ಮಡಿಲಲ್ಲಿ ಆಡಲು ಮಗುವಿಲ್ಲ ಎಂದು ನೊಂದ ಗೃಹಿಣಿ ಆತ್ಮಹತ್ಯೆ
ಚಾಮರಾಜನಗರ, ಡಿ, 23: ಮದುವೆಯಾಗಿ ನಾಲ್ಕು ವರ್ಷವಾದರೂ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಆರ್.ಎಸ್. ದೊಡ್ಡಿಯಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರವಿಕುಮಾರ್ ಎಂಬುವರ ಪತ್ನಿ ಪವಾನಿ (26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕೊಳ್ಳೇಗಾಲದ ಹನೂರು ಸಮೀಪದ ಆರ್.ಎಸ್.ದೊಡ್ಡಿಯಲ್ಲಿ 4 ವರ್ಷಗಳ ಹಿಂದೆ ರವಿಕುಮಾರ್ ನನ್ನು ವಿವಾಹವಾಗಿದ್ದಳು. ಆದರೆ ಅನ್ಯೋನ್ಯವಾಗಿದ್ದ ದಂಪತಿಗಳಿಗೆ ಮಕ್ಕಳಿಲ್ಲ ಎಂಬ ಕೊರಗಿತ್ತು.[ತಾಯಿ ಮಕ್ಕಳಿಗೆ ವಿಷವಿಕ್ಕಿದ ಕಿತ್ತು ತಿನ್ನುವ ಬಡತನ]

ಪವಾನಿ ಅವರು ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ವೈದ್ಯರು ಸೇರಿದಂತೆ ಎಲ್ಲ ರೀತಿಯ ವ್ರತ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಇದರಿಂದ ನೊಂದು ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆಯೇ ಆಗಮಿಸಿದ ಮೃತ ಪವಾನಿಯ ಪೋಷಕರು ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.[ಸಸಿ ನೆಟ್ಟು ಹೆಣ್ಣು ಮಗುವಿನ ಜನನ ಸ್ವಾಗತಿಸುವ ಗ್ರಾಮಸ್ಥರು]
ಅಲ್ಲದೆ ರವಿಕುಮಾರ್ ಮನೆಯ ಮುಂದೆ ಗಲಾಟೆಗೆ ಮುಂದಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಹನೂರು ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications