್ಷ ಡಾ. ಅಂಜಪರವಂಡ ಸುಬ್ಬಯ್ಯ, ಕಾಪ್ಸ್ ಶಾಲೆಯ ಕಾರ್ಯದರ್ಶಿ ಮುಂಡ್ಯೋಳಂಡ ನಂಜುಂಡ, ಹಾಕಿ ಕೊಡಗು ಅಧ್ಯಕ್ಷ ಪೈಕೇರ ಕಾಳಯ್ಯ, ಮಾಜಿ ಕಾರ್ಯದರ್ಶಿ ಬಲ್ಲಚಂಡ ಪಾರ್ಥ ಚಂಗಪ್ಪ ಲಾಂಛನ ಬಿಡುಗಡೆಗೊಳಿಸಿದರು.
ಡಿ.3ರಿಂದ 14ರವರೆಗೆ ಅಮ್ಮತ್ತಿಯ ಶಾಲೆ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಕೊಡವ ಹಾಕಿ ನಮ್ಮೆಯ ಪ್ರಿ ಕ್ವಾರ್ಟರ್ ಪ್ರವೇಶ ಪಡೆದಿರುವ ಕಲಿಯಂಡ, ಕೂತಂಡ, ಅಂಜಪರವಂಡ, ಕುಲ್ಲೇಟೀರ, ಚೇಂದಿರ, ಕರ್ತಮಾಡ, ಕರಿನೆರವಂಡ, ಅಜ್ಜೇಟೀರ, ಚೇಂದಂಡ, ಕೋಳೇರ, ಪಳಂಗಂಡ, ಮಂಡೇಪಂಡ, ಕುಟ್ಟಂಡ, ಅರೆಯಡ, ಇಟ್ಟೀರ ಹಾಗೂ ಬಾಳೆಯಡ ತಂಡಗಳು ಸೆಣೆಸಾಟ ನಡೆಸಲಿದೆ .

ಐಪಿಎಲ್ ಮಾದರಿಯಲ್ಲಿ ಈ ಪಂದ್ಯಾಟಗಳು ನಡೆಯಲಿದ್ದು 50 ಲಕ್ಷ ರೂ ವಿನಿಯೋಗಿಸಿ ಫ್ಲೈಯಿಂಗ್ ಕಲರ್ಸ್ ಸಂಸ್ಥೆ ಈ ಹಾಕಿ ಪಂದ್ಯಾಟಟವನ್ನು ಆಯೋಜಿಸಿದೆ.
ಈ ಕೂಟದ ವಿಶೇಷತೆಗಳು:
*ಒಂದು ತಂಡದಲ್ಲಿ ಆರು ಆಟಗಾರರನ್ನು ಕಡ್ಡಾಯವಾಗಿ ಹರಾಜು ಮೂಲಕ ಆಯ್ಕೆ ಮಾಡಬೇಕಿದ್ದು. ಇದರಲ್ಲಿ 3 ವೃತ್ತಿಪರ, 3 ಕೊಡವ ಕುಟುಂಬಗಳ ಅತಿಥಿ ಆಟಗಾರರನ್ನು ಬಿಡ್ ಮಾಡಬಹುದಾಗಿದೆ.
*ಒಬ್ಬ ಆಟಗಾರನ ಮೂಲ ಧನ 5 ಸಾವಿರ ರೂ ನಿಗದಿಪಡಿಸಲಾಗಿದೆ ಒಬ್ಬ ಆಟಗಾರನಿಗೆ 5 ಲಕ್ಷಕ್ಕಿಂತ ಮೀರಿ ಹೆಚ್ಚು ಬಿಡ್ ಮಾಡುವಂತಿಲ್ಲ.
*ಒಂದು ತಂಡಕ್ಕೆ 1 ಲಕ್ಷ ರೂ.ವನ್ನು ಆಯೋಜಕರೇ ನೀಡಲಿದ್ದಾರೆ. ಬಿಡ್‌ಗೆ ಹೆಚ್ಚಿನ ಹಣದ ಅವಶ್ಯಕತೆಯಿದ್ದಲ್ಲಿ ತಂಡವೇ ಸಂಗ್ರಹಿಸಿ ಭರಿಸಬೇಕಿದೆ.












Click it and Unblock the Notifications