Humnabad Constituency : ಹುಮ್ನಾಬಾದ್ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಣಿಯಲು ಬಿಜೆಪಿ-ಜೆಡಿಎಸ್‌ ರಣ ತಂತ್ರ: ಈ ಬಾರಿ ಯಾರಿಗೆ ಜಯ?

ಹುಮ್ನಾಬಾದ್ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಒಂದು ತಾಲೂಕು ಕೇಂದ್ರ. ತಾಲ್ಲೂಕಿನಲ್ಲಿ ಹೈದರಾಬಾದ್-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಮತ್ತು ಗುಲ್ಬರ್ಗ-ಬೀದರ್ ರಾಜ್ಯ ಹೆದ್ದಾರಿ ಹಾದುಹೋಗಿವೆ. ಸುತ್ತಲ ತಾಲ್ಲೂಕು ಪಟ್ಟಣಗಳಿಗೆ ಇಲ್ಲಿಂದ ಮಾರ್ಗಸಂಪರ್ಕಗಳಿವೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿಗೆ ಹಿಂದೆ ಜಯಸಿಂಹ ನಗರ ಎಂಬ ಹೆಸರೂ ಇತ್ತು. ಆದರೆ, ನಿಜಾಮನ ಕಾಲದಿಂದ ಬಂದ ಹುಮ್ನಾಬಾದ್ ಹೆಸರು ಈಗಲೂ ಚಾಲ್ತಿಯಲ್ಲಿದೆ. ಲಿಂಗಾಯತ ಮತ್ತು ಮುಸ್ಲಿಂ ಸಮುದಾಯದವರು ಪ್ರಬಲವಾಗಿವೆ.

Homnabad constituency map

ಕೆಂಪು ಮಿಶ್ರಿತ ಮಣ್ಣಿನ ಭೂಮಿಯನ್ನು ತಾಲೂಕು ಹೊಂದಿದೆ. ಶೇಂಗಾ, ಜೋಳ, ಗೋಧಿ, ಕಡಲೆ, ಕಬ್ಬು, ತೊಗರಿ ಮುಂತಾದವುಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಪಶುಪಾಲನೆಯುಂಟು. ತಾಲ್ಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯೂ ಈ ಕಾರ್ಖಾನೆ ಪಕ್ಕದಲ್ಲೆ ಇಂಡಿಯ ಬ್ರಿವರಿ ಆಂಡ್ ಡಿಸ್ಟಿಲರಿ ಕಾರ್ಖಾನೆಯೂ ಇದೆ. ಚಿಟಗುಪ್ಪದಲ್ಲಿ ಖಂಡಸಾರಿ ಸಕ್ಕರೆ ಕಾರ್ಖಾನೆ, ಮರ ಕೊಯ್ಯುವ ಕಾರ್ಖಾನೆ ಮುಂತಾದವುಗಳಿವೆ.

ತಾಲ್ಲೂಕಿನಲ್ಲಿ ಕೈಮಗ್ಗದ ಬಟ್ಟೆ ತಯಾರಿಕೆ ಹೆಚ್ಚು. ಕೆಲವೊಂದು ರಾಸಾಯನಿಕ ಮತ್ತು ತಾಂತ್ರಿಕ ಕೈಗಾರಿಕಾ ಘಟಕಗಳಿದ್ದು, ತಾಲ್ಲೂಕು ಕೈಗಾರಿಕೆಯಲ್ಲಿ ಮುಂದುವರಿಯುವ ಪ್ರಯತ್ನ ಸಾಗಿದೆ. ತಾಲ್ಲೂಕಿನ ವಾಣಿಜ್ಯ-ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯಕವಾಗಿ ವಾಣಿಜ್ಯ ಸಹಕಾರಿ ಮತ್ತು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳೂ ಒಂದು ನಿಯಂತ್ರಿತ ಮಾರುಕಟ್ಟೆಯೂ ಇವೆ.

humnabad mla rajashekar patil

2013ರ ಚುನಾವಣೆಯಲ್ಲಿ ಶಾಸಕ ರಾಜಶೇಖರ ಪಾಟೀಲ 64,694 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್‌ನ ನಸಿಮೋದ್ದಿನ್ ಪಟೇಲ್ 40,194 ಮತಗಳನ್ನು ಪಡೆದಿದ್ದರು. 2018ರ ಚುನಾವಣೆಯಲ್ಲಿ ರಾಜಶೇಖರ ಪಾಟೀಲ ಅವರು ಬಿಜೆಪಿ ವಿರುದ್ಧ 31,814 ಮತಗಳ ಅಂತರದಿಂದ ಜಯ ಸಾಧಿಸಿದ್ದರು.

Humnabad Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ರಾಜಶೇಖರ ಬಿ ಪಾಟೀಲ (ಕಾಂಗ್ರೆಸ್ ) 74,945 ಸುಭಾಶ್ ಕಲ್ಲೂರ (ಬಿಜೆಪಿ ) 43,131
2013 ರಾಜಶೇಖರ್ ಬಿ ಪಾಟೀಲ್ (ಕಾಂಗ್ರೆಸ್ ) 64,694 ಎಂ ನಾಸೀನೊದ್ದಿನ್ ಪಾಟೀಲ್ (ಜೆಡಿಎಸ್ ) 40,194
2008 ರಾಜಶೇಖರ್ ಬಿ ಪಾಟೀಲ್ (ಕಾಂಗ್ರೆಸ್) 49,603 ಸುಭಾಷ್ ಕಲ್ಲೂರ್ ( ಬಿಜೆಪಿ) 27,867

