ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ: ಗೆದ್ದವರ ಪಟ್ಟಿ

|
Google Oneindia Kannada News

ಕಲಬುರಗಿ, ಸೆಪ್ಟೆಂಬರ್ 7: ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡುಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೆ.6ರಂದು ಹೊರ ಬಂದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. 4 ಸ್ಥಾನ ಪಡೆದಿರುವ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆಗಳು ಕಂಡು ಬಂದಿದೆ.

2021ರ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಬಿಜೆಪಿ 23, ಕಾಂಗ್ರೆಸ್ 27, ಜೆಡಿಎಸ್ 4 ಇತರೆ 1 ಸ್ಥಾನಗಳಲ್ಲಿ ಗೆಲುವು.

Kalaburagi Municipal Election Results 2021: List of Winners and Losers
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ 55 ವಾರ್ಡ್(29 ಮ್ಯಾಜಿಕ್ ನಂಬರ್)
ವಾರ್ಡ್ ಸಂಖ್ಯೆ ವಿಜೇತರು ಪಕ್ಷ
01 ಪುತಳಿ ಬೇಗಂ ಕಾಂಗ್ರೆಸ್
02 ಸುನೀಲ್ ಮಚ್ಚಟ್ಟಿ ಬಿಜೆಪಿ
03 ಮೊಹ್ಮದ್ ಅಬ್ದುಲ್ ಹಮೀದ್ ಕಾಂಗ್ರೆಸ್
04 ರಿಯಾಸ್ ಅಹ್ಮದ್ ಕಾಂಗ್ರೆಸ್
05 ಗಂಗಮ್ಮ ಬಸವರಾಜ ಮುನ್ನಳ್ಳಿ ಬಿಜೆಪಿ
06 ಅರುಣಾದೇವಿ ಬಿಜೆಪಿ
07 ಕೃಷ್ಣಾ ನಾಯಕ ಬಿಜೆಪಿ
08 ಸಚಿನ ಹೊನ್ನಾ ಬಿಜೆಪಿ
09 ಸುನೀಲ್ ಬನಶೆಟ್ಟಿ ಬಿಜೆಪಿ
10 ಹೀನಾ ಬೇಗಂ ಕಾಂಗ್ರೆಸ್
11 ಪ್ರಭು ಹಾದಿಮನಿ ಬಿಜೆಪಿ
12 ಪ್ರಕಾಶ ಕಪನೂರ್ ಕಾಂಗ್ರೆಸ್
13 ತಹಶೀನಾ ಬೇಗಂ ಕಾಂಗ್ರೆಸ್
14 ಅಲಿಖಾನ್ ಮಹ್ಮದ್ ಖಾನ್ ಕಾಂಗ್ರೆಸ್
15 ನಜ್ಮಾ ಬೇಗಂ ಕಾಂಗ್ರೆಸ್
16 ಪರ್ವೀನ್ ದೇಸಾಯಿ ಕಾಂಗ್ರೆಸ್
17 ಗಣೇಶ್ ಮುಧೋಳ ಕಾಂಗ್ರೆಸ್
18 ಸೈಯದ್ ಅಹ್ಮದ್ ಕಾಂಗ್ರೆಸ್
19 ಪರ್ವಿನ್ ಬೇಗಂ ಕಾಂಗ್ರೆಸ್
