ಪುನೀತ ಯಾತ್ರೆ ಪ್ಯಾಕೇಜ್ ಘೋಷಿಸಿದ ಪ್ರವಾಸೋದ್ಯಮ ಇಲಾಖೆ

Posted By: Gururaj
Subscribe to Oneindia Kannada

ಕಲಬುರಗಿ, ನವೆಂಬರ್ 2 : ಪ್ರವಾಸೋದ್ಯಮ ಇಲಾಖೆ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ 'ಪುನೀತ ಯಾತ್ರೆ' ಎಂಬ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ. ಕಲಬುರಗಿಯಿಂದ 8 ಮಾರ್ಗಗಳಲ್ಲಿ ಈ ಯಾತ್ರೆ ಸಂಚಾರ ನಡೆಸಲಿದೆ.

ರಿಯಾಯಿತಿ ದರದ ಧಾರ್ಮಿಕ ಪ್ರವಾಸ 'ಪುನೀತ ಯಾತ್ರೆ'ಗೆ ಚಾಲನೆ

ಗುರುವಾರ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಅವರು ಈ ಕುರಿತು ಮಾಹಿತಿ ನೀಡಿದರು. '8 ಮಾರ್ಗಗಳಲ್ಲಿ ಸಾಗುವ ಪುನೀತ ಯಾತ್ರೆಗೆ ಆನ್ ಲೈನ್ ಮತ್ತು ಆಫ್‌ ಲೈನ್‌ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಇಂದಿನಿಂದಲೇ ಆರಂಭಿಸಲಾಗಿದೆ' ಎಂದರು.

Tourism department announces Puneeta Yatra packages

ಮಾರ್ಗಗಳ ವಿವರ : ಕಲಬುರಗಿ ನಗರ ವೀಕ್ಷಣೆ ಮತ್ತು ಗಾಣಗಾಪುರ (ಒಬ್ಬರಿಗೆ ದರ 180 ರೂ.), ನಾಗಾವಿ-ಸನ್ನತಿ ಸ್ಥೂಪ-ಕೋರಿ ಸಿದ್ದೇಶ್ವರ ದರ್ಶನ (390 ರೂ. ಒಬ್ಬರಿಗೆ) ಈ ಎರಡು ಮಾರ್ಗಗಳಲ್ಲಿ ಕೆಎಸ್‌ಟಿಡಿಎಸ್ ಬಸ್ಸುಗಳು ನಿತ್ಯ ಸಂಚಾರ ನಡೆಸಲಿವೆ. ಈ ಪ್ಯಾಕೇಜ್ ಸಾರಿಗೆ ಸೌಲಭ್ಯ ಮಾತ್ರ ಒಳಗೊಂಡಿವೆ.

ಉಳಿದ ಮಾರ್ಗಗಳು : ತಿರುಪತಿ-ಮಂಗಾಪುರ (3,400), ತಿರುಪತಿ-ಕಾಳಹಸ್ತಿ-ಶ್ರೀನಿವಾಸ ಮಂಗಾಪುರ (3,900), ಶ್ರೀಶೈಲ-ಮಹಾನಂದಿ-ಸಾಕ್ಷಿ ಗಣೇಶ (2,900) ವಾರಕ್ಕೆ ಎರಡು ಬಾರಿ ಸಚಾರ.

ಶಿರಡಿ-ನಾಸಿಕ್-ತ್ರಯಂಬಕೇಶ್ವರ-ಶನಿಸಿಂಗಾಪುರ (3,500) ವಾರಕ್ಕೆ ಒಮ್ಮೆ ಸಂಚಾರ. ಸಾರಿಗೆ, ವಸತಿ ಮತ್ತು ಶೀಘ್ರ ದರ್ಶನ ವ್ಯವಸ್ಥೆ ಇದರಲ್ಲಿ ಸೇರಿದೆ. ಊಟ-ಉಪಹಾರದ ವೆಚ್ಚವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಭರಿಸಬೇಕು.

'ಪುನೀತ ಯಾತ್ರೆ ಪ್ಯಾಕೇಜ್ ಯಶಸ್ವಿಯಾದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಇದೇ ಮಾದರಿಯ ಪ್ಯಾಕೇಜ್ ಆರಂಭಿಸಲಾಗುತ್ತದೆ' ಎಂದು ಸಚಿವರು ಹೇಳಿದರು. ಸದ್ಯ ಕಲಬುರಗಿ ಕೆಎಸ್‌ಟಿಡಿಸಿಯ ಯಾತ್ರಿ ನಿವಾಸದಿಂದ ಈ ಬಸ್ಸುಗಳು ಸಂಚಾರ ನಡೆಸಲಿವೆ.

ಪ್ಯಾಕೇಜ್ ಬಗ್ಗೆ ಮಾಹಿತಿ ಪಡೆಯಲು ಕ್ಲಿಕ್ ಮಾಡಿ www.kstdc.co/. ದೂರವಾಣಿ ಸಂಖ್ಯೆಗಳು 080-43344334, 08472-249919, 9611658770.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka tourism minister Priyanka Kharge announced Puneeta Yatra packages form Kalaburagi to various place. ಪುನೀತ ಯಾತ್ರೆ ಪ್ಯಾಕೇಜ್ ಘೋಷಿಸಿದ ಪ್ರವಾಸೋದ್ಯಮ ಇಲಾಖೆ
Please Wait while comments are loading...