ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ ನಿಯಮ ತಿದ್ದುಪಡಿ

ಬೆಂಗಳೂರು, ಜುಲೈ 03: ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಆಕ್ಷೇಪಣೆಗಳಿದ್ದರೆ 15 ದಿನಗಳಲ್ಲಿ ಸಲ್ಲಿಕೆ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ನೇತ್ರಪ್ರಭಾ ಎಂ. ಧಾಯಪುಲೆ, ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು) ಈ ಕುರಿತು ಅಧಿಸೂಚನೆ ಪ್ರಕಟಿಸಿದ್ದಾರೆ.

Amendment For Karnataka State Employees Collective Insurance Scheme

ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ ನಿಯಮಗಳು, 1981 ಅನ್ನು ತಿದ್ದುಪಡಿ ಮಾಡಲು ಕರ್ನಾಟಕ ರಾಜ್ಯ ನಾಗರೀಕ ಸೇವೆಗಳ ಕಾಯಿದೆ, 1978 (1990ರ ಕರ್ನಾಟಕ ಅಧಿನಿಯಮ 14)ರ ಸೆಕ್ಷನ್ 8ರೊಂದಿಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸೆಕ್ಷನ್ 3ರ ಉಪ-ವಿಭಾಗ (2) ರ ಷರತ್ತು(ಎ) ರ ಪ್ರಕಾರ ನಿಯಮಗಳ ಕರಡನ್ನು ಈ ಮೂಲಕ ಪ್ರಕಟಿಸಲಾಗಿದೆ ಎಂದು ಹೇಳಿದೆ.

ಸದರಿ ವಿಭಾಗವು ಇದರಿಂದ ಬಾಧಿತವಾಗುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಮತ್ತು ಈ ಕರಡನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಈ ಮೂಲಕ ಸೂಚನೆ ನೀಡಲಾಗಿದೆ.

ನಿರ್ದಿಷ್ಟಪಡಿಸಿದ ಅವಧಿ ಮುಗಿಯುವ ಮೊದಲು ಸದರಿ ಕರಡು ಅಧಿಸೂಚನೆಗೆ ಸಂಬಂಧಿದಂತೆ ಯಾವುದೇ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ (ಆಯವ್ಯಯ ಮತ್ತು ಸಂಪನ್ಮೂಲ), ಆರ್ಥಿಕ ಇಲಾಖೆ, ಕೊಠಡಿ ಸಂಖ್ಯೆ 257, 2ನೇ ಮಹಡಿ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು-560001 ವಿಳಾಸಕ್ಕೆ ಸಲ್ಲಿಸಬೇಕಿದೆ.

ಕರಡು ನಿಯಮಗಳು

* ಹೆಸರು ಮತ್ತು ಪ್ರಾರಂಭ. ಈ ನಿಯಮಗಳನ್ನು ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ (ತಿದ್ದುಪಡಿ) ನಿಯಮಗಳು, 2022 ಎಂದು ಕರೆಯತಕ್ಕದ್ದು.

* ಈ ನಿಯಮಗಳನ್ನು 21ನೇ ಮೇ 2022 ದಿನಾಂಕದಿಂದ ಜಾರಿಗೆ ಬಂದಂತೆ ಪರಿಗಣಿಸಲಾಗುತ್ತದೆ.

* ನಿಯಮ 8ಕ್ಕೆ ತಿದ್ದುಪಡಿ. ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ ನಿಯಮಗಳು, 1981ರಲ್ಲಿ (ಇನ್ನು ಮುಂದೆ ಸದರಿ ನಿಯಮಗಳು ಎಂದು ಕರೆಯಲ್ಪಡುವ) ನಿಯಮ 8ರಲ್ಲಿ, ಉಪ ನಿಯಮ 8.2(ಜೆ) ನಂತರ, ಉಪ ನಿಯಮಗಳನ್ನು ಸೇರಿಸಲಾಗಿದೆ.

* 8.2(ಕೆ): 21ನೇ ಮೇ 2022 ದಿನಾಂಕದಿಂದ ಜಾರಿಗೆ ಬರುವಂತೆ ಉಳಿತಾಯ ನಿಧಿಯಿಂದ ಅಂಗೀಕಾರಾರ್ಹವಾದ ಸೌಲಭ್ಯವನ್ನು ಆನ್‌ಲೈನ್ ಕೆ.ಜಿ.ಐ.ಡಿ ಪೋರ್ಟಲ್
https://kgidonline.karnataka.gov.in/ ರಲ್ಲಿ ನೀಡತಕ್ಕದ್ದು.

* 8.2(ಎಲ್): ಮೇ 31, 2022 ರಂದು ಅಥವಾ ಮೊದಲು ಯೋಜನೆಯ ಸದಸ್ಯತ್ವವು ಕೊನೆಗೊಳ್ಳುವ ನೌಕರರ ಸಂಬಂಧದಲ್ಲಿ, 1 ರಿಂದ 214 ಕೋಷ್ಟಕಗಳು ಅನ್ವಯಿಸುತ್ತವೆ.

* ನಿಯಮ 9ಕ್ಕೆ ತಿದ್ದುಪಡಿ: ಸದರಿ ನಿಯಮಗಳ 9ನೇ ನಿಯಮದ ಉಪ ನಿಯಮ 9.7 ರ ನಂತರ, ಈ ಕೆಳಕಂಡ ಉಪ ನಿಯಮವನ್ನು ಸೇರಿಸತಕ್ಕದ್ದು

* 9.7(ಎ): ನಿಯಮ 9.7 ರಡಿಯಲ್ಲಿ ಒಳಗೊಂಡಿರುವ ಯೋಜನೆಯಡಿಯಲ್ಲಿ ಅನುಮತಿಸುವ ಬಡ್ಡಿಯೊಂದಿಗೆ ಬಾಕಿಯಿರುವ ಚಂದಾದಾರಿಕೆಗಳು ಆನ್‌ಲೈನ್ ಕೆ.ಜಿ.ಐ.ಡಿ ಪೋರ್ಟಲ್ https://kgidonline.karnataka.gov.in/ ರಲ್ಲಿದ್ದಂತೆ ಇರತಕ್ಕದ್ದಾಗಿದೆ.

ಜೂನ್ 17ರಂದು ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆಯ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದೇಶದ ಪ್ರಕಾರ 1/6/2023 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ತನಕ ಬಡ್ಡಿದರ ಪರಿಷ್ಕರಣೆ ಮಾಡಲಾಗಿದೆ.

ಸಾಮೂಹಿಕ ವಿಮಾ ಯೋಜನೆಯ ಉಳಿತಾಯ ನಿಧಿಯ ಮೇಲಿನ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸುವ ದರವನ್ನೇ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿಪಡಿಸಲು ನಿರ್ಧರಿಸಿ, ಸರ್ಕಾರವು ಈ ಆದೇಶ ಹೊರಡಿಸಿತ್ತು. ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆಯ ಮೊತ್ತದ ಮೇಲಿನ ಬಡ್ಡಿ ದರವನ್ನು ದಿನಾಂಕ 01/06/2023 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಾರ್ಷಿಕ ಶೇ.7.1ಕ್ಕೆ ನಿಗದಿಪಡಿಸಿ ಆದೇಶಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+