ಇನ್ನು ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದ್ದು, ಹಿಂದಿನ ಮೂರು ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ದೊಡ್ಡ ಮಟ್ಟದಲ್ಲಿ ಹೋರಾಟ, ಪ್ರಚಾರ ನಡೆಸಿದರೂ ಈ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಯಿಂದ ಬಿಡಿಸಿಕೊಳ್ಳಲಾಗಿಲ್. ಇನ್ನೂ ಹಾಲಿ ಶಾಸಕರಾದ ರಾಜಶೇಖರ ಪಾಟೀಲ ಇಬ್ಬರು ಸಹೋದರರೂ ವಿಧಾನ ಪರಿಷತ್ ಸದಸ್ಯರಾಗಿರುವ ಕಾರಣ ಸಹಜವಾಗಿ ಕಾಂಗ್ರೆಸ್ ಬಲವಾಗಿ ಬೇರೂರಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಭದ್ರಕೋಟೆ ಭೇದಿಸಲು ಬಿಜೆಪಿ ಹಾಗೂ ಜೆಡಿಎಸ್‌ ಹೊಸ ತಂತ್ರಗಾರಿಕೆ ರೂಪಿಸುತ್ತಿವೆ. ಕುಟುಂಬದಲ್ಲಿ ಬಿರುಕು ಮೂಡಿಸಿ ಅವರದ್ದೇ ಕುಟುಂಬದ ಸದಸ್ಯರೊಬ್ಬರನ್ನು ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಸಿ, ತಮ್ಮ ಪಕ್ಷದ ಧ್ವಜ ಊರಲು ಪ್ರಯತ್ನ ನಡೆಸಿವೆ. ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಪಿ ಬಲ ಹೆಚ್ಚಿಸಿಕೊಳ್ಳಲು ಹಲವು ತಂತ್ರಗಾರಿಕೆಯನ್ನ ನಡೆಸುತ್ತಿವೆ.

bjp jds congress logos

ಹುಮನಾಬಾದ್ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿರುವ ರಾಜಶೇಖರ ಪಾಟೀಲ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್‌ ಧ್ವಜವನ್ನ ಹಾರಿಸುವ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅಬ್ಬರದ ಪ್ರಚಾರವನ್ನ ನಡೆಸಿದ್ದು, ಹಲವು ಸಲಹೆಗಳನ್ನ ನೀಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಪುತ್ರ ಸಿ.ಎಂ. ಫೈಜ್ ಅವರ ಹೆಸರು ಘೋಷಿಸಲಾಗಿದೆ. ಬಿಜೆಪಿ ಪ್ರಚಾರ ಆರಂಭಿಸಿದರೂ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಈವರೆಗೆ ಈ ಕ್ಷೇತ್ರಕ್ಕೆ ನಡೆದ 15 ಚುನಾವಣೆಗಳ ಪೈಕಿ ತಲಾ ಎರಡು ಬಾರಿ ಕಮ್ಯುನಿಸ್ಟ್ ಹಾಗೂ ಜೆಡಿಎಸ್‌ ಜಯಗಳಿಸಿವೆ. 1999ರಲ್ಲಿ ನಡೆದ ಚುನಾವಣೆಯಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಗೆದ್ದಿದೆ.

ಇನ್ನೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದ್ದು, ಹಾಲಿ ಕಾಂಗ್ರೆಸ್‌ ಶಾಸಕ ರಾಜಶೇಖರ ಪಾಟೀಲ ಸೋದರ ಸಂಬಂಧಿ ಸಿದ್ದು ಪಾಟೀಲ ಹಾಗೂ ಮಾಜಿ ಶಾಸಕ ಸುಭಾಷ ಕಲ್ಲೂ‌ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ಹೇಳಲಾಗಿದೆ.

ಸುಭಾಷ ಕಲ್ಲೂರ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಹಾಲಿ ಅಧ್ಯಕ್ಷರಾಗಿದ್ದಾರೆ. 2018ರ ಚುನಾವಣೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಅವರಿಗೆ ತೀವ್ರ ಸ್ಪರ್ಧೆ ಒಡ್ಡಿದ ಕಲ್ಲೂರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಅವರು ಈ ಬಾರಿ ಮತ್ತೆ ಟಿಕೆಟ್ ದೊರೆಯಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಇನ್ನೂ ಡಾ.ಸಿದ್ದು ಪಾಟೀಲ ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಬಿಜೆಪಿ ಯುವ ಕಾರ್ಯಕರ್ತರ ಪಡೆಯನ್ನ ಸಜ್ಜುಗೊಳಿಸುತ್ತಿದ್ದು, ಈ ಬಾರಿ ಕ್ಷೇತ್ರ ಪಡೆಯುವ ತವಕದಲ್ಲಿರುವ ಬಿಜೆಪಿ ಸಿದ್ದು ಪಾಟೀಲರಿಗೆ ಬಿಜೆಪಿ ಟಿಕೆಟ್ ಸಿಕ್ಕರೂ ಅಚ್ಚರಿ ಇಲ್ಲ ಎಂದು ಹೇಳಲಾಗಿದೆ.

ಹುಮ್ನಾಬಾದ್ ಕ್ಷೇತ್ರದ ಮತದಾರರ ವಿವರ

ಕ್ಷೇತ್ರದ ಒಟ್ಟು ಮತದಾರರು 2,33,577
ಪುರುಷ ಮತದಾರರು 1,21,884
ಮಹಿಳಾ ಮತದಾರರು 1,11,681
ತೃತೀಯ ಲಿಂಗಿಗಳು 12
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+