ಕೊಪ್ಪಳದಲ್ಲಿ ಭೀಕರ ಅಪಘಾತ 12 ಸಾವು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೊಪ್ಪಳ, ಏಪ್ರಿಲ್ 26 : ಟಂಟಂ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸೇರಿದಂತೆ 12 ಜನರು ಮೃತಪಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ. ಅಪಘಾತದಲ್ಲಿ 5 ಜನರು ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ಸಂಜೆ ಕೊಪ್ಪಳ ಸಮೀಪದ ಹಲಗೇರಿ ಬಳಿ ಈ ಅಪಘಾತ ನಡೆದಿದೆ. ಮೃತಪಟ್ಟವರೆಲ್ಲ ಕೊಪ್ಪಳ ಜಿಲ್ಲೆಯ ಕುಕನೂರ ಗ್ರಾಮದವರು. ಹುಚ್ಚಿರೇಶ್ವರ ಕ್ಯಾಂಪ್‌ನಲ್ಲಿ ನಡೆದ ಮದುವೆ ಸಮಾರಂಭಕ್ಕೆ ಅಡುಗೆ ಮಾಡಿ ಬಡಿಸಲು ಬಂದಿದ್ದರು. ಗ್ರಾಮಕ್ಕೆ ಮರಳುವಾಗ ಈ ಅಪಘಾತ ಸಂಭವಿಸಿದೆ. [ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ]

accident

ಎಲ್ಲರೂ ತೆರಳುತ್ತಿದ್ದ ಟಂಟಂ ವಾಹನಕ್ಕೆ ಗದಗದಿಂದ ಕೊಪ್ಪಳ ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಪಕ್ಕದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಟಂಟಂ ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದೆ. [ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ. 5 ಜನರು ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

road accident

ಮೃತಪಟ್ಟವರ ವಿವರ : ಶಿವಮೂರ್ತಿ (26), ಗಂಗಮ್ಮ ಲಂಗಟಿ (50), ವೀರಪ್ಪ ವೀರಾಪುರ (35), ಕುಸುಮಾ ತಟ್ಟಿ (14), ನಾಗವೇಣಿ ತಟ್ಟಿ (13), ಬೀಬೀಜಾನ್ (40), ಅಶಾಭೀ ಬೀಬೀಜಾನ್ (18), ನಿರಂಜಿನಿ (32), ಸರೋಜಾ ಸಬರದ್ (40) ಉಳಿದವರ ಗುರುತು ಇನ್ಣೂ ಪತ್ತೆಯಾಗಿಲ್ಲ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಿದರು. [ಚಿತ್ರಗಳು : ದೀಪಕ್ ಜಾಧವ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
12 people were killed when the autorickshaw they were traveling in collided with a lorry near Halageri, Koppal district on April 25th Monday, evening.
Please Wait while comments are loading...