ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ 2016
ಬೆಂಗಳೂರು, ಡಿಸೆಂಬರ್ 01 : 2016ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 11ರ ಶುಕ್ರವಾರದಿಂದ ಆರಂಭವಾಗುತ್ತಿವೆ. ಈ ಬಾರಿ 6,40,033 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯಾದ್ಯಂತ 1031 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್. ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ...
ಪಿಯುಸಿ ವೇಳಾಪಟ್ಟಿ : ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ 2016ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 11ರಿಂದ 28ರ ತನಕ ಪರೀಕ್ಷೆಗಳು ನಡೆಯಲಿವೆ.
ಸೋಮವಾರ ಪರೀಕ್ಷಾ ವೇಳಾಪಟ್ಟಿಯನ್ನು ಇಲಾಖೆ ಪ್ರಕಟಿಸಿದೆ. ಹಿಂದೆ ಕರಡು ವೇಳಾಪಟ್ಟಿಯನ್ನು ಪ್ರಕಟಿಸಿದಾಗ ಮಾರ್ಚ್ 10 ರಿಂದ 26ರ ತನಕ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿತ್ತು. ಈ ವೇಳಾಪಟ್ಟಿಗೆ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ಮಾರ್ಚ್ 11ರಿಂದ 28 ತನಕ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿದೆ. [ದ್ವಿತೀಯ ಪಿಯುಸಿ ಫಲಿತಾಂಶ 2015: ಹೈಲೈಟ್ಸ್]

ಪದವಿ ಪೂರ್ವ ಶಿಕ್ಷಣ ಇಲಾಖೆ ಅಂತಿಮ ವೇಳಾಪಟ್ಟಿಯನ್ನು ಕಾಲೇಜುಗಳಿಗೆ ಕಳುಹಿಸಿಕೊಟ್ಟಿದೆ. pue.kar.nic.in ವೆಬ್ ಸೈಟ್‌ನಲ್ಲಿಯೂ ವೇಳಾಪಟ್ಟಿ ಲಭ್ಯವಿದೆ. [2015ರ ಪಿಯು ಫಲಿತಾಂಶ : ಯಾವ ಜಿಲ್ಲೆಗೆ ಯಾವ ಸ್ಥಾನ]
ಪರೀಕ್ಷೆ ವೇಳಾಪಟ್ಟಿ
| ದಿನಾಂಕ | ||
| ವಿಷಯ | ಸಮಯ | |
| ಮಾರ್ಚ್ 11 (ಶುಕ್ರವಾರ) | ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್ | 9 ರಿಂದ 12.15 |
| ಮಾರ್ಚ್ 12 (ಶನಿವಾರ) | ಇತಿಹಾಸ, ಗಣಕ ವಿಜ್ಞಾನ | 9 ರಿಂದ 12.15 |
| ಮಾರ್ಚ್ 14 (ಸೋಮವಾರ) | ಭೂಗೋಳ ಶಾಸ್ತ್ರ, ಗಣಿತ | 9 ರಿಂದ 12.15 |
| ಮಾರ್ಚ್ 15 (ಮಂಗಳವಾರ) | ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್ | 9 ರಿಂದ 12.15 |
| ಮಾರ್ಚ್ 16 (ಬುಧವಾರ) | ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ | 9 ರಿಂದ 12.15 |
| ಮಾರ್ಚ್ 17 (ಗುರುವಾರ) | ಮನಶಾಸ್ತ್ರ, ಭೌತಶಾಸ್ತ್ರ | 9 ರಿಂದ 12.15 |
| ಮಾರ್ಚ್ 17 (ಗುರುವಾರ) | ಕರ್ನಾಟಕ , ಹಿಂದೂಸ್ತಾನಿ ಸಂಗೀತ | 2 ರಿಂದ 5.15 |
| ಮಾರ್ಚ್ 19 (ಶನಿವಾರ) | ಐಚ್ಛಿಕ ಕನ್ನಡ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ | 9 ರಿಂದ 12.15 |
| ಮಾರ್ಚ್ 21 ( ಸೋಮವಾರ) | ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ | 9 ರಿಂದ 12.15 |
| ಮಾರ್ಚ್ 22 (ಮಂಗಳವಾರ) | ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ | 9 ರಿಂದ 12.15 |
| ಮಾರ್ಚ್ 23 (ಬುಧವಾರ) | ಹಿಂದಿ, ತೆಲುಗು | 9 ರಿಂದ 12.15 |
| ಮಾರ್ಚ್ 24 (ಗುರುವಾರ) | ಸಮಾಜ ಶಾಸ್ತ್ರ, ಲೆಕ್ಕಶಾಸ್ತ್ರ | 9 ರಿಂದ 12.15 |
| ಮಾರ್ಚ್ 26 (ಶನಿವಾರ) | ಇಂಗ್ಲಿಶ್ | 9 ರಿಂದ 12.15 |
| ಮಾರ್ಚ್ 28 (ಸೋಮವಾರ) | ಕನ್ನಡ, ತಮಿಳು, ಮಲಯಾಳಂ, ಅರೇಬಿಕ್ | 9 ರಿಂದ 12.15 |












Click it and Unblock the Notifications