ಎಚ್ಚರ: ಮಹಿಳೆ ಫ್ರೆಂಡ್ ರಿಕ್ವೆಸ್ಟ್ ಸೀಕ್ವರಿಸಿದ ಬೆಂಗಳೂರು ವ್ಯಕ್ತಿಗೆ ₹70 ಲಕ್ಷ ನಾಮಾ: ಆಗಿದ್ದೇನು?
ಬೆಂಗಳೂರು, ನವೆಂಬರ್ 10: ತಂತ್ರಜ್ಞಾನ-ಇಂಟರ್‌ನೆಟ್ ಯುಗದಲ್ಲಿ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಮಹಿಳೆಯರು, ಇಲ್ಲವೇ ಅವರ ಹೆಸರು ಮುಂದಿಟ್ಟುಕೊಂಡು ಸೈಬರ್ ಖದೀಮರು ಲಕ್ಷ ಲಕ್ಷ ಹಣ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು, ನಗರದ ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಸಿಇಎನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಗರದ 63 ವರ್ಷದ ನಿವೃತ್ತ ವ್ಯಕ್ತಿಯೊಬ್ಬರು ಸೈಬರ್ ವಂಚನೆಗೆ ಬಲಿಯಾಗಿ ತನ್ನ ನಿವೃತ್ತಿಯ ಹಣವನ್ನೆಲ್ಲಾ ಕಳೆದುಕೊಂಡ ಘಟನೆ ನಡೆದಿದೆ. ಮಹಿಳೆ ಕಳುಹಿಸಿದ ಸಂದೇಶ ಮತ್ತು ಉಡುಗೊರೆ ನಂಬಿ ವ್ಯಕ್ತಿ 70 ಲಕ್ಷ ರೂಪಾಯಿ ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತ ಮಹಿಳೆ ಹೆಸರಿನಲ್ಲಿ ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸಿದ್ದಕ್ಕೆ ವ್ಯಕ್ತಿ ಭಾರಿ ತೆತ್ತಿದ್ದಾರೆ. ಆರೋಪಿಯು ಈ ಸಂತ್ರಸ್ತ ನಿವೃತ್ತ ವ್ಯಕ್ತಿಗೆ 25 ಕೋಟಿ ರೂಪಾಯಿ ಮೌಲ್ಯದ ಉಡುಗೊರೆ ಕಳುಹಿಸುವುದಾಗಿ ಭರವಸೆ ನೀಡಿದ್ದಾನೆ. ಅದಕ್ಕಾಗಿ ಹಣ ನೀಡುವಂತೆ ಮನವಿ ಮಾಡಿದ್ದ ಎಂದು ವರದಿ ಆಗಿದೆ.
ಫ್ರೆಂಡ್ ರಿಕ್ವೆಸ್ಟ್, ಚಾಟ್: 25 ದಿನದಲ್ಲಿ ವಂಚನೆ
ಕಳೆದ ಅಕ್ಟೋಬರ್ ವ್ಯಕ್ತಿಗೆ ಆರೋಪಿಗೆ ಅಪರಿಚಿತ ಮಹಿಳೆ ಹೆಸರಿನಲ್ಲಿ ರಿಕ್ವೆಸ್ಟ್ ಕಳುಹಿಸಿದ್ದಾರೆ. ಅಂದು ರಿಕ್ವೆಸ್ಟ್ ಸ್ವೀಕರಿಸಿದ ವ್ಯಕ್ತಿಯು ಅಲ್ಲಿಂದ 25 ದಿನಗಳಲ್ಲಿ ನಿವೃತ್ತಿಗೆ ನಂತರದ ಜೀವನಕ್ಕೆಂದು ಇಟ್ಟಿದ್ದ ಮುಕ್ಕಾಲು ಕೋಟಿ ಹಣ ವೈಬರ್ ವಂಚಕನ ಪಾಲಾಗಿದೆ.

