7ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಸಿಹಿಸುದ್ದಿ?
7ನೇ ವೇತನ ಆಯೋಗ ಎಂಬುದು ಸರ್ಕಾರಿ ನೌಕರರಿಗೆ ಗಗನ ಕುಸುಮವೇ ಆಗಿದೆ. ಅದ್ರಲ್ಲೂ ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬಂದಿರುವ ನೌಕರರಿಗೆ ವೇತನ ಸರಿಯಾಗಿ ಹೆಚ್ಚಳ ಆಗುತ್ತಿಲ್ಲ ಎಂಬ ಬೇಸರ ಕಾಡುತ್ತಿದೆ. ಹೀಗಿದ್ದಾಗ ಹೊಸದಾಗಿ, ಕರ್ನಾಟಕದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಸರ್ಕಾರಿ ನೌಕರರಿಗೆ ಭರವಸೆ ನೀಡಿತ್ತು. ಆದರೆ ಇದೇ ಸಮಯಕ್ಕೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡ ಬಂತು.
2023 ವಿಧಾನಸಭೆ ಚುನಾವಣೆ ಸಮಯದಲ್ಲಿ ಅಂದಿನ ಬಿಜೆಪಿ ಪಕ್ಷದ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಸರ್ಕಾರಿ ನೌಕರರು ಗರಂ ಆಗಿ ಹೋರಾಟ ನಡೆಸಿದ್ದರು. ತೀವ್ರ ಎಚ್ಚರಿಕೆ ನೀಡಿ ಹೋರಾಟ ನಡೆಸಿದ್ದ ರಾಜ್ಯ ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರುವ ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಅದು ಈಡೇರಲೇ ಇಲ್ಲ, ಕೊನೆಗೆ ವಿಧಾನಸಭೆ ಚುನಾವಣೆಯು ಬಂತು. ಆಗ ಕಾಂಗ್ರೆಸ್ ಪಕ್ಷದ ನಾಯಕರು ತಾವು ಅಧಿಕಾರಕ್ಕೆ ಬಂದರೆ, ರಾಜ್ಯದ ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.

ಹೀಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ 7ನೇ ವೇತನ ಆಯೋಗದ ಭರವಸೆ ಈಡೇರಿಲ್ಲ. ಈ ನಡುವೆ ಸರ್ಕಾರಿ ನೌಕರರ ಸಂಘ ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದೆ. ತಮ್ಮ ಬೇಡಿಕೆ ಈಡೇರಲಿ ಅಂತಾ ಆಗ್ರಹಿಸುತ್ತಿದ್ದಾರೆ ಕರ್ನಾಟಕದ ಸರ್ಕಾರಿ ನೌಕರರು. ಇದೀಗ ಲೋಕಸಭೆ ಚುನಾವಣೆ ಮುಗಿದಿದೆ, ಸಿಎಂ ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು? ಬನ್ನಿ ತಿಳಿಯೋಣ.
7ನೇ ವೇತನ ಆಯೋಗ ಸಿಹಿಸುದ್ದಿ ಪಕ್ಕಾ?
2024ರ ಮಾರ್ಚ್ 16ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಸಲ್ಲಿಕೆ ಆಗಿದೆ. ಸಿಎಂ ಸಿದ್ದರಾಮಯ್ಯ ಅವರು ಈ ವರದಿ ಸ್ವೀಕಾರ ಮಾಡಿದ್ದಾರೆ. ಈ ವರದಿ ಜಾರಿ ಮಾಡುವ ಭರವಸೆ ನೀಡಿದ್ದಾರೆ. 7ನೇ ವೇತನ ಆಯೋಗವು ಇದೀಗ ಕರ್ನಾಟಕ ಸರ್ಕಾರಿ ನೌಕರರ ಮೂಲ ವೇತನದ ಶೇಕಡಾ 27.5 ರಷ್ಟು ಹೆಚ್ಚಳ ಮಾಡೋದಕ್ಕೆ ಶಿಫಾರಸು ಮಾಡಿದೆ. ಹೀಗಿದ್ದಾಗ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಕೂಡ ಮುಗಿದು ಹೋಗಿದೆ.
ಸರ್ಕಾರಿ ನೌಕರರಿಂದ ಬೃಹತ್ ಹೋರಾಟ?
ಈ ಎಲ್ಲಾ ಕಾರಣಕ್ಕೆ ಸರ್ಕಾರಿ ನೌಕರರಲ್ಲಿ ಹೊಸ ಭರವಸೆ ಮೂಡಿದ್ದು, ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಸರ್ಕಾರ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ. ಅಕಸ್ಮಾತ್ ಕರ್ನಾಟದಲ್ಲಿ ಸರ್ಕಾರಿ ನೌಕರರಿಗೆ ಸರಿಯಾಗಿ ವೇತನ ಪರಿಷ್ಕರಣೆ ಆಗದೇ ಇದ್ದರೆ, ಸರ್ಕಾರಿ ನೌಕರರಿಂದ ಬೃಹತ್ ಹೋರಾಟ ಕೂಡ ನಡೆಯುವ ಸಾಧ್ಯತೆ ಇದೆ. ಅದರಲ್ಲೂ ಬಿಬಿಎಂ ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಇದೇ ಕಾರಣಕ್ಕೆ ಸರ್ಕಾರಿ ನೌಕರರ ಭರವಸೆ ಈಡೇರುವ ಸಾಧ್ಯತೆ ದಟ್ಟವಾಗಿದೆ.
ಶೀಘ್ರದಲ್ಲೇ ಸಿಹಿಸುದ್ದಿ ಪಕ್ಕಾ?
ಆಧುನಿಕ ಕಾಲಘಟ್ಟದಲ್ಲಿ ಎಲ್ಲಾ ಬೆಲೆ ಏರಿಕೆ ಆಗಿದೆ ಹಾಗೇ ತಮ್ಮ ಸಂಬಳದಲ್ಲಿ ಅಂದ್ರೆ ವೇತನ ಏರಿಕೆ ಕೂಡ ಆಗಬೇಕು ಎಂಬುದು ಸರ್ಕಾರಿ ನೌಕರರ ಬೇಡಿಕೆ ಆಗಿದೆ. ಹೀಗಿದ್ದರೂ ಈ ಮಾತಿಗೆ ಸರ್ಕಾರ ಒಪ್ಪುತ್ತಿಲ್ಲ ಎಂದು ನೌಕರರು ಗರಂ ಆಗಿ ಪ್ರತಿಭಟನೆ ಮಾಡಿ ಆಡಳಿತಕ್ಕೆ ಬಿಸಿ ಮುಟ್ಟಿಸಿ ಎಚ್ಚರಿಕೆ ನೀಡಿದ್ದರು. ಹೀಗಿದ್ದರೂ ಅವರ ಬೇಡಿಕೆಗಳು ಈಡೇರಿಲ್ಲ. ಆದರೂ ಈಗ ಸಿಹಿಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಬಗ್ಗೆ ಗುಡ್ ನ್ಯೂಸ್ ಕೊಡಲು ಸಿಎಂ ಸಿದ್ದರಾಮಯ್ಯ ಸರ್ಕಾರ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಂಡಂತೆ ಕಾಣುತ್ತಿದೆ.












Click it and Unblock the Notifications