ಐಟಿ ಉದ್ಯೋಗಿಗಳಿಗೆ 14 ಗಂಟೆ ಕೆಲಸ, ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ

ಬೆಂಗಳೂರು, ಜುಲೈ 21: ಕರ್ನಾಟಕ ಸರ್ಕಾರಕ್ಕೆ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಪ್ರಸ್ತಾವನೆಯೊಂದನ್ನು ಸಲ್ಲಿಕೆ ಮಾಡಿವೆ. ಕೆಲಸದ ಅವಧಿಯನ್ನು 14 ಗಂಟೆಗಳಿಗೆ ವಿಸ್ತರಣೆ ಮಾಡಲು ಅವಕಾಶ ನೀಡುವಂತೆ ಇದರಲ್ಲಿ ಮನವಿ ಮಾಡಲಾಗಿದೆ. ಸರ್ಕಾರ ಇನ್ನೂ ಈ ಪಸ್ತಾವನೆ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಪ್ರಸ್ತುತ 12 ಗಂಟೆಗಳು ಇರುವ ಕೆಲಸದ ಅವಧಿಯನ್ನು 14 ಗಂಟೆಗಳು (12 ಗಂಟೆ + 2 ಗಂಟೆ ಹೆಚ್ಚುವರಿ ಕೆಲಸ) ವಿಸ್ತರಣೆ ಮಾಡುವ ಐಟಿ ಕಂಪನಿಗಳ ಪ್ರಸ್ತಾವನೆಗೆ ಐಟಿ ಉದ್ಯೋಗಿಗಳು ವಿರೋಧ ವ್ಯಕ್ತಪಸಿದ್ದಾರೆ. ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದ್ದಾರೆ.

it-employee

ಐಟಿ ಕಂಪನಿಗಳು 14 ಗಂಟೆಯ ಕೆಲಸದ ಅವಧಿ ವಿಸ್ತರಣೆ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯಿದೆ, 1961ಕ್ಕೆ ತಿದ್ದುಪಡಿ ತರಬೇಕು ಎಂದು ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಪ್ರಸ್ತಾವನೆಯಲ್ಲಿ ಮನವಿ ಮಾಡಿವೆ. ಐಟಿ ಕಂಪನಿಗಳ ಜೊತೆ ಮತ್ತೊಮ್ಮೆ ಮಾತುಕತೆ ನಡೆಸಿ, ಸರ್ಕಾರ ಈ ಕುರಿತು ತೀರ್ಮಾನಿಸುವ ನಿರೀಕ್ಷೆ ಇದೆ.

14 ಗಂಟೆಗಳ ಕೆಲಸ?: ಪ್ರಸ್ತುತ 10 ಗಂಟೆ + 2 ಗಂಟೆ ಹೆಚ್ಚುವರಿ ಕೆಲಸ ಸೇರಿ ಒಟ್ಟು 12 ಗಂಟೆಗಳ ಕಾಲ ಐಟಿ ಉದ್ಯೋಗಿಗಳು ಕೆಲಸ ನಿರ್ವಹಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಕೆಲವು ಐಟಿ ಉದ್ಯೋಗಿಗಳು ಇದಕ್ಕಿಂತ ಹೆಚ್ಚಿನ ಹೊತ್ತು ಕೆಲಸ ಮಾಡುತ್ತಾರೆ. ಆದರೆ ಈಗ ಐಟಿ ಕಂಪನಿಗಳು 12 ಗಂಟೆ ಕೆಲಸ + 2 ಗಂಟೆ ಹೆಚ್ಚುವರಿ ಕೆಲಸ ಸೇರಿ 14 ಗಂಟೆ ಕೆಲಸ ಮಾಡಲು ಕಾನೂನು ರೂಪಿಸಬೇಕು ಎಂದು ಮನವಿ ಮಾಡಿವೆ.

ಹೊಸ ಪ್ರಸ್ತಾವನೆಯಂತೆ ಐಟಿ ಉದ್ಯೋಗಿಗಳು, ಬಿಪಿಓಗಳಲ್ಲಿ 12 ಗಂಟೆಗೂ ಅಧಿಕ ಕೆಲಸ ಮಾಡಲು ಅವಕಾಶ ನೀಡಬೇಕು. ಅಲ್ಲದೇ ನಿಯಮಿತವಾಗಿ ಮೂರು ತಿಂಗಳು 125 ಗಂಟೆ ಮೀರದಂತೆ ಕೆಲಸ ಇರಬೇಕು ಎಂದು ಮನವಿ ಮಾಡಲಾಗಿದೆ. ಈ ಪ್ರಸ್ತಾವನೆ ಕುರಿತು ಸರ್ಕಾರ ಒಂದು ಸುತ್ತಿನ ಮಾತುಕತೆ ನಡೆಸಿದೆ. ಐಟಿ ಕಂಪನಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಈ ಕುರಿತು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿದೆ.

