ಕಾಂಗ್ರೆಸ್-ಜೆಡಿಎಸ್ ವಾರ್‌ನಲ್ಲಿ ಕೇಳಿಬಂದ ಆ 'ಶಿಖಂಡಿ, ನಪುಂಸಕ'ರು ಯಾರು?
ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಟ್ವೀಟ್ ವಾರ್ ಜೋರಾಗಿ ನಡೆಯುತ್ತಿದೆ. ಜೆಡಿಎಸ್ ನಾಯಕನ ಬಗ್ಗೆ ಕಾಂಗ್ರೆಸ್ ಆರೋಪಗಳನ್ನು ಮಾಡುತ್ತಿದೆ. ಮತ್ತೊಂದೆಡೆ ಜೆಡಿಎಸ್ ಕೂಡ ಕಾಂಗ್ರೆಸ್ ನಾಯಕನ ಬಗ್ಗೆ ಗಂಭೀರ ಆರೋಪಗಳನ್ನು ಮಾಡಲಾರಂಭಿಸಿದೆ. ಇಬ್ಬರ ಕಿತ್ತಾಟ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.
ಮೊದಲಿಗೆ ಟ್ವೀಟ್ ವಾರ್ ಶುರು ಮಾಡಿದ ಜೆಡಿಎಸ್, 'ಕಲೆಕ್ಷನ್ ಅಧ್ಯಕ್ಷನ ಪರ್ಸಂಟೇಜ್ ಪುರಾಣ ಎಂದು ಶೀರ್ಷಿಕೆ ನೀಡಿ ವಾಗ್ದಾಳಿ ನಡೆಸಿತ್ತು. ಪರ್ಸೆಂಟೇಜ್ ಗಿರಾಕಿ ಎಂದು ಸ್ವತಃ ಕಾಂಗ್ರೆಸ್ ವಕ್ತಾರರೇ, ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ನ ರೋಲ್ ಕಾಲ್ ಪುರಾಣ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿ 15 ದಿನಗಳ ಕಾಲ ತೇಪೆ ಹಚ್ಚಿದ ರಸ್ತೆ ಗುಂಡಿಗಳು ಒಂದೇ ರಾತ್ರಿ ಸುರಿದ ಮಳೆಗೆ ಕೊಚ್ಚಿಹೋಗಿದೆ' ಎಂದು ಆರೋಪ ಮಾಡಿತ್ತು.

'ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಮೇಯುತ್ತಿರುವ "ಕಲೆಕ್ಷನ್ ಗಿರಾಕಿ"ಯ ಪರ್ಸಂಟೇಜ್ ಅವ್ಯವಹಾರಕ್ಕೆ ಮತ್ತು ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿ! ಅಂದ್ಹಾಗೆ, ಕಿತ್ತುಹೋಗಿರುವ ರಸ್ತೆ ಗುಂಡಿಗಳನ್ನು ವೀಕ್ಷಿಸಲು ಗುಂಡುಹಾಕಿ ಸಿಟಿ ನೈಟ್ ರೌಂಡ್ಸ್ ಯಾವಾಗ ಮಾಡ್ತೀರಾ..?' ಎಂದು ಕೆಣಕಿತ್ತು.
ಈಗಲೂ ಕಲೆಕ್ಷನ್ ಗಿರಾಕಿ, ಆ ಶಿಖಂಡಿ, ನಪುಂಸಕ, ರಣಹೇಡಿ, ಮಾನಗೇಡಿಯನ್ನು ಸಮರ್ಥಿಸಿಕೊಳ್ಳುತ್ತೀರಾ ? ನಿಮಗೆ ನಾಚಿಕೆಯಾಗಲ್ವಾ..? @INCKarnataka
— Janata Dal Secular (@JanataDal_S) October 8, 2024
ರಾತ್ರಿ ಕಾರ್ಯಾಚರಣೆ ಮಾಡುವ ಅಧ್ಯಕ್ಷನ ಬಗ್ಗೆ ಕೆಪಿಸಿಸಿ ಕಛೇರಿಯ ಪಡಸಾಲೆಯಲ್ಲೇ ಪ್ರತಿನಿತ್ಯ ಬಿಸಿ ಬಿಸಿ ಚರ್ಚೆ ನಡೆಯುತ್ತವೆ.
ಕಾಂಗ್ರೆಸ್ ಹಿರಿಯ ನಾಯಕರು ಹೇಳುವಂತೆ ರೌಡಿ ಕೊತ್ವಾಲನ… pic.twitter.com/nJIfWijJdP
ಬಳಿಕ ಇದಕ್ಕೆ ಪ್ರತಿದಾಳಿ ಶುರು ಮಾಡಿದ್ದ ಕಾಂಗ್ರೆಸ್, 'ಕುಮಾರಸ್ವಾಮಿ ಅವರ ಪುರಾಣವನ್ನು ಜನತಾ ದಳ ಪಕ್ಷದವರೇ ಬಿಚ್ಚಿಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ?' ಎಂದು ಪ್ರಶ್ನಿಸಿತ್ತು.
'ಹಿಟ್ ಅಂಡ್ ರನ್ ಜಾಯಮಾನ ನಿಮ್ಮದು. ನಿಮ್ಮ ಜೀವನದಲ್ಲಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಮಾಡಿರುವ ಹಲವು ಆರೋಪಗಳ ಪೈಕಿ ಒಂದಕ್ಕಾದರೂ ಪೂರಕ ದಾಖಲೆ ಒದಗಿಸಿದ್ದೀರಾ? ಸ್ವತಃ ಡಿ.ಕೆ. ಶಿವಕುಮಾರ್ ಅವರು ನೀವು ಮಾಡಿರುವ ಆರೋಪಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡಲು ಆಹ್ವಾನಿಸಿದ್ದಾರೆ. ಆ ಮೂಲಕ ತಮ್ಮ ಪೌರುಷವನ್ನು ಸಾಬೀತುಪಡಿಸಿದ್ದಾರೆ' ಎಂದು ಹೇಳಿತ್ತು.

