ಅವರಿಗೂ ನಾಚಿಕೆ ಇಲ್ಲ: ಇವನಿಗೂ ಇಲ್ಲ ಎಂದು ಪ್ರಕಾರ್ ರೈ ಬೈದಿದ್ದು ಯಾರಿಗೆ?
ಬೆಂಗಳೂರು, ಏಪ್ರಿಲ್ 16: ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ವಿವಾದಿತ ಹೇಳಿಕೆ ನೀಡಿದ್ದು, ನಟ ಪ್ರಕಾಶ್ ರೈ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಕಿಡಿಕಾರಿರುವ ಪ್ರಕಾಶ್ ರೈ, ಒಂದೆಡೆ.. ಗ್ಯಾರಂಟಿಗಳಿಂದಾಗಿ ಸ್ವಲ್ಪವಾದರೂ ದಾರಿಗೆ ಬಂದ ಬಡ ಕುಟುಂಬಗಳು... ಮತ್ತೊಂದೆಡೆ... ಪೂರ್ತಿಯಾಗಿ ದಿಕ್ಕೆಟ್ಟ, ದಾರಿಗೆಟ್ಟ ಕುಮಾರಸ್ವಾಮಿಗಳು. -ಶಿವಸುಂದರ್ ಹೇಳಿ, "ದಾರಿ ತಪ್ಪಿದ ಮಗ ಯಾರು ?? ಎಂದು ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ. ಹಾಗೂ ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ನಟ ಪ್ರಕಾಶ್ ರೈ ಹೆಣ್ಣುಮಕ್ಕಳ ಬಗ್ಗೆ ಇಷ್ಟು ಕೀಳು ಮಟ್ಟಕ್ಕೆ ಮಾತನಾಡಲು ಕುಮಾರಸ್ವಾಮಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲವೇ"? ಎಂದು ಕಿಡಿಕಾರಿದ್ದಾರೆ. ಕಳೆದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಬಗ್ಗೆ ಕುಮಾರಸ್ವಾಮಿ ಕೆಟ್ಟದಾಗಿ ಮಾತನಾಡಿದ್ದರು. ಆ ಕಾರಣಕ್ಕೆ ಮಂಡ್ಯದ ಮಹಿಳೆಯರು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿದ್ದರು. ಈ ಬಾರಿಯ ಚುನಾವಣೆಯಲ್ಲೂ ಕುಮಾರಸ್ವಾಮಿ ಅದೇ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 'ಸರಿಯಾದ ಮಗ ಯಾರ ಎಂಬುವುದನ್ನು ಮಂಡ್ಯದ ಜನರು ತೀರ್ಮಾನಿಸಬೇಕು ಎಂದು ಹೇಳಿದರು.
ಎರಡೇ ವರ್ಷಗಳ ಹಿಂದೆ ದೆಹಲಿ ಮಹಾಪ್ರಭುಗಳು ಉತ್ತರ ಕುಮಾರಸ್ವಾಮಿಯ ಕುಟುಂಬಕ್ಕೆ ಅಪ್ಪ ಮಗ, ಮೊಮ್ಮಕ್ಕಳ ಪಕ್ಷ ಅಂತ ಮುಖಕ್ಕೆ ಉಗಿದಿದ್ರು. ಈ ಕಡೆ ಉತ್ತರ ಕುಮಾರಸ್ವಾಮಿಗಳು ಸಿಟ್ಟಿಗೆದ್ದು, ಮಹಾಪ್ರಭು ಕಳ್ಳ ಖದೀಮ ಅಂತೋನು, ಇಂಥೋನು ಅಂತ ಇವ್ರೂ ಎಂದು ಕುಮಾರಸ್ವಾಮಿ ಹಾಗೂ ಮೋದಿ ಅವರ ಮಾತುಗಳನ್ನ ಪ್ರಸ್ತಾಪಿಸಿ ಕಿಡಿಕಾರಿದ್ದಾರೆ.
ಒಂದೆಡೆ..
— Prakash Raj (@prakashraaj) April 14, 2024
ಗ್ಯಾರಂಟಿಗಳಿಂದಾಗಿ
ಸ್ವಲ್ಪವಾದರೂ
ದಾರಿಗೆ ಬಂದ
ಬಡ ಕುಟುಂಬಗಳು...
ಮತ್ತೊಂದೆಡೆ...
ಪೂರ್ತಿಯಾಗಿ
ದಿಕ್ಕೆಟ್ಟ,
ದಾರಿಗೆಟ್ಟ
ಕುಮಾರಸ್ವಾಮಿಗಳು..
-ಶಿವಸುಂದರ್
ಹೇಳಿ,
“ದಾರಿ ತಪ್ಪಿದ ಮಗ” ಯಾರು ?? #justasking pic.twitter.com/jGctH4wd8y
ಇದೀಗ ಇಬ್ರೂ MIX ಆಗಿಬಿಟ್ಟಿವ್ರೆ. ಅವನ ಉಗುಳನ್ನ ಇವನು ಇವನ ಉಗುಳನ್ನ ಅವನು ಒರೆಸಿಕೊಂಡು ಕುಂತಿದ್ದಾರೆ. ಅವನಿಗೂ ನಾಚಿಕೆಯಿಲ್ಲ, ಇವನಿಗೂ ನಾಚಿಕೆಯಿಲ್ಲ. ಎಲ್ಲವನ್ನೂ ನೋಡ್ತಿದ್ದೇವೆ ಇಬ್ಬರಿಗೂ ಪಾಠ ಕಲಿಸುತ್ತೇವೆ ಎಂದು ನಟ ಪ್ರಕಾಶ್ ರೈ ಕುಟುಕಿದ್ದಾರೆ.












Click it and Unblock the Notifications