AAP Karnataka Candidate List 2023 : ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಎಪಿ, ಯಾರಿಗೆ ಯಾವ ಕ್ಷೇತ್ರ?, ತಿಳಿಯಿರಿ
ಆಮ್ ಆದ್ಮಿ ಪಕ್ಷವು (AAP) ಕರ್ನಾಟಕ ವಿಧಾನಸಭಾ ಚುನಾವಣೆ 2023 ಹಿನ್ನೆಲೆಯಲ್ಲಿ ಮೊದಲ ಹಂತದ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ಬಿಡುಗಡೆ ಮಾಡಿದೆ. ಅದರ ವಿವರ, ಪಟ್ಟಿಯ ಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು, ಮಾರ್ಚ್ 20: ಆಮ್ ಆದ್ಮಿ ಪಕ್ಷವು (AAP) ಕರ್ನಾಟಕ ವಿಧಾನಸಭಾ ಚುನಾವಣೆ 2023 ಹಿನ್ನೆಲೆಯಲ್ಲಿ ಮೊದಲ ಹಂತದ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ಬಿಡುಗಡೆ ಮಾಡಿದೆ.
ಮೊದಲ ಹಂತದಲ್ಲಿ ಒಟ್ಟು 80 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಹೆಸರುಗಳನ್ನು ಬಹಿರಂಗಪಡಿಸಿದೆ. ವಿಶೇಷವೆಂದರೆ ಇದರಲ್ಲಿ ಏಳು ಮಂದಿ ಮಹಿಳೆಯರಿಗೆ ಸ್ಥಾನ ದೊರೆತಿದೆ.

ನಟ ಟೆನ್ನಿಸ್ ಕೃಷಿ ಅವರು ತಿಂಗಳುಗಳ ಹಿಂದೆ ಎಎಪಿ ಪಕ್ಷ ಸೇರಿದ್ದು, ಅವರಿಗೆ ತುರುವೆಕೆರೆಯಿಂದ ಟಿಕೆಟ್ ನೀಡಲಾಗಿದೆ. ಬ್ರೀಜೇಶ್ ಕಾಳಪ್ಪ ಅವರು ಬೆಂಗಳೂರು ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ. ಡಾ.ರಾಘವೇಂದ್ರ ಚಿಂಚನಸೂರ ಅವರಿಗೆ ಗುಲ್ಬರ್ಗ ಗ್ರಾಮೀಣ ಟಿಕೆಟ್ ದೊರೆತಿದೆ. ಮಹಾಲಕ್ಷ್ಮೀ ಲೇಔಟ್ ನಿಂದ ಶಾಂತಲಾ ದಾಮ್ಲೆ ಸ್ಪಧಿಸಲಿದ್ದಾರೆ. ಇನ್ನೂ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರ ಅವರು ತಾವು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ.
ಕರ್ನಾಟಕದ 2023ರ ಚುನಾವಣೆಗೆ ಎಎಪಿ ಸಿದ್ದವಾಗಿದೆ. ಪ್ರಾಮಾಣಿಕ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಹೆಮ್ಮೆಯಿಂದ ಬಿಡುಗಡೆ ಮಾಡುತ್ತಿದ್ದೇವೆ.@AamAadmiParty is ready for Karnataka 2023 elections. Proud to announce the 1st list of honest candidates from @AAPKarnataka@ArvindKejriwal@aapkaPrithvi pic.twitter.com/PqX2YKa1Cp
— Dilip K. Pandey - दिलीप पाण्डेय (@dilipkpandey) March 20, 2023
ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, ನಮ್ಮ ಪಕ್ಷ ಭ್ರಷ್ಟಾಚಾರ-ವಿರೋಧಿ ಆಂದೋಲನದ ಮೂಲಕ ಹುಟ್ಟಿಕೊಂಡ ಪಕ್ಷವಾಗಿದೆ. ಭ್ರಷ್ಟಾಚಾರದಿಂದಾಗಿ ಈ ದೇಶದ ಜನರು ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾಗಿದ್ದಾರೆ. ದೇಶವನ್ನು ಉನ್ನತಿಯೆತ್ತ ಕರೆದೊಯ್ಯಲು ನಾವು ಕಣಕ್ಕಿಳಿಸಿರುವ ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಎಎಪಿ ಎಲ್ಲವನ್ನೂ ಬದಲಾಯಿಸಿದೆ. ಸಾಮಾನ್ಯ ಹಿನ್ನೆಲೆಯ ಪ್ರಾಮಾಣಿಕರನ್ನುಯ ರಾಜಕೀಯಕ್ಕೆ ಕರೆತಂದಿದ್ದೇವೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದೇವೆ. ಜಯಗಳಿಸದ ನಂತರ ಶೇ. 100ರಷ್ಟು ಭ್ರಷ್ಟಾಚಾರರಹಿತ ಆಡಳಿತ ನೀಡುವುದು ಮಾತ್ರವಲ್ಲದೇ, ಪ್ರತಿಯೊಬ್ಬನ ಹಕ್ಕುಗಳನ್ನು ಕಾಪಾಡುತ್ತೇವೆ ಎಂದರು.