ಐಟಿ ಕಂಪನಿಗಳ ಈ ಪ್ರಸ್ತಾವನೆಗೆ ಆರಂಭದಲ್ಲಿಯೇ ಸಾಕಷ್ಟು ವಿರೋಧ ಕೇಳಿ ಬಂದಿದೆ. ಕರ್ನಾಟಕ ರಾಜ್ಯ ಐಟಿ/ ಐಟಿಇಎಸ್ ನೌಕರರ ಸಂಘ (ಕೆಐಟಿಯು) ಸಹ ಪ್ರಸ್ತಾವನೆಯನ್ನು ವಿರೋಧಿಸಿದೆ. ಈ ಪಸ್ತಾವನೆಗೆ ಒಪ್ಪಿಗೆ ನೀಡಿದರೆ ಕಂಪನಿಗಳು ಈಗಿರುವ 3 ಶಿಫ್ಟ್‌ಗಳಿಂದ 2 ಶಿಫ್ಟ್‌ಗಳಿಗೆ ಬದಲಾಗಲಿವೆ. ಆದ್ದರಿಂದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕೆಐಟಿಯು ಅಂದಾಜಿಸಿದೆ.

ಈಗಾಗಲೇ ಐಟಿ ಉದ್ಯೋಗಿಗಳು ಒತ್ತಡದಿಂದ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ವೇಳೆ 14 ಗಂಟೆ ಕೆಲಸದ ಅವಧಿಗೆ ಒಪ್ಪಿಗೆ ನೀಡಿದರೆ ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. ಈ ಕುರಿತು ಈಗಾಗಲೇ ನಡೆದಿರುವ ಹಲವು ಸಮೀಕ್ಷೆಗಳನ್ನು ಕೆಐಟಿಯು ಉಲ್ಲೇಖ ಮಾಡಿದೆ.

ಕೆಸಿಸಿಐ ವರದಿಯ ಪ್ರಕಾರ ಶೇ 45ರಷ್ಟು ಐಟಿ ಉದ್ಯೋಗಿಗಳು ಒತ್ತಡದ ಕಾರಣ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದಾರೆ. ಶೇ 55ರಷ್ಟು ಉದ್ಯೋಗಿಗಳು ದೈಹಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಒಂದು ವೇಳೆ ಐಟಿ ಕಂಪನಿಗಳ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದರೆ ಅವರ ಆರೋಗ್ಯ ಇನ್ನಷ್ಟು ಹದಗೆಡಲಿದೆ ಎಂದು ಕೆಐಟಿಯು ಹೇಳಿದೆ.

ಐಟಿ ಕಂಪನಿಗಳ ಉದ್ಯೋಗಿಗಳನ್ನು ಸರ್ಕಾರ ಯಂತ್ರದಂತೆ ನೋಡಬಾರದು. ಅವರು ಸಹ ಮನುಷ್ಯರು, 14 ಗಂಟೆಗಳ ಕೆಲಸದ ಅವಧಿಗೆ ಒಪ್ಪಿಗೆ ನೀಡುವುದು ಸರಿಯಲ್ಲ. ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿವರವಾದ ಅಧ್ಯಯನ ನಡೆಸಬೇಕು ಎಂದು ಐಟಿ ಉದ್ಯೋಗಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಕರ್ನಾಟಕ ಸರ್ಕಾರ 14 ಗಂಟೆ ಕೆಲಸದ ಅವಧಿ ವಿಸ್ತರಣೆಗೆ ಕಾನೂನು ಒಪ್ಪಿಗೆ ನೀಡುವ ಪ್ರಸ್ತಾವನೆಗೆ ಒಪ್ಪಿಲ್ಲ. ಆದರೆ ಐಟಿ ಕಂಪನಿಗಳ ಜೊತೆಗಿನ ಸಭೆಯಲ್ಲಿ ಯಾವ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ? ಎಂಬ ಕುರಿತು ಮಾಹಿತಿ ಇಲ್ಲ. ಶೀಘ್ರದಲ್ಲೇ ಐಟಿ ಕಂಪನಿಗಳ ಜೊತೆ ಸರ್ಕಾರ ಸಭೆಯನ್ನು ನಡೆಸುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+