ಗಣಿತ ಪ್ರಶ್ನೆ ಪತ್ರಿಕೆಗೆ ಗ್ರೇಸ್ ಅಂಕ ಇದೆಯೋ? ಇಲ್ಲವೋ?

ಬೆಂಗಳೂರು, ಏಪ್ರಿಲ್ 23 : ದ್ವಿತೀಯ ಪಿಯುಸಿ ಗಣಿತ ಪ್ರಶ್ನೆ ಪತ್ರಿಕೆಗೆ ಕೃಪಾಂಕ ನೀಡುವ ವಿಚಾರ ಗೊಂದಲಕ್ಕೆ ಕಾರಣವಾಗಿದೆ. ಪಠ್ಯದ ಹೊರತಾದ 8 ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಪ್ರತಿಯಾಗಿ 21 ಕೃಪಾಂಕ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿಲ್ಲ.

ಗಣಿತ ಪತ್ರಿಕೆಯಲ್ಲಿ ಪಠ್ಯದ ಹೊರತಾದ 8 ಪ್ರಶ್ನೆಗಳಿತ್ತು ಎಂದು ಆರೋಪಿಸಲಾಗಿತ್ತು. ಸರ್ಕಾರ ಈ ಬಗ್ಗೆ ವರದಿ ನೀಡಲು ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಯಾವ ಪ್ರಶ್ನೆಗಳೂ ಪಠ್ಯದ ಹೊರತಾಗಿಲ್ಲ. ಕೃಪಾಂಕ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ. [ಪ್ರಶ್ನೆ ಪತ್ರಿಕೆ ಹಗರಣದಲ್ಲಿ ಕೋಕಾ ಪ್ರಯೋಗ, ಏನಿದು ಕೋಕಾ?]

puc

ಶುಕ್ರವಾರ ಗಣಿತ ಪ್ರಶ್ನೆ ಪತ್ರಿಕೆಗೆ 21 ಕೃಪಾಂಕ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಕೃಪಾಂಕ ನೀಡುವ ಸುದ್ದಿಯನ್ನು ತಳ್ಳಿ ಹಾಕಿದೆ. ಮೌಲ್ಯಮಾಪಕರಿಗೂ ಸಹ ಕೃಪಾಂಕ ನೀಡುವ ಕುರಿತು ಯಾವುದೇ ಸೂಚನೆ ನೀಡಿಲ್ಲ. [ಮುಷ್ಕರ ವಾಪಸ್, ಇಂದಿನಿಂದ ಪಿಯುಸಿ ಮೌಲ್ಯಮಾಪನ]

ಮಾಧ್ಯಮಗಳ ಜೊತೆ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ರಾಮೇಗೌಡ ಅವರು, 'ಗಣಿತ ಪ್ರಶ್ನೆಪತ್ರಿಕೆಯ ಯಾವುದೇ ಪಠ್ಯದ ಹೊರತಾಗಿಲ್ಲ. ಇಲಾಖೆಯಿಂದ ಯಾವುದೇ ಕೃಪಾಂಕ ನೀಡುವಂತೆ ಸೂಚಿಸಿಲ್ಲ. ಕೃಪಾಂಕದ ವಿಚಾರದ ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ. [ಏನು ಓದ್ಕೋಬೇಡಿ, ಪಾಸಾಗ್ತೀರಾ ಹೋಗಿ ಎಂದಿದ್ದ ಕಾಲೇಜು!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+