ಹೆಣ್ಣು ಮಕ್ಕಳ ಮಾನ ಉಳಿಸುವ ಕೆಲಸ ಯಾಕೆ ಮಾಡಲಿಲ್ಲ? ಅಮಿತ್ ಶಾ ಗೆ ಪತ್ರ ಬರೆದಿದ್ದ ದೇವರಾಜೇಗೌಡ
ಬೆಂಗಳೂರು, ಮೇ 01: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ನಿರಂತರವಾಗಿ ಈ ಹಿಂದೆಯೇ ತೀವ್ರ ವಾಗ್ದಾಳಿ ನಡೆಸಿದ್ದು, ಇದೀಗ ಅಮಿತ್ ಶಾ ಅವರಿಗೆ ದೇವರಾಜೇಗೌಡ ಅವರು ಬರೆದ ಪತ್ರ ಮುನ್ನಲೆಗೆ ಬಂದಿದೆ.
ಹೌದು, 2023ರ ಡಿಸೆಂಬರ್ 8ನೇ ತಾರೀಖಿನಂದು ದೇವರಾಜೇಗೌಡ ಅವರು ನಿಮಗೆ ಪ್ರಜ್ವಲ್ ರೇವಣ್ಣನ ಕರ್ಮಕಾಂಡ ಕುರಿತು ಪೂರ್ಣ ವಿವರಗಳೊಂದಿಗೆ ಪತ್ರ ಬರೆದಿದ್ದರು, ಅದನ್ನು ಏಕೆ ಗಣನೆಗೆ ತೆಗೆದುಕೊಳ್ಳಲಿಲ್ಲ? ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ. ಅಮಿತ್ ಶಾ ಅವರಿಗೆ ಹೊಳೆನರಸೀಪುರ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಬರೆದ ಪತ್ರವನ್ನು ತನ್ನ ಅಧಿಕೃತ ಫೇಸ್ ಬುಕ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷ ಈ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿದೆ.

ದೇಶದ ಜನತೆಗೆ ಉತ್ತರಿಸಲೇಬೇಕಾದ ಹಲವು ಪ್ರಶ್ನೆಗಳು ನಿಮ್ಮ ಮುಂದಿವೆ, ಉತ್ತರಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. 2023ರ ಡಿಸೆಂಬರ್ 8ನೇ ತಾರೀಖಿನಂದು ನಿಮ್ಮದೇ ಪಕ್ಷದ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ನಿಮಗೆ ಪ್ರಜ್ವಲ್ ರೇವಣ್ಣನ ಕರ್ಮಕಾಂಡದ ಪೂರ್ಣ ವಿವರಗಳೊಂದಿಗೆ ಪತ್ರ ಬರೆದಿದ್ದರು ಏಕೆ ಗಣನೆಗೆ ತೆಗೆದುಕೊಳ್ಳಲಿಲ್ಲ? ಎಂದು ಪ್ರಶ್ನಿಸಿದೆ.
ದೇಶದ ಗೃಹ ಮಂತ್ರಿಯಾಗಿ ಇಂತಹದ್ದೊಂದು ಪ್ರಕರಣ ಗಮನಕ್ಕೆ ಬರುತ್ತಲೇ ಕಾನೂನು ಕ್ರಮಕ್ಕೆ ಮುಂದಾಗಬೇಕಿತ್ತು, ದೇಶದ ಮಹಿಳೆಯರ ಮಾನ ಉಳಿಸುವ ಕೆಲಸ ಮಾಡಬೇಕಿತ್ತು, ಆದರೆ ನೀವು ಮಾಡಲಿಲ್ಲ ಏಕೆ? ನಾರಿ ಶಕ್ತಿ, ಮಾತೃಶಕ್ತಿ ಎಂದು ಪುಂಗುವ ತಮಗೆ ದೇವರಾಜೇಗೌಡರು ಪತ್ರ ಬರೆದಾಗ ಈ ನಾರೀಶಕ್ತಿಯ ಬಗ್ಗೆ ಕಾಳಜಿ, ಕನಿಕರ ಬರಲಿಲ್ಲವೇಕೆ?
ಮಾನ್ಯ @AmitShah ಅವರೇ,
— Karnataka Congress (@INCKarnataka) April 30, 2024
ದೇಶದ ಜನತೆಗೆ ಉತ್ತರಿಸಲೇಬೇಕಾದ ಹಲವು ಪ್ರಶ್ನೆಗಳು ನಿಮ್ಮ ಮುಂದಿವೆ, ಉತ್ತರಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ.
