ವಿಚಾರಣೆಗಾಗಿ ಕರೆತಂದ ಆರೋಪಿ ಮುನಿರಾಬಾದ್ ಠಾಣೆಯಿಂದ ಪರಾರಿ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೊಪ್ಪಳ, ಫೆಬ್ರವರಿ 15: ಹುಲಿಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಪ್ರಕರಣವೊಂದರ ಕುರಿತು ವಿಚಾರಣೆಗಾಗಿ ಮುನಿರಾಬಾದ್ ಪೊಲೀಸ್ ಠಾಣೆಗೆ ಕರೆತರಲಾದ 32 ವರ್ಷದ ಹುಲುಗಪ್ಪ ಎಂಬ ವ್ಯಕ್ತಿ ಠಾಣೆಯಿಂದ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಈತನ ಪತ್ತೆಗಾಗಿ ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಹುಲಿಗಿ ಗ್ರಾಮದಲ್ಲಿ ನಡೆದ ಪ್ರಕರಣವೊಂದರ ಕುರಿತು ವಿಚಾರಣೆಗಾಗಿ ಅದೇ ಗ್ರಾಮದ ಹುಲಗಪ್ಪ ಎಂಬಾತನನ್ನು ಫೆಬ್ರವರಿ 11ರಂದು ಮುನಿರಾಬಾದ್ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಾಯಿತು. ಆರೋಪಿಯು ತನ್ನ ಸಂಬಂಧಿಕರೊಂದಿಗೆ ಠಾಣೆಗೆ ಹಾಜರಾಗಿದ್ದ. ನಂತರ ವಿಚಾರಣೆಗೆ ಒಳಪಡಿಸುವ ಸಮಯದಲ್ಲಿ ಹುಲುಗಪ್ಪ ತನ್ನ ಮೇಲೆ ಪ್ರಕರಣ ದಾಖಲುಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದಾನೆ.[ಕೊಪ್ಪಳ: ತುಂಗಭದ್ರಾ ಹಿನ್ನೀರಿನಲ್ಲಿ ಸಿಕ್ಕ ವ್ಯಕ್ತಿ ಶವ ಗುರುತಿಗೆ ಮನವಿ]

crime

ಆ ನಂತರ ಬಂಧನದ ಭೀತಿಯಿಂದ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ, ಓಡಿಹೋಗಿದ್ದಾನೆ. ಪೊಲೀಸ್ ಸಿಬ್ಬಂದಿ ಆತನ ಹಿಂದೆ ಓಡಿ, ಹಿಡಿಯಲು ಪ್ರಯತ್ನಿಸಿದರೂ ಪರಾರಿಯಾಗಿದ್ದಾನೆ. ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.[ಕೊಪ್ಪಳ: ತುಂಗಭದ್ರಾ ಹಿನ್ನೀರಿನಲ್ಲಿ ಸಿಕ್ಕ ವ್ಯಕ್ತಿ ಶವ ಗುರುತಿಗೆ ಮನವಿ]

ಆರೋಪಿ ಹುಲಗಪ್ಪನ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ- 08539-230100, 230222, ಅಥವಾ ಪಿಎಸ್‍ ಐ ಮುನಿರಾಬಾದ್ ಪೊಲೀಸ್ ಠಾಣೆ ಮೊ.9480803748ಕ್ಕೆ ಕರೆ ಮಾಡಿ, ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hulugappa, accused escaped from Munirabad police station (Koppal district). Police searching for accused Hulugappa.
Please Wait while comments are loading...