'ಈ ಆಹ್ವಾನ ಸ್ವೀಕರಿಸದೇ ವಿಧಾನಸಭೆ ಬಿಟ್ಟು ಹೋಗಿದ್ದು ನೀವು. ಈಗ ಹೇಳಿ ಶಿಖಂಡಿ, ನಪುಂಸಕ, ರಣಹೇಡಿ ಯಾರು? ಎಂದು ಪ್ರಶ್ನೆ ಮಾಡಿತ್ತು. ಅಂದಹಾಗೆ, ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ರಾಸಲೀಲೆ ನಡೆಸುವುದು, ಅಮಾಯಕ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದನ್ನೇ ಪೌರುಷ ಎಂದು ಭಾವಿಸಿರುವ ನೀವು, ಡಿ.ಕೆ.ಶಿವಕುಮಾರ ಅವರಂತೆ ನೇರ ಹೋರಾಟ ಮಾಡುವ ಮೂಲಕ ನಿಮ್ಮ ಪೌರುಷ ಸಾಬೀತುಪಡಿಸಿ' ಎಂದು ಸವಾಲು ಹಾಕಿತ್ತು.
ಕಾಂಗ್ರೆಸ್‌ಗೆ ಜೆಡಿಎಸ್ ಕೌಂಟರ್: ಕಾಂಗ್ರೆಸ್ ಟ್ವೀಟ್‌ಗೆ ಪ್ರತಿಯಾಗಿ ಜೆಡಿಎಸ್ ಕೂಡ ಟ್ವೀಟ್‌ನಲ್ಲಿ ಕೌಂಟರ್ ಕೊಟ್ಟಿದೆ. 'ಈಗಲೂ ಕಲೆಕ್ಷನ್ ಗಿರಾಕಿ, ಆ ಶಿಖಂಡಿ, ನಪುಂಸಕ, ರಣಹೇಡಿ, ಮಾನಗೇಡಿಯನ್ನು ಸಮರ್ಥಿಸಿಕೊಳ್ಳುತ್ತೀರಾ? ನಿಮಗೆ ನಾಚಿಕೆಯಾಗಲ್ವಾ..?' ಎಂದು ಡಿ.ಕೆ.ಶಿವಕುಮಾರ್ ವಿಚಾರವಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದೆ.
'ರಾತ್ರಿ ಕಾರ್ಯಾಚರಣೆ ಮಾಡುವ ಅಧ್ಯಕ್ಷನ ಬಗ್ಗೆ ಕೆಪಿಸಿಸಿ ಕಚೇರಿಯ ಪಡಸಾಲೆಯಲ್ಲೇ ಪ್ರತಿನಿತ್ಯ ಬಿಸಿಬಿಸಿ ಚರ್ಚೆ ನಡೆಯುತ್ತವೆ. ಕಾಂಗ್ರೆಸ್ ಹಿರಿಯ ನಾಯಕರು ಹೇಳುವಂತೆ ರೌಡಿ ಕೊತ್ವಾಲನ ಶಿಷ್ಯ, ಹಾಲಿ ಅಧ್ಯಕ್ಷನ ಹಣ ಸಂಪಾದನೆಯ ಅಡ್ಡದಾರಿಯ ಗುಟ್ಟು ಇಡೀ ರಾಜ್ಯಕ್ಕೆ ಗೊತ್ತು' ಎಂದು ವಾಗ್ದಾಳಿ ನಡೆಸಿದೆ.

'ತಿಹಾರ್ ಜೈಲು ಹಕ್ಕಿ, ಸಿಡಿ ಶಿವು, ಗ್ರಾನೈಟ್-ಹವಾಲಾ ದಂಧೆಕೋರನ ಪೌರುಷದ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಬೇರೆ ಕೇಡು.. ಎಂಥಹ ಭಂಡಬಾಳು ! ಥೂ ಅಸಹ್ಯ.. !' ಎಂದು ಏಕವಚನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.












Click it and Unblock the Notifications