Get Updates
Get notified of breaking news, exclusive insights, and must-see stories!

ಜಗತ್ತು ಅಂತ್ಯವಾಗುವ ಆ 8 ಸಂಭವನೀಯ ವರ್ಷಗಳು!

Recommended Video

      World ends with these 8 predictions with 8 different years | Oneindia Kannada

      ಪ್ರಳಯದ ದಿನಾಂಕ ಮುಂದೂಡಲಾಗಿದೆ! ಬಹುಶಃ ಈ ಸುದ್ದಿ ಕೇಳಿ ನಿಟ್ಟುಸಿರುಬಿಟ್ಟವರಿಗಿಂತ, ಇಂಥ ಸುದ್ದಿಯನ್ನು ಅದೆಷ್ಟು ಬಾರಿ ಕೇಳಿದ್ದೇವೋ ಎಂದು ಮೂಗುಮುರಿದವರೇ ಹೆಚ್ಚು! ಪ್ರತಿವರ್ಷ ಕನಿಷ್ಠವೆಂದರೆ ಒಂದು ದಿನ 'ಪ್ರಳಯ'ದ ಗುಲ್ಲೇಳುತ್ತದೆ. ಕೊನೆಗೆ ಏನೂ ಆಗದೆ ಆ ಸುದ್ದಿ ಮರೆತುಹೋಗುತ್ತದೆ.

      ಸೆಪ್ಟೆಂಬರ್ 23 ಕಳೆಯಿತು. ಡೇವಿಡ್ ಮೀಡೆ ಎಂಬ ಸಂಖ್ಯಾಶಾಸ್ತ್ರಜ್ಞನ ಲೆಕ್ಕಾಚಾರ ಹೇಳಹೆಸರಿಲ್ಲದಂತಾಯ್ತ. ಆದರೆ ಪ್ರಳಯದ ವದಂತಿಗೆ ಇಷ್ಟಕ್ಕೇ ಪೂರ್ಣವಿರಾಮ ಬೀಳುತ್ತದೆಯೇ ಎಂದರೆ ಖಂಡಿತ ಇಲ್ಲ. ಈಗಾಗಲೇ ಹಲವು ಸಂಖ್ಯಾಶಾಸ್ತ್ರಜ್ಞರು, ಧಾರ್ಮಿಕ ಮುಖಂಡರು ಭವಿಷ್ಯದಲ್ಲಿ ಯಾವ್ಯಾವ ದಿನ ಪ್ರಳಯವಾಗಬಹುದು ಎಂಬುದನ್ನು ಬರೆದಿಟ್ಟಿದ್ದಾರೆ!

      ಹೌದು, ಇವನ್ನೆಲ್ಲ ಯಾವ ಆಧಾರದ ಮೇಲೆ ಬರೆದಿದ್ದು ಎಂಬುದು ಗೊತ್ತಿಲ್ಲ. ಆದರೆ ಭವಿಷ್ಯದಲ್ಲಿ ಜಗತ್ತು ನಾಶವಾಗುವ ದಿನಗಳು ಯಾವ್ಯಾವವು ಎಂಬುದನ್ನು ಬೇರೆ ಬೇರೆ ಸಂಖ್ಯಾಶಾಸ್ತ್ರಜ್ಞರು, ಧಾರ್ಮಿಕ ಮುಖಂಡರು ಪತ್ತೆಹಚ್ಚಿದ್ದಾರೆ. ಅವುಗಳಲ್ಲಿ ಪ್ರಮುಖ 8 ಇಸವಿಗಳು ಇಲ್ಲಿವೆ.

      2020

      2020

      ಜೀನ್ ಡಿಕ್ಸನ್ ಎಂಬ ಅಮೆರಿಕದ ಚಿಂತಕನೊಬ್ಬ 2020 ರಲ್ಲಿ ಭಯಂಕರ ಯುದ್ಧವೊಂದು ಸಂಭವಿಸಲಿದ್ದು, ಆ ಯುದ್ಧದ ನಂತರ ಜೀಸಸ್ ಕ್ರೈಸ್ತ ಮತ್ತೆ ಅವತಾರವೆತ್ತಿ, ಕ್ರೈಸ್ತ ವಿರೋಧಿಗಳನ್ನೂ, ಸೈತಾನರನ್ನೂ ಸೋಲಿಸುತ್ತಾನೆ. 2010 ರಿಂದ 2037 ರೊಳಗೆ ಈ ಘಟನೆ ನಡೆಯುತ್ತದೆಂದಿದ್ದಾರೆ!