20 ಫರ್ಹನಾಜ್ ಇಸ್ಮಾಯಿಲ್ ಖಾನ್ ಕಾಂಗ್ರೆಸ್
21 ಅಜ್ಮಲ್ ಗೋಲಾ ಕಾಂಗ್ರೆಸ್
22 ಸೈಯದ್ ನಜ್ಮೋದಿನ್ ಕಾಂಗ್ರೆಸ್
23 ದಿಗಂಬರ್ ಮಾಗನಗೇರಿ ಬಿಜೆಪಿ
24 ಪ್ರಿಯಾಂಕಾ ಭೂವಿ ಬಿಜೆಪಿ
25 ಶಿವನಂದ ಪಿಸ್ತಿ ಬಿಜೆಪಿ
26 ಅನುಪಮಾ ರಮೇಶ್ ಕಮಕನೂರ ಕಾಂಗ್ರೆಸ್
27 ಸಾಜೀದ್ ಕಲ್ಯಾಣಿ ಜೆಡಿಎಸ್
28 ಸೈಯಿದಾ ನಸ್ರಿನ್ ಕಾಂಗ್ರೆಸ್
29 ಮಹ್ಮದ್ ಇಮ್ರಾನ್ ಕಾಂಗ್ರೆಸ್
30 ಮೇಘನಾ ಕಳಸ್ಕರ್ ಬಿಜೆಪಿ
31 ಶಾಂತಬಾಯಿ ಹಲ್ಲಮಠ ಬಿಜೆಪಿ
32 ಯಂಕಮ್ಮ ಬಿಜೆಪಿ
33 ರಾಗಮ್ಮ ಕಾಂಗ್ರೆಸ್
34 ವಿಶಾಲ ನವರಂಗ ಜೆಡಿಎಸ್
35 ವಿಜಯಕುಮಾರ ಸೇವಲಾನಿ ಬಿಜೆಪಿ
36 ಶಂಬುಲಿಂಗ್ ಬಳಬಟ್ಟಿ ಪಕ್ಷೇತರ
37 ರೇಣುಕಾ ರಾಮು ಗುಮ್ಮಟ ಬಿಜೆಪಿ
38 ಗುರುರಾಜ ಪಟ್ಟಣ ಬಿಜೆಪಿ
39 ರೇಣುಕಾ ಪರುಶರಾಮ ಕಾಂಗ್ರೆಸ್
40 ಶೇಖ್ ಹುಸೇನ್ ಅಬ್ದುಲ್ ಕರೀಂ ಕಾಂಗ್ರೆಸ್
41 ಇರ್ಫಾನಾ ಪರ್ವಿನ್ ಕಾಂಗ್ರೆಸ್
42 ಅಲೀಮುದ್ದಿನ್ ಪಟೇಲ್ ಜೆಡಿಎಸ್
43 ವರ್ಷಾರಾಜು ಜಾನೆ ಕಾಂಗ್ರೆಸ್
44 ಸಚಿನ್ ಶಿರವಾಳ ಕಾಂಗ್ರೆಸ್
45 ತೃಪ್ತಿ ಲಾಕೆ ಕಾಂಗ್ರೆಸ್
46 ವಿಶಾಲ ಧರ್ಗಿ ಬಿಜೆಪಿ
47 ವಾನಮ್ಮ ಬಾಬು ಬಿಜೆಪಿ
48 ವೀರಣ್ಣ ಹೊನ್ನಳ್ಳಿ ಬಿಜೆಪಿ
49 ಲತಾ ರಾಥೋಡ್ ಕಾಂಗ್ರೆಸ್
50 ಮಲ್ಲಿಕಾರ್ಜುನ ಉದನೂರ ಬಿಜೆಪಿ
51 ಪಾರ್ವತಿ ರಾಜೀವ್ ದೇವದುರ್ಗ ಬಿಜೆಪಿ
52 ಶೋಭಾ ದೇಸಾಯಿ ಬಿಜೆಪಿ
53 ಯಲ್ಲಪ್ಪ ನಾಯಕೋಡಿ ಕಾಂಗ್ರೆಸ್
54 ನಿಂಗಮ್ಮ ಚಂದಪ್ಪ ಕಟ್ಟಿಮನಿ ಕಾಂಗ್ರೆಸ್
55 ಅರ್ಚನಾ ಬಸವರಾಜ ಬಿಜೆಪಿ

ಶೇ.49.92ರಷ್ಟು ಮತದಾನ:
ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡುಗಳ ಸಾರ್ವತ್ರಿಕ ಚುನಾವಣೆಯಲ್ಲಿ ಅಂತಿಮವಾಗಿ ಶೇ.49.92ರಷ್ಟು ಮತದಾನವಾಗಿತ್ತು ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ ಮಹಾಂತೇಶ ಮುಡಬಿ ತಿಳಿಸಿದ್ದಾರೆ.

