ಕಲಬುರಗಿ : ಸಿದ್ದಲಿಂಗ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

Posted By: ನಮ್ಮ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ನವೆಂಬರ್ 5 : ಶ್ರೀರಾಮ ಸೇನೆಯ ಗೌರವಾಧ್ಯಕ್ಷ, ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಪೊಲೀಸರು ಅಕ್ಟೋಬರ್ 30ರಂದು ಸ್ವಾಮೀಜಿಯನ್ನು ಬಂಧಿಸಲು ಹೋದಾರ ಹೈಡ್ರಾಮ ನಡೆದಿತ್ತು. ಪೊಲೀಸರು ಮೇಲೆಯೇ ಕಲ್ಲು ತೂರಾಟ ನಡೆಸಲಾಗಿತ್ತು.

ಅಂದೋಲಾ ಮಠದ ಸ್ವಾಮೀಜಿ ಬಂಧನ, ಕಲ್ಲು ತೂರಾಟ, ಪೊಲೀಸರಿಗೆ ಗಾಯ

ಕಲಬುರಗಿ ಜಿಲ್ಲಾ ನ್ಯಾಯಾಲಯ ಶ್ರೀರಾಮ ಸೇನೆ ಗೌರವಾಧ್ಯಕ್ಷ, ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಕಲಬುರಗಿ ಜಿಲ್ಲಾ ಕಾರಾಗೃಹದಿಂದ ಸ್ವಾಮೀಜಿ ಬಿಡುಗಡೆಗೊಂಡಿದ್ದಾರೆ.

Kalaburagi court grants bail to Siddalinga Swamy

ಸ್ವಾಮೀಜಿ ಮೇಲೆ ಕೊಲೆಯತ್ನಕ್ಕೆ ಪ್ರಚೋದನೆ ಸೇರಿದಂತೆ ವಿವಿಧ ಆರೋಪಗಳಿವೆ. ಅಕ್ಟೋಬರ್ 30ರಂದು ಜೇವರ್ಗಿ ಪೊಲಿಸರು ಸ್ವಾಮೀಜಿಯನ್ನು ಬಂಧಿಸಿದ್ದರು. ಸಿದ್ದಲಿಂಗ ಸ್ವಾಮೀಜಿ ಬೆಂಬಲಿಗರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು, ಕಲ್ಲು ತೂರಾಟ ನಡೆಸಿದ್ದರು.

ಕಲಬುರಗಿ ಕಾರಾಗೃಹದಿಂದ ಸ್ವಾಮೀಜಿ ಬಿಡುಗಡೆ ಆಗುತ್ತಿದ್ದಂತೆ ಶ್ರೀರಾಮ ಸೇವೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಅದ್ದೂರಿಯಾಗಿ, ಘೋಷಣೆಗಳನ್ನು ಕೂಗುತ್ತಾ ಅವರನ್ನು ಸ್ವಾಗತ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi court granted conditional bail to Siddalinga Swamy, head of Karuneshwara Mutt, Jevargi taluk, Kalaburagi district. He was arrested on the charge of assaulting a person belonging to a minority community.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