‘ಕುಮಾರಣ್ಣ ಮಹಿಳೆಯರು ದಾರಿ ತಪ್ಪಿಲ್ಲ, ನಿನ್ನ ಮಗ ದಾರಿ ತಪ್ಪಿದ್ದಾನೆ’

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಭಾರತದಲ್ಲಿ ಮಾತ್ರವಲ್ಲ ವಿದೇಶದ ನೆಲದಲ್ಲೂ ವೈರಲ್ ಆಗುತ್ತಿದೆ. ಈ ವಿಚಾರವಾಗಿ ದೊಡ್ಡ ಮಟ್ಟಿಗಿನ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ನಟ ಪ್ರಕಾಶ್ ರಾಜ್ ಏನಂತ ಹೇಳಿದ್ದಾರೆ ಗೊತ್ತ? 'ಕುಮಾರಣ್ಣ ಮಹಿಳೆಯರು ದಾರಿ ತಪ್ಪಿಲ್ಲ, ನಿನ್ನ ಮಗ ದಾರಿ ತಪ್ಪಿದ್ದಾನೆ' ಅಂತಾ ನಟ ಪ್ರಕಾಶ್ ರಾಜ್ ಹೇಳಿದ್ದೇಕೆ? ಬನ್ನಿ ತಿಳಿಯೋಣ.

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್ ಅವರು, ಇತ್ತೀಚಿಗೆ ದೇಶ ಮಾರುವವರು ಜಾಸ್ತಿ ಆಗಿದ್ದಾರೆ. ಮಹಾಪ್ರಭುಗಳು ಆಳ್ವಿಕೆ ನಡೆಸುತ್ತಿದ್ದು ಅವ್ರು ಒಂದೇ ಭಾಷೆಯಲ್ಲಿ ಮಾತನಾಡುತ್ತಾರೆ. ನಾನು 7 ಭಾಷೆ ಮಾತನಾಡುತ್ತೇನೆ. ಮಹಾಪ್ರಭುಗಳು ಎಲ್ಲೆಲ್ಲಿ ಹೋಗ್ತಾರೋ ನಾನು ಹೋಗ್ತೀನಿ. ಮಹಾಪ್ರಭು ಬರೀ ಟಾಟಾ ಮಾಡಿ ಓಡಾಡುತ್ತಾರೆ. ಹಿಟ್ಲರ್ ಮಾದರಿಯಲ್ಲಿ ಅಡ್ಡಾಡ್ತಾರೆ ಅಂತಾ ನಟ ಪ್ರಕಾಶ್ ರಾಜ್ ತೀವ್ರ ವಾಗ್ದಾಳಿ ನಡೆಸಿದರು. ಹಾಗೇ ಇದೇ ವೇಳೆ ಪ್ರಜ್ವಲ್ ರೇವಣ್ಣ ವಿಚಾರ ಕೂಡ ಪ್ರಸ್ತಾಪ ಮಾಡಿದರು.

Actor Prakash Raj Is Challenged Former CM HD Kumaraswamy

ಪ್ರಜ್ವಲ್ ರೇವಣ್ಣ VS ಪ್ರಕಾಶ್ ರಾಜ್!

ಸಂವಿಧಾನ ಸುರಕ್ಷಾ ಸಮಿತಿ ಹಾಗೂ ಎದ್ದೇಳು ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ಕರ್ನಾಟಕದಿಂದ ಒಟ್ಟು 27 ಜನರ ಕಳಿಸಿದ್ದೆವು. ಇಬ್ಬರು ರಾಜ್ಯಸಭಾ ಸದಸ್ಯರು ಇದ್ದರು. ಅದ್ರಲ್ಲಿ ಒಬ್ಬರು ಹಣಕಾಸು ಸಚಿವರಿದ್ದರು. ಈರುಳ್ಳಿ ಬೆಳೆ ಹೆಚ್ಚಾದ್ರೆ ನಾನು ಅದನ್ನ ತಿನ್ನಲ್ಲ ಅಂತಾರೆ. ಒಬ್ಬರ ಪ್ರಕಾರ 2014 ಕ್ಕೆ ಸ್ವತಂತ್ರ ಬಂತಂತೆ. ಮಹಾ ಪ್ರಭುಗಳಿಗೆ ಸಂಸದರು ಬೇಕಿಲ್ಲ, ಹೊಗಳು ಭಟ್ಟರು ಬೇಕಿದೆ. ಬೇರೆ ಪಕ್ಷದ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಮ್ಯಾನಿಫೆಸ್ಟೋ ಅಂತಾರೆ. ಇವರು ಬಾಯಿ ಬಿಟ್ಟರೆ ದುರ್ಗಂಧ, ಕಳ್ಳರು ದರೋಡೆಕೋರರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ? ಭ್ರಷ್ಟರನ್ನು ಬಿಜೆಪಿಗೆ ಸೇರಿಕೊಳ್ಳುತ್ತಿದ್ದಾರೆ. ನಿಮ್ಮ ಪಕ್ಷವು ಏನಾದ್ರು ಜೈಲ್ ಆಗಿದೆಯಾ? ಎಂದು ನಟ ಪ್ರಕಾಶ್ ರಾಜ್ ಅವರು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಇದೇ ವೇಳೆ ಪ್ರಜ್ವಲ್ ರೇವಣ್ಣ ವಿಚಾರ ಕೂಡ ಪ್ರಸ್ತಾಪ ಮಾಡಿದರು.