2023ರ ಡಿಸೆಂಬರ್ 8ನೇ ತಾರೀಖಿನಂದು ನಿಮ್ಮದೇ ಪಕ್ಷದ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ನಿಮಗೆ ಪ್ರಜ್ವಲ್ ರೇವಣ್ಣನ ಕರ್ಮಕಾಂಡದ ಪೂರ್ಣ ವಿವರಗಳೊಂದಿಗೆ ಪತ್ರ ಬರೆದಿದ್ದರು ಏಕೆ ಗಣನೆಗೆ… pic.twitter.com/EvG6tPRjKU
ಈ ಪ್ರಕರಣಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ಮೊದಲು ತಲುಪಿದ್ದೇ ಬಿಜೆಪಿಗೆ, ಬಿಜೆಪಿಯ ದೇವರಾಜೇಗೌಡರ ಕೈಗೆ, ಹೀಗಿದ್ದೂ ಬಿಜೆಪಿ ಏಕೆ ಮಹಿಳೆಯರ ಮಾನ ಕಾಪಾಡಲು ದೂರು ನೀಡಲಿಲ್ಲ? ರಾಜ್ಯಾಧ್ಯಕ್ಷ ವಿಜಯೇಂದ್ರರಿಗೂ ಈ ವಿಷಯ ಮೊದಲೇ ತಿಳಿದಿದ್ದರೂ ಏಕೆ ಪೊಲೀಸ್ ದೂರು ನೀಡಿ ನಾರೀಶಕ್ತಿಯ ಘನತೆ ಕಾಪಾಡುವ ಕೆಲಸ ಮಾಡಲಿಲ್ಲ? ಎಂದು ಹಲವು ಪ್ರಶ್ನೆಗಳನ್ನ ಕೇಳಿದೆ.
ಮಾನ್ಯ ಅಮಿತ್ ಶಾ ಅವರೇ, ಪ್ರಜ್ವಲ್ ರೇವಣ್ಣನನ್ನು "ಮೋದಿ ಪರಿವಾರಕ್ಕೆ" ಸೇರಿಸಿಕೊಂಡು ಈಗ ಜುಮ್ಲಾ ನಾಟಕ ಆಡುತ್ತಿರುವ ತಾವು "ಕಾಂಗ್ರೆಸ್ ಸರ್ಕಾರವಿದೆ, ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು" ಎಂದು ಮೈಗೆ ಎಣ್ಣೆ ಹಚ್ಚಿಕೊಂಡು ಮಾತಾಡಿದ್ದೀರಿ, ಹಾಗೂ ಕಾಂಗ್ರೆಸ್ ಮೇಲೆ ಆರೋಪಿಸಲು ಯತ್ನಿಸಿದ್ದೀರಿ.. ಅಮಿತ್ ಶಾ ಅವರೇ, ನಿಮಗೆ ತಿಳಿದಿರಲಿ, ಪ್ರಜ್ವಲ್ ರೇವಣ್ಣನ ಕುಕೃತ್ಯದ ಬಗ್ಗೆ ಸಂತ್ರಸ್ತರ ದೂರು ಬಂದ ಕೆಲವೇ ಗಂಟೆಗಳಲ್ಲಿ ನಮ್ಮ ಸರ್ಕಾರ SIT ರಚನೆ ಮಾಡಿ ತನಿಖೆಗೆ ಮುಂದಾಗಿದೆ.
ಮೂವರು ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ಪ್ರಕರಣದ ಪಾರದರ್ಶಕ ತನಿಖೆಗೆ ವ್ಯವಸ್ಥೆ ಮಾಡಿದೆ. ನಾನು ಬಿಜೆಪಿಯ ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ಪೆನ್ ಡ್ರೈವ್ ಕೊಟ್ಟಿಲ್ಲ,, ನಾನು ಮೊದಲು ಸಂಪರ್ಕಿಸಿದ್ದೇ ದೇವರಾಜೇಗೌಡರನ್ನು ಎಂದಿದ್ದಾರೆ ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ, ಇಂತಹ ಗಂಭೀರ ವಿಷಯ ಸಾಕ್ಷಿ ಸಮೇತ ತಿಳಿದರೂ ಬಿಜೆಪಿ ಸುಮ್ಮನೆ ಕುಳಿತಿದ್ದೇಕೆ? ಎಂದು ಪ್ರಶ್ನಿಸಿದೆ.
ದೂರು ದಾಖಲಿಸಿ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿಲ್ಲ ಏಕೆ? 2023ರಲ್ಲೇ ಇವೆಲ್ಲಾ ವಿಷಯಗಳು ತಿಳಿದ ನಂತರವೂ ಮೈತ್ರಿ ಮಾಡಿಕೊಂಡಿದ್ದೇಕೆ? ಮೋದಿ ಪರಿವಾರದ ಸದಸ್ಯನನ್ನಾಗಿ ಮಾಡಿಕೊಂಡಿದ್ದೇಕೆ?
ಪ್ರಧಾನಿ ತಮ್ಮ ಕಚೇರಿಗೆ ಕರೆಸಿಕೊಂಡು ಬೆನ್ನು ತಟ್ಟಿದ್ದೇಕೆ? ಪೆನ್ ಡ್ರೈವ್ ಸಂಗತಿಯ ಬಗ್ಗೆ ದೇವರಾಜೇಗೌಡ ಹಲವು ಬಾರಿ ಬಾಯಿ ಬಡಿದುಕೊಂಡರೂ ಸಹ ನಿರ್ಲಕ್ಷಿಸಿ ಪ್ರಜ್ವಲ್ ಪರ ಇಡೀ ಬಿಜೆಪಿ ಪ್ರಚಾರ ಮಾಡಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.












Click it and Unblock the Notifications