SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025, ಸಂಭಾವನೆ ಪರಿಷ್ಕರಣೆ
ಬೆಂಗಳೂರು, ಮಾರ್ಚ್ 18: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2025ರ ತಯಾರಿ ಆರಂಭವಾಗಿದೆ. ಮಾರ್ಚ್ 21ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಈ ಹಿನ್ನಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಾರ್ಯದಲ್ಲಿ ತೊಡಗುವ ಅಧಿಕಾರಿ/ ಸಿಬ್ಬಂದಿಗಳ ಸಂಭಾವನೆಯನ್ನು ಪರಿಷ್ಕರಣೆ ಮಾಡಲಾಗಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಆದೇಶವನ್ನು ಹೊರಡಿಸಿದೆ. ಪ್ರತಿ ವರ್ಷ ಸಹ ಪರೀಕ್ಷೆ ಸಂದರ್ಭದಲ್ಲಿ ಸಂಭಾವನೆಯನ್ನು ಪರಿಷ್ಕರಣೆ ಮಾಡಲಾಗುತ್ತದೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21 ರಿಂದ ಏಪ್ರಿಲ್ 4ರ ತನಕ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಲ್ ಟಿಕೆಟ್ ತೋರಿಸಿ ಬಂದು, ಹೋಗಲು ವ್ಯವಸ್ಥೆ ಮಾಡಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಕಾರ್ಯದಲ್ಲಿ ತೊಡಗುವ ಅಧಿಕಾರಿ/ ಸಿಬ್ಬಂದಿಗಳ ವಿವಿಧ ಸಂಭಾವನೆಗಳನ್ನು ಪರಿಷ್ಕರಣೆ ಮಾಡಲಾಗಿದೆ. ಪರೀಕ್ಷೆಗಳ ವಿವಿಧ ಕಾರ್ಯಗಳಾದ ಪರೀಕ್ಷಾ ಕೇಂದ್ರದ ಸಾದಿಲ್ವಾರು, ಮೌಲ್ಯಮಾಪನ ಕಾರ್ಯಕ್ಕೆ ಭಾಗವಹಿಸುವ ಅಧಿಕಾರಿ/ ಸಿಬ್ಬಂದಿಗಳ ಸಂಭಾವನೆ ಮತ್ತು ಎಸ್‌ಎಸ್‌ಎಲ್‌ಸಿ (ಜೆ.ಟಿ.ಎಸ್) ಪರೀಕ್ಷೆಯ ಸಂಭಾವನೆಯನ್ನು ಸರ್ಕಾರಿ ಆದೇಶದಲ್ಲಿನ ಅವಕಾಶದ ಮೇರೆಗೆ ಮೂಲ ದರಗಳ ಮೇಲೆ ಶೇ 5ರಷ್ಟು ಪರಿಷ್ಕರಿಸಿ ಆದೇಶಿಸಲಾಗಿದೆ. ಇದರಿಂದಾಗಿ ಪರೀಕ್ಷಾ ಕಾರ್ಯದ ವಿವಿಧ ಸಂಭಾವನೆ ಎಷ್ಟಾಗುತ್ತದೆ? ಎಂದು ವಿವರ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಪರಿಷ್ಕೃತ ಸಂಭಾವನೆ (ಪ್ರತಿ ದಿನಕ್ಕೆ)
* ಮುಖ್ಯ ಅಧೀಕ್ಷಕರು 240 ರೂ.ಗಳು
* ಉಪ ಮುಖ್ಯ ಅಧೀಕ್ಷಕರು 229 ರೂ.ಗಳು
* ಅಭಿರಕ್ಷಕರು (ಕಸ್ಟೋಡಿಯನ್) 216 ರೂ.ಗಳು
* ಕೊಠಡಿ ಮೇಲ್ವಿಚಾರಕರು 181 ರೂ.ಗಳು
* ಪರೀಕ್ಷಾ ಕೇಂದ್ರದ ಸಹಾಕರು (ಪ್ರ.ದ.ಸ/ ದ್ವಿ.ದ.ಸ) 120 ರೂ.ಗಳು
* ಡಿ-ದರ್ಜೆ ನೌಕರ 91 ರೂ.ಗಳು
* ಕೇಂದ್ರ ಸಾದಿಲ್ವಾರು (ಪ್ರತಿ ವಿದ್ಯಾರ್ಥಿಗೆ) ಪೂರ್ಣ ಪರೀಕ್ಷೆಗೆ ಒಟ್ಟಾರೆ ಸಾದಿಲ್ವಾರು 13ರೂ.
* ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಣೆ ಮಾಡುವ ಪೊಲೀಸ್ ಸಿಬ್ಬಂದಿಗೆ ಒಬ್ಬರಿಗೆ ಮಾತ್ರ ದಿನಕ್ಕೆ 954 ರೂ.ಗಳು. (ರೂ. 159*6 ದಿನಗಳು =954).
ಮೌಲ್ಯ ಮಾಪನ ಕೇಂದ್ರದ ಜಂಟಿ ಮುಖ್ಯ ಅಧೀಕ್ಷಕರು/ ಉಪ ಮುಖ್ಯ ಅಧೀಕ್ಷಕರ ಸಂಭಾವನೆ (ಒಟ್ಟಾರೆ). ಜಂಟಿ ಮುಖ್ಯ ಪರೀಕ್ಷಕರು 8362 ರೂ.ಗಳು. ಉಪ ಮುಖ್ಯ ಪರೀಕ್ಷಕರು 6284 ರೂ.ಗಳು. ಉತ್ತರ ಪತ್ರಿಕೆ ಮೌಲ್ಯ ಮಾಪನ ದರಗಳು (ಪ್ರತಿ ಪತ್ರಿಕೆಗೆ) ಪ್ರಥಮ ಭಾಷೆ 26 ರೂ.ಗಳು, ದ್ವಿತೀಯ/ ತೃತೀಯ ಭಾಷೆ 24 ರೂ.ಗಳು, ಐಚ್ಛಿಕ ವಿಷಯಗಳು 24 ರೂ.ಗಳು. (ಜೆಟಿಎಸ್) ಎಸ್‌ಎಸ್‌ಎಲ್‌ಸಿ ಪ್ರಾಯೋಗಿಕ ಪರೀಕ್ಷೆ ದರಗಳು. ಪಶ್ನೆ ಪತ್ರಿಕೆ ಸೆಟ್ ಒಂದಕ್ಕೆ 471 ರೂ.ಗಳು., ಮೌಲ್ಯ ಮಾಪನ ಒಂದು ಬ್ಯಾಚ್‌ಗೆ 380 ರೂ.ಗಳು,ಕ ಮುಖ್ಯಸ್ಥರಿಗೆ ಸಂಭಾವನೆ (ಒಟ್ಟಾರೆ) 1892 ರೂ.ಗಳು.
ಮೌಲ್ಯ ಮಾಪನ (ಭತ್ಯೆಗಳು)
* ದಿನಭತ್ಯೆ (ಬೆಂಗಳೂರು) 685 ರೂ.ಗಳು.
* ದಿನಭತ್ಯೆ (ಇತರ ಸ್ಥಳಗಳು) 539 ರೂ.ಗಳು
* ಸ್ಥಳೀಯ ಭತ್ಯೆ (ಬೆಂಗಳೂರು) 269 ರೂ.
* ಸ್ಥಳೀಯ ಭತ್ಯೆ (ಇತರ ಸ್ಥಳಗಳು) 217 ರೂ.ಗಳು
* ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ (ಒಟ್ಟಾರೆ) 5193 ರೂ.ಗಳು
* ಕ್ಯಾಂಪ್ ಸಹಾಯಕರು (ಒಟ್ಟಾರೆ) 1449 ರೂ.ಗಳು
* 'ಡಿ' ದರ್ಜೆ ಸಿಬ್ಬಂದಿ (ಒಟ್ಟಾರೆ) 725 ರೂ.
* ಅಂತರ್ ಜಿಲ್ಲಾ ಜಾಗೃತ ದಳದ ಸಿಬ್ಬಂದಿ ವಿಶೇಷ ಸಾದಿಲ್ವಾರು ಭತ್ಯೆ. ಮಹಾನಗರ ಪಾಲಿಕೆ ವ್ಯಾಪ್ತಿ 570 ರೂ., ಇತರ ಸ್ಥಳಗಳು 381 ರೂ.ಗಳು.
* ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರು ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗೆ ಸಂಭಾವನೆ ಪ್ರತಿ ದಿನಕ್ಕೆ 121 ರೂ.ಗಳು
* ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಪ್ರಶ್ನೆ ಪತ್ರಿಕೆಗಳ ಸಂರಕ್ಷಣೆಗೆ ಸ್ಟ್ರಾಂಗ್ ರೂಂ ಕಾಯುವ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಇತರೆ ಪೂರಕ ಕಾರ್ಯಗಳಿಗೆ ಪೊಲೀಸ್ ಸಿಬ್ಬಂದಿಗೆ ನೀಡುವ ಸಂಭಾವನೆ (ಪ್ರತಿ ದಿನಕ್ಕೆ) 220 ರೂ.ಗಳು.












Click it and Unblock the Notifications