ಸಂತ್ರಸ್ತ ವ್ಯಕ್ತಿಯನ್ನು ಚಂದ್ರಾ ಬಡಾವಣೆಯ ಮೊದಲ ಹಂತದ ನಿವಾಸಿ ಎನ್ನಲಾಗಿದೆ. ವಂಚಕ ಮಹಿಳೆ ತನ್ನನ್ನು ಮರಿಯಾ ಲಿಯೋನಾಸ್ಮಿಕ್ ಎಂದು ಗುರುತಿಸಿಕೊಂಡಿದ್ದಾಳೆ. ಅಕ್ಟೋಬರ್ 1 ರಿಂದ ವ್ಯಕ್ತಿಯೊಂದಿಗೆ ಚಾಟಿಂಗ್ ಆರಂಭಿಸಿದ್ದಾಳೆ. ಅಕ್ಟೋಬರ್ 8 ರಂದು ವ್ಯಕ್ತಿಗೆ ಕೆಲವು ದುಬಾರಿ ಉಡುಗೊರೆ ಕಳುಹಿಸುವುದಾಗಿ ಸಂದೇಶ ಕಳುಹಿಸಿದ್ದಾಳೆ.
ಮರುದಿನ ಸಂತ್ರಸ್ತ ವ್ಯಕ್ತಿಗೆ ಉಡುಗೊರೆಗಳನ್ನು ಕಳುಹಿಸಿರುವುದಾಗಿಯೂ ಸಂದೇಶವೊಂದನ್ನು ಕಳುಹಿಸಿದ್ದಾಳೆ. ಅಕ್ಟೋಬರ್ 11 ರಂದು ಕಸ್ಟಮ್ಸ್ ಅಧಿಕಾರಿ ಎಂದು ಹೇಳಿಕೊಂಡು ಮತ್ತೊಬ್ಬ ವಂಚಕ ಸಂತ್ರಸ್ತನಿಗೆ ಕರೆ ಮಾಡಿದ್ದಾನೆ. ಕರೆ ಸ್ವೀಕರಿಸಿದವರಿಗೆ ಕೆಲವು ಲಕ್ಷ ಡಾಲರ್‌ಗಳನ್ನು ಹೊಂದಿರುವ ಕೊರಿಯರ್ ಇದೆ ಎಂದು ಹೇಳುವ ಕರೆಗಳು ಮೇಲಿಂದ ಮೇಲೆ ಬರುತ್ತಲೇ ಇದ್ದವು ಎಂದು ಹೇಳಿಕೊಂಡಿದ್ದಾರೆ.
ಹಣ ವಸೂಲಾತಿಗೆ RBI ನಕಲಿ ಮುದ್ರೆ ಬಳಕೆ
ಉಡುಗೊರೆ ಪಡೆಯುವ ಸಂಬಂಧ ವ್ಯಕ್ತಿ ಕಸ್ಟಮ್ಸ್ ಸುಂಕ, ಕರೆನ್ಸಿ ಪರಿವರ್ತನೆ ಶುಲ್ಕಗಳು ಹಾಗೂ ದುಬಾರಿ
ಉಡುಗೊರೆಯ ತೆಗಿಗೆ ಎಂದು 70 ಲಕ್ಷ ರೂಪಾಯಿ ಹಣ ಪಾವತಿಸಿಕೊಂಡಿದ್ದಾರೆ. ಇದೆಲ್ಲ ಕರೆನ್ಸಿ ಪರಿವರ್ತನೆ, ತೆರಿಗೆ ವಸೂಲಾತಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಚಿಹ್ನೆಯ ಇ-ಮೇಲ್ ಅನ್ನು ಬಳಸಿದ್ದಾನೆ. ಈ ಕಾರಣದಿಂದಲೇ ವ್ಯಕ್ತಿ ಮೋಸ ಹೋಗಿ ದುಡ್ಡು ಕಳೆದುಕೊಂಡಿದ್ದಾರೆ. ಸದ್ಯ ಪ್ರಕರಣ ಭಾರತೀಯ ದಂಡ ಸಂಹಿತೆ 420 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ-2000 ಅಡಿ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications