ಕಲಬುರಗಿ: ಕಿದ್ವಾಯಿ ಸಂಸ್ಥೆಗೆ ‘ಧರ್ಮಶಾಲಾ’ ಕೊಟ್ಟ ಇನ್ಫೋಸಿಸ್

ಬೆಂಗಳೂರು ನವೆಂಬರ್ 15: ಇನ್ಫೋಸಿಸ್‍ನ ಸಮಾಜಸೇವಾ ವಿಭಾಗವಾಗಿರುವ ಇನ್ಫೋಸಿಸ್ ಫೌಂಡೇಷನ್ ಕಿದ್ವಾಯಿ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನ ಜತೆ ಒಪ್ಪಂದದಂತೆ ಕಲಬುರಗಿಯಲ್ಲಿ ಧರ್ಮಶಾಲಾವೊಂದನ್ನು ನಿರ್ಮಾಣ ಮಾಡಿದೆ.

ಈ ಧರ್ಮಶಾಲಾವನ್ನು ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಕ್ಯಾನ್ಸರ್ ರೋಗಿಗಳು ಹಾಗೂ ಅವರ ಜತೆಗೆ ಇರುವವರ ವಾಸಕ್ಕಾಗಿ ಬಳಸಲಾಗುತ್ತದೆ, ಇದನ್ನು ಕಲಬುರಗಿ ನಾಗರಿಕರು ಮಾತ್ರವಲ್ಲದೆ, ಪಕ್ಕದ ಜಿಲ್ಲೆಗಳಾದ ಬೀದರ್, ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿಯ ಜನರೂ ಬಳಸಿಕೊಳ್ಳಲಿದ್ದಾರೆ.

ಇನ್ಫೋಸಿಸ್ ಫೌಂಡೇಷನ್ 2001ರಿಂದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಜತೆ ಹಲವಾರು ಯೋಜನೆಗಳಲ್ಲಿ ಜತೆಯಾಗಿ ಕೆಲಸ ನಿರ್ವಹಿಸಿದೆ. ಈ ಹಿಂದೆ ಚಂಡಿಗಡ ಹಾಗೂ ಬೆಂಗಳೂರಿನ 'ಧರ್ಮಶಾಲಾ' ನಿರ್ಮಾಣ ಯೋಜನೆಗೂ ಫೌಂಡೇಷನ್ ನೆರವು ನೀಡಿದೆ.

Infosys dharmashala at Kalaburagi, Kidwai Caner institute

ಈ ಧರ್ಮಶಾಲಾದಲ್ಲಿ ಸುಮಾರು 1000 ರೋಗಿಗಳು ವಾಸವಿರಲು ಸಾಧ್ಯವಿದೆ. ಧರ್ಮಶಾಲಾ ಮಾತ್ರವಲ್ಲದೆ 2017-18ರಲ್ಲಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನ ಆವರಣದಲ್ಲಿ ಆಪರೇಷನ್ ಥಿಯೇಟರ್ ಒಂದನ್ನು ಫೌಂಡೇಷನ್ ನಿರ್ಮಿಸಿಕೊಟ್ಟಿದೆ.

ಅದೇ ರೀತಿ ಒಡಿಶಾದಲ್ಲಿ ಮಕ್ಕಳ ಚಿಕಿತ್ಸಾ ಆಸ್ಪತ್ರೆ, ಮಹಾರಾಷ್ಟ್ರದಲ್ಲಿ ಆಸ್ಪತ್ರೆಯೊಂದರ ವಿಭಾಗದ ನಿರ್ಮಾಣ, ಕರ್ನಾಟಕದಲ್ಲಿ ಮೆಡಿಕಲ್ ವಾರ್ಡ್ ಹಾಗೂ ಪ್ಯಾಥಾಲಜಿ ಲ್ಯಾಬ್ ನಿರ್ಮಾಣ, ಅರುಣಾಚಲ ಪ್ರದೇಶ ಮತ್ತು ಕರ್ನಾಟಕದ ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆಗಳ ಖರೀದಿ ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಂಡಿದೆ.

ಸಮುದಾಯಕ್ಕೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಫೌಂಡೇಷನ್ ಸದಾ ಭರವಸೆಯನ್ನು ಒದಗಿಸುತ್ತಿದೆ ಹಾಗೂ ರೋಗಿಗಳ ಎಲ್ಲ ಅಗತ್ಯಗಳು ಹಾಗೂ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+