ರಾಜ್ಯದಲ್ಲಿ ಇಂದು ಕೋವಿಡ್ ಸೋಂಕಿತರಿಗಿಂತ ಬಿಡುಗಡೆಯಾದವರ ಸಂಖ್ಯೆ ಹೆಚ್ಚು
ಬೆಂಗಳೂರು, ಸೆಪ್ಟೆಂಬರ್ 28: ರಾಜ್ಯದಲ್ಲಿ ಸೋಮವಾರ 6892 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ ಒಟ್ಟು ಪ್ರಕರಣಗಳ ಸಂಖ್ಯೆ 5,82,458ಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು 1,04,048 ಸಕ್ರಿಯ ಪ್ರಕರಣಗಳಿವೆ.
ಇಂದು 59 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ 8,641. ಸೋಮವಾರ ಒಟ್ಟು 7509 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 4,69,750ಕ್ಕೆ ಏರಿದೆ. 822 ಮಂದಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 58,862 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 2,722 ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಬೆಂಗಳೂರಿನಲ್ಲಿನ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 2,23,569ಕ್ಕೆ ಏರಿದೆ. ಒಂಬತ್ತು ಮಂದಿಯ ಸಾವಿನೊಂದಿಗೆ ಮರಣ ಪ್ರಮಾಣ 2,845ಕ್ಕೆ ತಲುಪಿದೆ.

ಇಂದು ಉಡುಪಿಯಲ್ಲಿ 332, ಹಾಸನದಲ್ಲಿ 320, ಕಲಬುರಗಿ 273, ಮೈಸೂರು 240, ಚಿಕ್ಕಮಗಳೂರು 219, ದಕ್ಷಿಣ ಕನ್ನಡ 217, ಮಂಡ್ಯ 209, ಬಾಗಲಕೋಟೆ 191, ತುಮಕೂರು 187, ಶಿವಮೊಗ್ಗ 181, ಚಿತ್ರದುರ್ಗ ಮತ್ತು ಉತ್ತರ ಕನ್ನಡ ತಲಾ 176, ಬಳ್ಳಾರಿ 164 ಪ್ರಕರಣಗಳು ವರದಿಯಾಗಿವೆ.
ಕೊಡಗಿನಲ್ಲಿ ಅತಿ ಕಡಿಮೆ ಎಂದರೆ 25 ಪ್ರಕರಣಗಳು ವರದಿಯಾಗಿವೆ. ಕೊಪ್ಪಳ ಮತ್ತು ಬೀದರ್ ತಲಾ 45, ರಾಯಚೂರು 52, ಗದಗ 61, ಚಾಮರಾಜನಗರ 64, ರಾಮನಗರ 75 ಪ್ರಕರಣಗಳು ದಾಖಲಾಗಿವೆ. ವಿಜಯಪುರ 117, ಯಾದಗಿರಿ 82, ಹಾವೇರಿ 83, ಧಾರವಾಡ 145, ದಾವಣಗೆರೆ 107, ಚಿಕ್ಕಬಳ್ಳಾಪುರ 106, ಬೆಂಗಳೂರು ಗ್ರಾಮಾಂತರ 110 ಪ್ರಕರಣಗಳು ದಾಖಲಾಗಿವೆ.












Click it and Unblock the Notifications