ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 7,865ಕ್ಕೆ ಇಳಿಕೆ

ಬೆಂಗಳೂರು, ಜನವರಿ 19: ರಾಜ್ಯದಲ್ಲಿ ಮಂಗಳವಾರ ಸಂಜೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬಿಡುಗಡೆ ಮಾಡಿರುವ ವರದಿಯಂತೆ ಕಳೆದ 24 ಗಂಟೆಗಳಲ್ಲಿ 645 ಹೊಸ ಪ್ರಕರಣಗಳು ವರದಿಯಾಗಿವೆ. ಆರು ಮಂದಿ ಸೋಂಕಿತರು ಮೃತಪಟ್ಟಿದ್ದು, 807 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 7,865ಕ್ಕೆ ತಗ್ಗಿದೆ. ಇದುವರೆಗೂ 9,33,077 ಪ್ರಕರಣಗಳು ವರದಿಯಾಗಿದ್ದು, ಅವರಲ್ಲಿ 9,13,012 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 12,181 ಮೃತಪಟ್ಟಿದ್ದಾರೆ. ಬ್ರಿಟನ್‌ನಿಂದ ಮರಳಿದವರಲ್ಲಿ ಇದುವರೆಗೂ 50 ಮಂದಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಇವರಲ್ಲಿ 14 ಮಂದಿಗೆ ರೂಪಾಂತರಿ ವೈರಸ್ ತಗುಲಿದೆ.

ಬೆಂಗಳೂರು ನಗರದಲ್ಲಿ 357 ಮಂದಿಗೆ ಇಂದು ಸೋಂಕು ತಗುಲಿರುವುದು ವರದಿಯಾಗಿದೆ. ಮೈಸೂರಿನಲ್ಲಿ 34 ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ 25, ಚಿಕ್ಕಬಳ್ಳಾಪುರ 36, ಬೆಳಗಾವಿ ಮತ್ತು ಬೆಂಗಳೂರು ಗ್ರಾಮಾಂತರಗಳಲ್ಲಿ ತಲಾ 18, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 17, ಚಿತ್ರದುರ್ಗ 16, ಮಂಡ್ಯದಲ್ಲಿ 15 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾವೇರಿಯಲ್ಲಿ ಇಂದು ಒಂದೂ ಪ್ರಕರಣ ವರದಿಯಾಗಿಲ್ಲ.

645 New Covid Cases, 6 Death Reported In Karnataka

ಬಾಗಲಕೋಟೆ 3, ಬಳ್ಳಾರಿ 2, ಬೀದರ್ 6, ಚಾಮರಾಜನಗರ 2, ಚಿಕ್ಕಮಗಳೂರು 2, ದಾವಣಗೆರೆ 5, ಧಾರವಾಡ 8, ಗದಗ 2, ಹಾಸನ 10, ಕಲಬುರಗಿ 8, ಕೊಡಗು 6, ಕೋಲಾರ 8, ಕೊಪ್ಪಳ 2, ರಾಯಚೂರು 7, ರಾಮನಗರ 2, ತುಮಕೂರು 11, ಉಡುಪಿ 4, ವಿಜಯಪುರ ಮತ್ತು ಯಾದಗಿರಿಯಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+