ನಮ್ಮದು ಯುವಕರೆ ಹೆಚ್ಚಿರುವ ದೇಶವಾಗಿದ್ದು, ಯುವಕರು ತಮ್ಮ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಧ್ವನಿ ಹೊಂದಿರಬೇಕು. ಎಎಪಿ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಯುವ ಸ್ಪರ್ಧಿಗಳೇ ಇದ್ದಾರೆ. ಬಿಡುಗಡೆಗೊಂಡ ಪಟ್ಟಿಯಲ್ಲಿ ಶೇ.50ಕ್ಕಿಂತಲೂ ಹೆಚ್ಚು ಮಂದಿ 45 ವಯೋಮಿತಿಗಿಂತ ಕಡಿಮೆ ವಯಸ್ಸಿನವರೇ ಆಗಿದ್ದಾರೆ ಎಂದು ಅವರು ವಿವರಿಸಿದರು.
ಎಎಪಿ ಪಟ್ಟಿಯಲ್ಲಿ ಐವರು ಸಾಮಾಜಿಕ ಕಾರ್ಯಕರ್ತರು ಇದ್ದಾರೆ. ಬಿಡಗಡೆಗೊಂಡವರಲ್ಲಿನ ಪ್ರಮುಖರ ಪಟ್ಟಿ ಹೀಗಿದೆ.
* ತೇರದಾಳ - ಅರ್ಜುನ ಹಲಗಿಗೌಡರ
* ಬಾದಾಮಿ - ಶಿವರಾಯಪ್ಪ ಜೋಗಿನ
* ಬಾಗಲಕೋಟೆ - ರಮೇಶ ಬದ್ನೂರ
* ಅಥಣಿ - ಸಂಪತ್ ಕುಮಾರ ಶೆಟ್ಟಿ
* ಬೈಲಹೊಂಗಲ - ಬಿ. ಎಂ. ಚಿಕ್ಕನಗೌಡರ
* ರಾಮದುರ್ಗ - ಮಲ್ಲಿಕಜಾನ್ ನದಾಫ
* ಹುಬ್ಬಳ್ಳಿ-ದಾರವಾಡ ಪೂರ್ವ - ಬಸವರಾಜ ಎಸ್ ತೇರದಾಳ
* ಹುಬ್ಬಳ್ಳಿ-ದಾರವಾಡ ಕೇಂದ್ರ - ವಿಕಾಸ ಸೊಪ್ಪಿನ
* ಕಲಘಟಗಿ - ಮಂಜುನಾಥ ಜಕ್ಕಣ್ಣವರ
* ರೋಣ - ಆನೇಕಲ್ ದೊಡ್ಡಯ್ಯ
* ಬ್ಯಾಡಗಿ - ಎಂ. ಎನ್. ನಾಯಕ
* ರಾಣೆಬೆನ್ನೂರು - ಹನುಮಂತಪ್ಪ ಕಬ್ಬಾರ
* ಬಸವಕಲ್ಯಾಣ - ದೀಪಕ ಮಲಗಾರ
* ಹುಮನಾಬಾದ - ಬ್ಯಾಂಕ್ ರೆಡ್ಡಿ
* ಬೀದರ ದಕ್ಷಿಣ - ನಸೀಮುದ್ದಿನ್ ಪಟೇಲ
* ಭಾಲ್ಕಿ - ತುಕಾರಾಮ ನಾರಾಯಣರಾವ್ ಹಜಾರೆ
* ಔರಾದ - ಬಾಬುರಾವ ಅಡ್ಕೆ
* ಗುಲ್ಬರ್ಗ ಗ್ರಾಮೀಣ - ಡಾ. ರಾಘವೇಂದ್ರ ಚಿಂಚನಸೂರ
* ಗುಲ್ಬರ್ಗ ದಕ್ಷಿಣ - ಸಿದ್ದರಾಮ ಅಪ್ಪಾರಾವ ಪಾಟೀಲ
* ಗುಲ್ಬರ್ಗ ಉತ್ತರ - ಸಯ್ಯದ್ ಸಜ್ಜಾದ್ ಅಲಿ
* ಇಂಡಿ - ಗೋಪಾಲ ಆರ್ ಪಾಟೀಲ
* ಗಂಗಾವತಿ - ಶರಣಪ್ಪ ಸಜ್ಜಿಹೊಲ
* ರಾಯಚೂರು - ಗ್ರಾಮೀಣ ಡಾ. ಸುಭಾಶಚಂದ್ರ ಸಾಂಭಾಜಿ
* ರಾಯಚೂರು - ಡಿ. ವೀರೇಶ ಕುಮಾರ ಯಾದವ
* ಮಾನ್ವಿ - ರಾಜಾ ಶಾಮಸುಂದರ ನಾಯಕ
* ಲಿಂಗಸುಗೂರು - ಶಿವಪುತ್ರ ಗಾಣದಾಳ
* ಸಿಂಧನೂರು - ಸಂಗ್ರಾಮ ನಾರಾಯಣ ಕಿಲ್ಲೇದ
* ವಿಜಯನಗರ - ಡಿ. ಶಂಕರದಾಸ
* ಕೂಡ್ಲಿಗಿ - ಶ್ರೀನಿವಾಸ ಎನ್
* ಹರಪನಹಳ್ಳಿ - ನಾಗರಾಜ ಎಚ್












Click it and Unblock the Notifications