55 ವಾರ್ಡುಗಳ 533 ಮತಗಟ್ಟೆಗಳಲ್ಲಿ ಇ.ವಿ.ಎಂ.ಯಂತ್ರದ ಮೂಲಕ ನಡೆದ ಮತದಾನದಲ್ಲಿ 259732 ಪುರುಷ ಮತದಾರರ ಪೈಕಿ 135911, 261632 ಮಹಿಳಾ ಮತದಾರರ ಪೈಕಿ 124440 ಹಾಗೂ 169 ಇತರೆ ಮತದಾರರ ಪೈಕಿ 1 ಮತದಾರರು ಸೇರಿ ಒಟ್ಟು 260352 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ 521533 ಮತದಾರರು ಮತದಾನಕ್ಕೆ ಅರ್ಹತೆ ಹೊಂದಿದ್ದರು.

ಇಲ್ಲಿ ಲಿಂಗವಾರು ಪ್ರಮಾಣ ನೋಡಿದಾಗ ಪುರುಷರು ಶೇ.52.32 ಮತ್ತು ಮಹಿಳೆಯರು ಶೇ. 47.56 ರಷ್ಟು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನೂ ವಾರ್ಡ್ ಸಂಖ್ಯೆ-1 ಶೇ.62.14 ರೊಂದಿಗೆ ಅತಿ ಹೆಚ್ಚು ಪ್ರತಿಶತ ಮತದಾನವಾದರೆ ವಾರ್ಡ್ ಸಂಖ್ಯೆ-53 ಶೇ.40.71 ರೊಂದಿಗೆ ಅತಿ ಕಡಿಮೆ ಮತದಾನವಾಗಿತ್ತು.

ವಿಜಯೋತ್ಸವ ಆಚರಣೆಗೆ ಬ್ರೇಕ್:
ಮತ ಎಣಿಕೆ ಸಂದರ್ಭದಲ್ಲಿ ಅಥವಾ ಮತಗಳ ಎಣಿಕೆ ಕಾರ್ಯದ ಮುಕ್ತಾಯದ ನಂತರ ಹಾಗೂ ಫಲಿತಾಂಶ ಘೋಷಣೆಯಾದ ತರುವಾಯ ವಿಜಯಶಾಲಿಯಾದ ಅಭ್ಯರ್ಥಿಯ ಕಾರ್ಯಕರ್ತರು, ಬೆಂಬಲಿಗರು ವಿಜಯೋತ್ಸವ ಆಚರಿಸುವ ಸಂಭವಗಳಿದ್ದು ಮತ್ತು ಈ ಸಮಯದಲ್ಲಿ ಪರಾಭವಗೊಂಡ ಅಭ್ಯರ್ಥಿಯ ಕಾರ್ಯಕರ್ತರು, ಬೆಂಬಲಿಗರು ಹಾಗೂ ವಿಜಯಶಾಲಿ ಅಭ್ಯರ್ಥಿಯ ಕಾರ್ಯಕರ್ತರು ಮತ್ತು ಬೆಂಬಲಿಗರ ವೈಮನಸ್ಸು, ಜಗಳ ಮತ್ತು ಘರ್ಷಣೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಮತ್ತು ಶಾಂತಿಯುತ ಮತ ಎಣಿಕೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತಿಯ ದಂಡ ಸಹಿಂತೆ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

English summary
Kalaburagi Municipal Corporation Election Results 2021: Here is the list of Winners and Losers. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X