ಕರ್ನಾಟಕದಲ್ಲಿ ಕೊರೊನಾ ಅಬ್ಬರ; 29438 ಹೊಸ ಪ್ರಕರಣ ದಾಖಲು

ಬೆಂಗಳೂರು, ಏಪ್ರಿಲ್ 24: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಮುಂದುವರೆದಿದ್ದು, ಶನಿವಾರ 29438 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದಿನನಿತ್ಯದ ಪ್ರಕರಣಗಳು ಮೂವತ್ತು ಸಾವಿರದ ಅಂಚಿಗೆ ತಲುಪಿವೆ.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ದಿನನಿತ್ಯದ ಪ್ರಕರಣಗಳು 20 ಸಾವಿರದ ಮೇಲೆ ದಾಖಲಾಗುತ್ತಿವೆ. ಇದೀಗ 30 ಸಾವಿರಕ್ಕೆ ಬಂದಿದೆ. ಬೆಂಗಳೂರು ನಗರವೊಂದರಲ್ಲೇ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಶನಿವಾರವೂ ಬೆಂಗಳೂರಿನಲ್ಲಿ 17342 ಕೊರೊನಾ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಹೊರತುಪಡಿಸಿ ತುಮಕೂರು, ಹಾಸನ, ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಗದಗದಲ್ಲಿ ಕನಿಷ್ಠ ಪ್ರಕರಣ ದಾಖಲಾಗಿದ್ದು, ಸಂಖ್ಯೆ 76 ಇದೆ. ಮುಂದೆ ಓದಿ...

29438 New Coronavirus Cases Reported In Karnataka On April 24

29438 ಹೊಸ ಕೊರೊನಾ ಪ್ರಕರಣಗಳು ಪತ್ತೆ

29438 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಕೊರೊನಾ ಸೋಂಕಿನಿಂದಾಗಿ 208 ಮಂದಿ ಸಾವನ್ನಪ್ಪಿದ್ದು, 9058 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 14,283 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 10,55,612 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 13,04,397 ಪ್ರಕರಣಗಳು ದಾಖಲಾಗಿದ್ದು, ಸದ್ಯ 2,34,483 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣ

ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣ

ಇಡೀ ದೇಶದಲ್ಲಿಯೇ ಬೆಂಗಳೂರು ನಗರದಲ್ಲಿ ಅತಿ ಹೆಚ್ಚಿನ ಸಕ್ರಿಯ ಕೊರೊನಾ ಪ್ರಕರಣಗಳು ದಾಖಲಾಗಿವೆ. ಶುಕ್ರವಾರದವರೆಗೆ 1.5 ಲಕ್ಷ ಸಮೀಪಕ್ಕೆ ಬೆಂಗಳೂರಿನಲ್ಲಿ ಸಕ್ರಿಯ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿವೆ. ಶುಕ್ರವಾರ ಬೆಂಗಳೂರು ನಗರ ಪ್ರದೇಶವೊಂದರಲ್ಲೇ 16662 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಈ ಮೂಲಕ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,49,624 ಕ್ಕೆ ಏರಿಕೆಯಾಗಿತ್ತು.

ವೀಕೆಂಡ್ ಕರ್ಫ್ಯೂ; ಜನರಿಗೆ ಧನ್ಯವಾದ ಸಲ್ಲಿಸಿದ ಗೃಹ ಸಚಿವರು
ಕೊರೊನಾ ಹರಡುವಿಕೆ ತಡೆಗೆ ವಾರಾಂತ್ಯ ಕರ್ಫ್ಯೂ ಅಸ್ತ್ರ

ಕೊರೊನಾ ಹರಡುವಿಕೆ ತಡೆಗೆ ವಾರಾಂತ್ಯ ಕರ್ಫ್ಯೂ ಅಸ್ತ್ರ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೊರೊನಾ ಹರಡುವಿಕೆ ತಡೆಯಲು ವಾರಾಂತ್ಯ ಲಾಕ್‌ಡೌನ್ ಜಾರಿಯಾಗಿದೆ. ಏಪ್ರಿಲ್ 24ರಿಂದ ಮೇ 4ರವರೆಗೂ ಈ ಆದೇಶ ಜಾರಿಯಲ್ಲಿರಲಿದ್ದು, ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರವರೆಗೂ ಕರ್ಫ್ಯೂ ಇರಲಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಕರ್ಫ್ಯೂ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಕರ್ಫ್ಯೂಗೆ ಸಹಕರಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಬಗ್ಗೆ ಖಂಡಿತವಾಗಿಯೂ ಚರ್ಚೆ ಆಗುತ್ತೆ. ವೀಕೆಂಡ್ ಕರ್ಫೂ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಯುತ್ತದೆ. ಲಸಿಕೆ ನೀತಿ ಬಗ್ಗೆ ಸಮಾಲೋಚನೆ ನಡೆಸಿ ಆ ನೀತಿಗೆ ಅಂತಿಮ ಸ್ವರೂಪ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Recommended Video

    ಕೊರೋನಾಗೆ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಿ ! | Oneindia Kannada
    ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಹೇಗಿವೆ

    ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಹೇಗಿವೆ

    ಬಾಗಲಕೋಟೆ 105, ಬಳ್ಳಾರಿ 732, ಬೆಳಗಾವಿ 313, ಬೆಂಗಳೂರು ಗ್ರಾಮಾಂತರ 684, ಬೆಂಗಳೂರು ನಗರ 17342, ಬೀದರ್ 365, ಚಾಮರಾಜನಗರ 295, ಚಿಕ್ಕಬಳ್ಳಾಪುರ 506, ಚಿಕ್ಕಮಗಳೂರು 185, ಚಿತ್ರದುರ್ಗ 114, ದಕ್ಷಿಣ ಕನ್ನಡ 517, ದಾವಣಗೆರೆ 254, ಧಾರವಾಡ 385, ಗದಗ 76, ಹಾಸನ 823, ಹಾವೇರಿ 92, ಕಲಬುರಗಿ 791, ಕೊಡಗು 196, ಕೋಲಾರ 373, ಕೊಪ್ಪಳ 266, ಮಂಡ್ಯ 688, ಮೈಸೂರು 536, ರಾಯಚೂರು 497, ರಾಮನಗರ 385, ಶಿವಮೊಗ್ಗ 266, ತುಮಕೂರು 1559, ಉಡುಪಿ 403, ಉತ್ತರ ಕನ್ನಡ 185, ವಿಜಯಪುರ 411, ಯಾದಗಿರಿ 95 ಪ್ರಕರಣಗಳು ಪತ್ತೆಯಾಗಿವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+