      2021

      2021

      ಎಫ್ ಕೆಂಟನ್ ಬೆಶೋರ್ ಎಂಬ ಅಮೆರಿಕದ ಪಾದ್ರಿಯೊಬ್ಬರು ಈ ಮೊದಲೂ ಒಂದೆರಡು ಬಾರಿ ಜಗತ್ತಿನ ಅಂತ್ಯದ ದಿನಾಂಕ ನೀದಿದ್ದರಾದರೂ, ಅದ್ಯಾವುದೂ ಸತ್ಯವಾಗಿರಲಿಲ್ಲ. ಇದೀಗ 2021 ರಲ್ಲಿ ಜಗತ್ತಿನ ಅಂತ್ಯವಾಗಲಿದ್ದು, 2020 ರಿಂದ 2037 ರ ಒಳಗೆ ಜೀಸಸ್ ಕ್ರೈಸ್ತ ಅವತಾರವೆತ್ತುತ್ತಾನೆಂದು ಹೇಳಿದ್ದಾರೆ.

      2026

      2026

      ಮೆಸೈ ಫೌಂಡೇಶನ್ ಇಂಟರ್ನಾಶನಲ್ ಎಂಬ ಸಂಸ್ಥೆಯ ಅಂದಾಜಿನ ಪ್ರಕಾರ 2026 ರಲ್ಲಿ ಕ್ಷುದ್ರಗ್ರಹಗಳ ದಾಳಿಯಿಂದ ಜಗತ್ತು ನಾಶವಾಗುತ್ತದೆ!

      2060

      2060

      ಐಸಾಕ್ ನ್ಯೂಟನ್ ಎಂಬ ಭೌತ ಶಾಸ್ತ್ರಜ್ಞರೊಬ್ಬರ ಪ್ರಕಾರ 2060 ರಂದು ಜಗತ್ತಿನ ಅಂತ್ಯವಾಗುತ್ತದೆ. ಬೈಬಲ್ ಅನ್ನು ಸಂಪೂರ್ಣ ಅಧ್ಯಯನ ಮಾಡಿ ನೀಡಿದ ಸೂಚನೆ ಇದು ಎಂದು ಅವರೇ ಹೇಳಿಕೊಂಡಿದ್ದಾರೆ!

      2129

      2129

      ಸುನ್ನಿ ಪಂಗಡಕ್ಕೆ ಸೇರಿದ ಧಾರ್ಮಿಕ ಮುಖಂಡ ಸೈದ್ ನುರ್ಸಿ ಅವರ ಪ್ರಕಾರ ಜಗತ್ತು 2129 ರಲ್ಲಿ ಅಂತ್ಯವಾಗುತ್ತದೆಯಂತೆ!

      2239

      2239

      ಆರ್ಥೊಡಾಕ್ಸ್ ಜುಡಿಸಮ್ ಪ್ರಕಾರ ವಿಶ್ವದ ಅಂತ್ಯ 2239 ರಿಂದ ಆರಂಭವಾಗಿ, 1000 ವರ್ಷಗಳಲ್ಲಿ ಸಂಪೂರ್ಣ ನಾಶವಾಗುತ್ತದೆ.

      2280

      2280

      ಈಜಿಫ್ಟ್-ಅಮೆರಿಕನ್ ಜೀವರಸಾಯನ ಶಾಸ್ತ್ರಜ್ಞ ರಶದ್ ಖಾಲಿಫಾ ಪ್ರಕಾರ 2280 ರ ಹೊತ್ತಿಗೆ ಜಗತ್ತು ನಾಶವಾಗುತ್ತದೆ. ಖುರಾನ್ ಅನ್ನು ಅಭ್ಯಸಿಸಿ ತಾನು ಈ ಸೂಚನೆ ನೀಡುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ.

      11120

      11120

      ಕೆನೆಡಿಯನ್ ತತ್ವಶಾಸ್ತ್ರಜ್ಞರೊಬ್ಬರ ಪ್ರಕಾರ 11120 ರಲ್ಲಿ ಸಂಪೂರ್ಣ ಮಾನವ ಸಮಾಜದ ಅಂತ್ಯವಾಗುತ್ತದೆ! ಇದುವರೆಗೂ ನೀಡಿದ ನೂರಾರು ಭವಿಷ್ಯವಾಣಿಗಳೆಲ್ಲ ಸುಳ್ಳಾಗಿರುವಾಗ ಜನರು ಇವನ್ನೂ 10 ರಲ್ಲಿ 11 ಎಂದು ಪರಿಗಣಿಸಿದರೆ ಅಚ್ಚರಿಯೇನಿಲ್ಲ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+