WWE Superstar Bray Wyatt: ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಹೃದಯಾಘಾತದಿಂದ ನಿಧನ- 36 ನೇ ವಯಸ್ಸಿಗೆ ದುರಂತ
ವಾಷಿಂಗ್ಟನ್, ಆಗಸ್ಟ್ 25: ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಸೂಪರ್‌ಸ್ಟಾರ್ ಎಂದೇ ಖ್ಯಾತರಾಗಿದ್ದ ಬ್ರೇ ವ್ಯಾಟ್ ( 36 ) ಅವರು ಗುರುವಾರ ನಿಧನರಾಗಿದ್ದಾರೆ. ಈ ಕುರಿತ ಮಾಹಿತಿಯನ್ನು ಟ್ರಿಪಲ್ ಎಚ್ ಕಂಪನಿಯ ಮುಖ್ಯ ನಿರ್ವಹಣಾ ಅಧಿಕಾರಿ ಪಾಲ್ ಲೆವೆಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪಾಲ್ ಲೆವೆಸ್ಕ್ ಪ್ರಕಾರ, ಬ್ರೇ ವ್ಯಾಟ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವಿಚಾರವಾಗಿ X (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಪೋಸ್ಟ್ ಮಾಡಿದ್ದಾರೆ.

'WWE ಹಾಲ್ ಆಫ್ ಫೇಮ್‌ನ ಮೈಕ್ ರೊಟುಂಡಾ ಅವರಿಂದ ಕರೆಯನ್ನು ಸ್ವೀಕರಿಸಿದೆ. ಅವರು ನಮ್ಮ WWE ಕುಟುಂಬದ ಸದಸ್ಯರಾದ ವಿಂಡ್‌ಹ್ಯಾಮ್ ರೊಟುಂಡಾ ( ಬ್ರೇ ವ್ಯಾಟ್ ಎಂದೂ ಕರೆಯುತ್ತಾರೆ ) ಅವರ ದುರಂತ ಸಾವಿನ ಸುದ್ದಿಯನ್ನು ನಮಗೆ ತಿಳಿಸಿದರು. ವ್ಯಾಟ್ ಅವರು ಇಂದು ಅನಿರೀಕ್ಷಿತವಾಗಿ ನಿಧನರಾದರು. ನಾವು ಅವರ ಕುಟುಂಬದೊಂದಿಗೆ ಇದ್ದೇವೆ. ಈ ಸಮಯದಲ್ಲಿ ಪ್ರತಿಯೊಬ್ಬರೂ ಅವರ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ ಎಂದು ಪಾಲ್ ಲೆವೆಸ್ಕ್ ತಿಳಿಸಿದ್ದಾರೆ.
ಇಎಸ್‌ಪಿಎನ್ ಸುದ್ದಿವಾಹಿನಿಯ ಪ್ರಕಾರ, ವಿಂಡ್‌ಹ್ಯಾಮ್ ರೋಟುಂಡಾ ಅವರ ನಿಜವಾದ ಹೆಸರು ಬ್ರೇ ವ್ಯಾಟ್. ಬಹಿರಂಗಪಡಿಸದ ಆರೋಗ್ಯ ಸಮಸ್ಯೆಯೊಂದಿಗೆ ಇದ್ದ ಕಾರಣ WWE ನಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಅವರು ನಿಷ್ಕ್ರಿಯರಾಗಿದ್ದರು.
ಅವರು 2009 ರಿಂದ WWE ನಲ್ಲಿ ಭಾಗವಹಿಸಿದ್ದರು. 2021 ಮತ್ತು 2022 ರಲ್ಲಿ ಅವರು ಗುಪ್ತ ಖಾಯಿಲೆಯಿಂದ ಬಳಲುತ್ತಿದ್ದರು. ರೊಟುಂಡಾ ಕಳೆದ ಸೆಪ್ಟೆಂಬರ್‌ನಲ್ಲಿ WWE ಗೆ ವಾಪಸಾದರು. ಈಗ ಅವರ ಸಾವು ಕೋಟ್ಯಂತರ ಅಭಿಮಾನಿಗಳನ್ನು ನೋವಿಗೆ ದೂಡಿದೆ.

ಬ್ರೇ ವ್ಯಾಟ್ WWE ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. WWE ಚಾಂಪಿಯನ್‌ಶಿಪ್ ಒಮ್ಮೆ ಮತ್ತು ಯುನಿವರ್ಸಲ್ ಚಾಂಪಿಯನ್‌ಶಿಪ್‌ಗಳನ್ನು ಎರಡು ಬಾರಿ ಗೆದ್ದಿದ್ದಾರೆ. ಆಗಸ್ಟ್ 2018 ರಿಂದ ಏಪ್ರಿಲ್ 2019 ರ ವರೆಗೆ ಸ್ವಲ್ಪ ಕಾಲದ ಅವಧಿಗೆ ವಿರಾಮವನ್ನು ತೆಗೆದುಕೊಂಡಿದ್ದರು.
ಬ್ರೇ ವ್ಯಾಟ್ ಅವರ ತಂದೆ ಹಾಲ್ ಆಫ್ ಫೇಮ್‌ನ ಮೈಕ್ ರೊಟುಂಡಾ. ಅವರ ಅಜ್ಜ, ಬ್ಲ್ಯಾಕ್‌ಜಾಕ್ ಮುಲ್ಲಿಗನ್ ಅವರು ವೃತ್ತಿಪರ ಕುಸ್ತಿಪಟುವಾಗಿದ್ದರು. ಬ್ರೇ ವ್ಯಾಟ್ ಅವರು ತಮ್ಮ ಕುಟುಂಬದ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಅವರ ಚಿಕ್ಕಪ್ಪ ಬ್ಯಾರಿ ಮತ್ತು ಕೆಂಡಾಲ್ ವಿಂಡ್‌ಹ್ಯಾಮ್ ಕೂಡ ಕುಸ್ತಿ ಜಗತ್ತಿನಲ್ಲಿ ಖ್ಯಾತನಾಮರು ಎಂದು ಸುದ್ದಿಸಂಸ್ಥೆ ಔಟ್‌ಲೆಟ್ ತಿಳಿಸಿದೆ.












Click it and Unblock the Notifications