ಭ್ರಷ್ಟಾಚಾರಿಗಳು ಬಿಜೆಪಿಗೆ ಸೇರಿದರೆ ಪರಿಶುದ್ಧ ಆಗುತ್ತಾರೆ. ಈ ಮಹಾಪ್ರಭುಗಳು ಬಿಜೆಪಿಯನ್ನೇ ಮುಳುಗಿಸ್ತಾರೆ. ಈಗಿನ ಚುನಾವಣೆಯಲ್ಲಿ ಬಿಜೆಪಿ ಸೋಲು ಗ್ಯಾರಂಟಿ. ಹೆದರದೆ ಎದುರಿಸೋಣ ಚುನಾವಣೆಯಲ್ಲಿ ಬರೀ ನಾವು ಗೆದ್ರೆ ಸಾಲದು. ನಾರಿ ಶಕ್ತಿ, ಬೇಟಿ ಪಡಾವೋ, ಬೇಟಿ ಬಚಾವೋ ಅಂತೀರಿ. ಓಲಂಪಿಕ್ ಗೆದ್ದು ಬಂದ ಹೆಣ್ಣು ಮಕ್ಕಳಿಂದ ಸೆಲ್ಫಿ ತಗೆದುಕೊಳ್ಳಲು‌ ಮೋದಿಗೆ ಗೊತ್ತು ಆದ್ರೆ ಅದೇ ಹೆಣ್ಣು ಮಕ್ಕಳು ಎಂಪಿ ಲೈಂಗಿಕ ದೌರ್ಜನ್ಯ ‌ಮಾಡ್ತಿದ್ದಾನೆ ಅಂತಾ ಪ್ರತಿಭಟನೆಯನ್ನ ‌ಮಾಡಿದರೆ, ಅವರ ಮೇಲೆ ಪೊಲೀಸ್ ಕೇಸ್ ಹಾಕುತ್ತೀರಾ ನಾಚಿಕೆ ಆಗಲ್ವಾ? ಎಂದು ಪ್ರಶ್ನಿಸಿದ ನಟ ಪ್ರಕಾಶ್ ರಾಜ್, ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದರು.

ದಾರಿ ತಪ್ಪಿದ ಮಗನನ್ನು ಈಗ...

ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರ ಪಕ್ಷವನ್ನು ಕುಟುಂಬ ರಾಜಕಾರಣ ಪಕ್ಷ ಅಂತ ಬೈಯ್ದಿದ್ದರು. ಆದರೆ ಈಗ ಅವರ ಜೊತೆ ಎಲೆಕ್ಷನ್‌ಗಾಗಿ ತಬ್ಬಿಕೊಂಡಿದ್ದಾರೆ. ಆದ್ರೆ ಈಗ ಪ್ರಜ್ವಲ್ ರೇವಣ್ಣ ಪ್ರಕರಣ ಬಂದ ತಕ್ಷಣ ನಮಗು ಆ ‌ಕುಟುಂಬಕ್ಕೂ ಸಂಬಂಧ ಇಲ್ಲ ಅಂತಾರೆ. ಸರ್ಕಾರ ಮಹಿಳೆಯರಿಗೆ ಬಸ್ ಉಚಿತ ಮಾಡಿದಕ್ಕೆ, ಮಹಿಳೆಯರು ದಾರಿ ತಪ್ಪಿದ್ದಾರೆ ಅಂತಾ ಇದೇ ಅಣ್ಣ ಕುಮಾರಣ್ಣ ಹೇಳುತ್ತಾರೆ. ಆದ್ರೆ ನಿಮ್ಮ ಮಗ ದಾರಿ ತಪ್ಪಿದ್ದಾನಲ್ಲ, ಅವನನ್ನು ಕರೆದುಕೊಂಡು ಬನ್ನಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು ಪ್ರಕಾಶ್ ರಾಜ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+