ಕನ್ನಡದಲ್ಲೇ ಆಧಾರ್ ಕಾರ್ಡ್ ಮಾಹಿತಿ ಪಡೆಯಬಹುದು!

ಬೆಂಗಳೂರು, ಸೆಪ್ಟೆಂಬರ್ 21: ತಡವಾಗಿಯಾದರೂ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು 5 ಪ್ರಾದೇಶಿಕ ಭಾಷೆಗಳಲ್ಲಿ ಆಧಾರ್ ಕಾರ್ಡ್ ಮಾಹಿತಿ ನೀಡಲಾರಂಭಿಸಿದೆ. ಇದರಲ್ಲಿ ನಮ್ಮ ಕನ್ನಡ ಭಾಷೆಯೂ ಚಾಲ್ತಿಗೆ ಬಂದಿರುವುದು ಸಂತಸದ ಸುದ್ದಿ.

ಅಂದರೆ ಇದು ಅಂತರ್ಜಾಲ ಸೇವೆಗೆ ಸೀಮಿತವಾಗಿದ್ದು, online ಮೂಲಕ 'ಆಧಾರ್‌' ಗುರುತಿನ ಸಂಖ್ಯೆ ಮಾಡಿಸಿಕೊಳ್ಳಲು ಅಥವಾ ಅದಕ್ಕೆ ಸಂಬಂಧಪಟ್ಟ ಏನೇ ಮಾಹಿತಿ ಬೇಕೆಂದರೂ UIDAI ವಾಬ್ ಸೈಟಿನಲ್ಲಿ ಕನ್ನಡದಲ್ಲಿ ಮಾಹಿತಿ ಲಭ್ಯವಾಗುತ್ತದೆ.

Aadhaar card UIDAI information available in Kannada online Bangalore,

ಇದು ಕನ್ನಡ ಸೇರಿದಂತೆ ಬಂಗಾಳಿ, ಗುಜರಾತಿ, ಮರಾಠಿ, ತಮಿಳು ಭಾಷೆಯಲ್ಲಿಯೂ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಿದೆ. ಮಾರತ್‌ ಹಳ್ಳಿಯಲ್ಲಿರುವ ಯುಐಡಿಎಎಐ ತಾಂತ್ರಿಕ ಕೇಂದ್ರದಲ್ಲಿ ಶುಕ್ರವಾರ ವಿವಿಧ ಭಾಷೆಯಲ್ಲಿರುವ ಅಂತರ್ಜಾಲ ತಾಣಕ್ಕೆ ಪ್ರಾಧಿಕಾರದ ಅಧ್ಯಕ್ಷ ನಂದನ್‌ ನಿಲೇಕಣಿ ಶುಕ್ರವಾರ ಚಾಲನೆ ದೊರೆಯಿತು.

ಈ ಹಿಂದೆ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಮಾಹಿತಿ ಸಿಗುತ್ತಿತ್ತು. ಮುಂದಿನ ದಿನಗಳಲ್ಲಿ ಎರಡನೇ ಹಂತದಲ್ಲಿ ಅಸ್ಸಾಮಿ, ಮಲಯಾಳ, ಒರಿಯಾ, ಪಂಜಾಬಿ, ಹಾಗೂ ತೆಲುಗು ಭಾಷೆಗಳನ್ನು ವೆಬ್‌ಸೈಟ್‌ಗೆ ಅಳವಡಿಸಲಾಗುತ್ತದೆ. ಗ್ರಾಹಕರು ವೆಬ್‌ಸೈಟ್‌ಗೆ ಸಲ್ಲಿಸಿದ ವಿವರವು 13 ಭಾಷೆಗಳಲ್ಲಿ ದಾಖಲಾಗಲಿದ್ದು, ಅಷ್ಟೂ ಭಾಷೆಗಳಲ ಲೂ ಮುದ್ರಣಗೊಳ್ಳಲಿದೆ. ಜನರು ಸುಲಭವಾಗಿ ಕಾರ್ಡ್ ಪಡೆಯಲಿ ಎಂಬ ಉದ್ದೇಶದಿಂದ ಈ ವೆಬ್‌ ಸೈಟ್‌ಗಳಲ್ಲಿ ಸ್ಥಳೀಯ ಭಾಷೆಯನ್ನು ಅಳವಡಿಸಿ ಮಾಹಿತಿ ನೀಡಲಾಗುತ್ತಿದೆ.

2014ರ ವೇಳೆಗೆ ದೇಶದಲ್ಲಿ 60 ಕೋಟಿ ಮಂದಿಗೆ ಆಧಾರ್ ಕಾರ್ಡ್ ನೀಡುವ ಯೋಜನೆ ಹೊಂದಲಾಗಿದ್ದು, 2013ರ ಸೆಪ್ಟೆಂಬರ್‌ವರೆಗೆ 42.5 ಕೋಟಿ ಜನರಿಗೆ ಕಾರ್ಡ್ ತಲುಪಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+