ಜನನ ಪ್ರಮಾಣ ಪತ್ರ; ಮಗುವಿನ ಹೆಸರು ಸೇರ್ಪಡೆ, ಹೊಸ ಆದೇಶ

ಬೆಂಗಳೂರು, ಅಕ್ಟೋಬರ್ 06; ಕರ್ನಾಟಕದ ಪೌರಾಡಳಿತ ನಿರ್ದೇಶನಾಲಯ ಜನನ ಪ್ರಮಾಣದಲ್ಲಿ ಮಗುವಿನ ಹೆಸರು ಸೇರ್ಪಡೆ ಮಾಡುವ ಕುರಿತು ಹೊಸ ಆದೇಶವನ್ನು ಹೊರಡಿಸಿದೆ. ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರು ನೋಂದಣಿಗೆ ಮಾಡಿಸದಿದ್ದಲ್ಲಿ ಇದು ಜನರಿಗೆ ಸಹಾಯಕವಾಗಲಿದೆ.

ಮುಖ್ಯ ಯೋಜನಾಧಿಕಾರಿಗಳು, ಪೌರಾಡಳಿತ ನಿರ್ದೇಶನಾಲಯ ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಆದೇಶ ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರನ್ನು ಸೇರಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಜನನ ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಅಪರ ನಿರ್ದೇಶಕರು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಬೆಂಗಳೂರು ಇವರ ಪತ್ರ 7/9/2023 ಉಲ್ಲೇಖಿಸಲಾಗಿದೆ.

Add Child Name To Birth Certificate New Order

ಆದೇಶದ ವಿವರ; ಉಲ್ಲೇಖಿತ ಪತ್ರದನ್ವಯ ದಿನಾಂಕ 1/01/2000 ಕ್ಕಿಂತ ಮುಂಚೆ ಹಾಗೂ ನಂತರ ನೋಂದಾಯಿಸಿರುವ ಜನನ ಘಟನೆಗಳಿಗೆ, ಪ್ರಮಾಣ ಪತ್ರದಲ್ಲಿ ಹೆಸರು ಸೇರಿಸಲು ಸರ್ಕಾರದ ಅಧಿಸೂಚನೆಯಂತೆ ಇನ್ನೂ 5 ವರ್ಷಗಳು ಅಂದರೆ 7/2/2026 ರವರೆಗೆ ಅವಧಿಯನ್ನು ವಿಸ್ತರಿಸಿದ್ದು. ಅದರಂತೆ ಅಗತ್ಯ ಕ್ರಮವಹಿಸಲು ಕೋರಿದೆ ಎಂದು ಆದೇಶ ತಿಳಿಸಿದೆ.

ಜನನ ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಛೇರಿ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ,
ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರನ್ನು ಸೇರಿಸುವ ಬಗ್ಗೆ ಆದೇಶವೊಂದನ್ನು ಹೊರಡಿಸಿತ್ತು. ಕರ್ನಾಟಕ ಸರ್ಕಾರದ 8/2/2021ರ ಅಧಿಸೂಚನೆ, ಭಾರತದ ಮಹಾ ನೋಂದಣಾಧಿಕಾರಿಗಳ ಕಛೇರಿ ಪತ್ರ ಸಂಖ್ಯೆ ದಿನಾಂಕ 21/8/2023 ಉಲ್ಲೇಖ ಮಾಡಿತ್ತು.

ಆದೇಶದಲ್ಲಿ ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು, 1999ರ ನಿಯಮ 10(1)ರಲ್ಲಿ ತಿದ್ದುಪಡಿ ಮಾಡಲು ಭಾರತದ ಮಹಾ ನೋಂದಣಾಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ದಿನಾಂಕ 01/01/2000ಕ್ಕಿಂತ ಮುಂಚೆ ನೋಂದಾಯಿಸಿರುವ ಜನನ ಘಟನೆಗಳಿಗೆ ಹೆಸರು ಸೇರಿಸಲು 5 ವರ್ಷ ಅಂದರೆ 07/02/2026ರವರೆಗೆ ಅವಧಿಯನ್ನು ಅಧಿಸೂಚನೆಯನ್ವಯ ವಿಸ್ತರಿಸಲಾಗಿತ್ತು.

ಸದರಿ ಅಧಿಸೂಚನೆಯನ್ವಯ ಕರ್ನಾಟಕ ಜನನ, ಮರಣ ನೋಂದಣಿ ನಿಯಮ 1999 ಪ್ರಾರಂಭವಾದ ನಂತರ ನೋಂದಾಯಿಸಲಾದ ಜನನ ಘಟನೆಗಳಲ್ಲಿ ಹೆಸರು ಸೇರ್ಪಡೆಗಾಗಿ 15 ವರ್ಷಗಳ ಅವಧಿಯು ಮುಗಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತದ ಮಹಾ ನೋಂದಣಾಧಿಕಾರಿಗಳ ಕಚೇರಿ ಪತ್ರ ದಿನಾಂಕ 09/10/2019ರಲ್ಲಿ ಭಾರತದ ಉಪಮಹಾ ನೋಂದಣಾಧಿಕಾರಿಗಳು ಮಗುವಿನ ಹೆಸರನ್ನು ನೋಂದಾಯಿಸಲು ಈಗಾಗಲೇ ನೀಡಿರುವ 15 ವರ್ಷಗಳ ಕಾಲಾವಧಿಯು ಸಾಕಾಗಿದ್ದು, ಈ ದೃಷ್ಟಿಯಿಂದ ಅಂದರೆ 2000 ರಿಂದ 2004 ರ ನಡುವೆ ಸಂಭವಿಸಿದ ಜನನಗಳಿಗೆ ಮತ್ತೊಮ್ಮೆ ಸಡಿಲಿಕೆಯನ್ನು ನೀಡಬಹುದೆಂದು ತಿಳಿಸಿದ್ದರು.

ಆದ್ದರಿಂದ 2000 ವರ್ಷದ ನಂತರ ಸಂಭವಿಸುವ ಜನನ ಘಟನೆಗಳಿಗೆ ಹೆಸರು ಸೇರ್ಪಡೆ ವಿಸ್ತರಣೆ ಪ್ರಯೋಜನವನ್ನು ಪಡೆಯುವ ಬಗ್ಗೆ ಭಾರತದ ಮಹಾ ನೋಂದಣಾಧಿಕಾರಿಗಳ ಸ್ಪಷ್ಟೀಕರಣವನ್ನು ಕೋರಲಾಗಿತ್ತು. ಈ ಸಂಬಂಧ ಭಾರತದ ಮಹಾ ನೋಂದಣಾಧಿಕಾರಿಗಳು ತಿಳಿಸಿರುವಂತೆ ಅವಕಾಶ ನೀಡಲಾಗಿದೆ.

In case where the registration had been made after the date of commencement of the karnataka Rigistration of Births and Deaths Rules 1999 &15 years period from the date of registration has already been lapsed, they shall also be given five years period from the date of commencement of the Karnataka registration of Births and deaths(Amendment) Rule 2021. The State Government may act accordingly ಎಂದು ಉಲ್ಲೇಖಿಸಿರುವುದರಿಂದ ಹೊಸ ಆದೇಶ ಹೊರಡಿಸಲಾಗಿದೆ.

ಅದರಂತೆ ದಿನಾಂಕ 01/01/2000ಕ್ಕಿಂತ ಮುಂಚೆ ಹಾಗೂ ನಂತರ ನೋಂದಾಯಿಸಿರುವ ಜನನ ಘಟನೆಗಳಿಗೆ, ಪ್ರಮಾಣ ಪತ್ರದಲ್ಲಿ ಹೆಸರು ಸೇರಿಸಲು ಅಧಿಸೂಚನೆಯಂತೆ ಇನ್ನೂ 5 ವರ್ಷ ಅಂದರೆ 07/02/2026ರವರೆಗೆ ಅವಧಿಯನ್ನು ವಿಸ್ತರಿಸಿದ್ದು ನಿಮ್ಮ ಜಿಲ್ಲೆಯ ಎಲ್ಲಾ ನೋಂದಣಾಧಿಕಾರಿಗಳು/ ಉಪನೋಂದಣಾಧಿಕಾರಿಗಳು/ ಸಂರಕ್ಷಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಈ ಮೂಲಕ ಸೂಚಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+